ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪುತ್ತೂರು ತಾಲೂಕು ಪಂ. ಕಾರ್ಯನಿರ್ವಹಣಾಧಿಕಾರಿ ವಿರುದ್ಧ ದೌರ್ಜನ್ಯ ಆರೋಪ

ಆನಾರೋಗ್ಯ ನಿಮಿತ್ತ ಸರಕಾರಿ ಅಂಗಡಿಗೆ ಕಟ್ಟದ ಬಾಡಿಗೆ ಕಟ್ಟಿಲ್ಲ ಎಂದು ಅಂಗಡಿಯನ್ನು ಏಲಂ ಮಾಡಿ ದೌರ್ಜನ್ಯ ಎಸಗಿದ ಆರೋಪ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾ| ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವಿರುದ್ಧ ಕೇಳಿಬಂದಿದೆ.
04:37 PM Feb 19, 2024 IST | Ashitha S

ಪುತ್ತೂರು: ಆನಾರೋಗ್ಯ ನಿಮಿತ್ತ ಸರಕಾರಿ ಅಂಗಡಿಗೆ ಕಟ್ಟದ ಬಾಡಿಗೆ ಕಟ್ಟಿಲ್ಲ ಎಂದು ಅಂಗಡಿಯನ್ನು ಏಲಂ ಮಾಡಿ ದೌರ್ಜನ್ಯ ಎಸಗಿದ ಆರೋಪ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾ| ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವಿರುದ್ಧ ಕೇಳಿಬಂದಿದೆ.

Advertisement

ಅಂಗಡಿಯಿಂದ ಹೊರ ಹಾಕಲ್ಪಟ್ಟ ಹೇಮಲತಾ ಎನ್ನುವ ಮಹಿಳೆ ಈ ಆರೋಪ ಮಾಡಿದ್ದಾರೆ. ಮಹಿಳೆಯ ಪತಿ ರಾಜ್ ಬಪ್ಪಳಿಗೆ ಎಂಬವರಿಂದ ನ್ಯಾಯಕ್ಕಾಗಿ ಮಾಧ್ಯಮಗಳ ಮೊರೆ ಹೋಗಿದ್ದಾರೆ.

ಹೇಮಲತಾ ಎಂಬುವವರಿಗೆ ಈ ಅಂಗಡಿ ಏಲಂ ಆಗಿತ್ತು. ʼಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿ ದಾಖಲಾಗಿದ್ದೆ. ಸುಮಾರು 72 ಸಾವಿರ ರೂಪಾಯಿ ಬಾಡಿಗೆ ಬಾಕಿಯಿತ್ತು.
ಆರು ತಿಂಗಳ ಸಮಯಾವಕಾಶ ಕೋರಿ ದ.ಕ. ಜಿಲ್ಲಾ ಪಂಚಾಯತ್ ಸಿಇಒ ಸೇರಿದಂತೆ ಪುತ್ತೂರು ಇ.ಒ ರಿಗೂ ಮನವಿ ಮಾಡಲಾಗಿದೆ. ಆದರೂ ಉದ್ಧೇಶಪೂರ್ವಕವಾಗಿ ಅಂಗಡಿಯನ್ನು ತೆರವುಗೊಳಿಸಲಾಗಿದೆ. ಏಲಂ ಪಡೆಯುವ ಮೊದಲು 1 ಲಕ್ಷ ರೂಪಾಯಿ ಅಡ್ವಾನ್ಸ್ ನೀಡಲಾಗಿದೆ. ಬಾಕಿ ಬಾಡಿಗೆಗಿಂತ ಜಾಸ್ತಿ ಅಡ್ವಾಸ್ ಹಣವಿತ್ತು. ಆದರೂ ಯಾವುದೇ ಸೂಚನೆ ನೀಡದೆ ಅಂಗಡಿಯೊಳಗಿನ ಸಾಮಾಗ್ರಿಗಳನ್ನೂ ಏಲಂ ಮಾಡಿದ್ದಾರೆ. ಲಕ್ಷಾಂತರ ಮೌಲ್ಯದ ಸಾಮಾಗ್ರಿಗಳನ್ನು ಏಲಂ ಮಾಡಿ ಅನ್ಯಾಯ ಮಾಡಲಾಗಿದೆ ಎಂದು ಮಹಿಳೆಯ ಪತಿ ರಾಜ್ ಬಪ್ಪಳಿಗೆ ಆರೋಪ ಮಾಡಿದ್ದಾರೆ.

Advertisement

 

Advertisement
Tags :
crimeKARNATAKALatestNewsNewsKannadaPOLICEದೌರ್ಜನ್ಯಪುತ್ತೂರುಮಂಗಳೂರು
Advertisement
Next Article