For the best experience, open
https://m.newskannada.com
on your mobile browser.
Advertisement

100ನೇ ಪಂದ್ಯದಲ್ಲಿ ಕಣಕ್ಕಿಳಿದು ವಿಶೇಷ ದಾಖಲೆ ಬರೆದ ‌ಆರ್. ಅಶ್ವಿನ್

ಧರ್ಮಶಾಲಾದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ರವಿಚಂದ್ರನ್ ಅಶ್ವಿನ್ 100 ಟೆಸ್ಟ್​ ಪಂದ್ಯಗಳನ್ನಾಡಿದ ವಿಶೇಷ ದಾಖಲೆ ಬರೆದಿದ್ದಾರೆ.
10:16 AM Mar 07, 2024 IST | Ashitha S
100ನೇ ಪಂದ್ಯದಲ್ಲಿ ಕಣಕ್ಕಿಳಿದು ವಿಶೇಷ ದಾಖಲೆ ಬರೆದ ‌ಆರ್  ಅಶ್ವಿನ್

ಹಿಮಾಚಲ ಪ್ರದೇಶ:  ಧರ್ಮಶಾಲಾದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ರವಿಚಂದ್ರನ್ ಅಶ್ವಿನ್ 100 ಟೆಸ್ಟ್​ ಪಂದ್ಯಗಳನ್ನಾಡಿದ ವಿಶೇಷ ದಾಖಲೆ ಬರೆದಿದ್ದಾರೆ.

Advertisement

ಅಲ್ಲದೆ ಈ ಸಾಧನೆ ಮಾಡಿದ ಭಾರತದ 14ನೇ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್ ಸೇರಿದಂತೆ 13 ಆಟಗಾರರು ಈ ವಿಶೇಷ ಸಾಧನೆ ಮಾಡಿದ್ದರು.

2011 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ಮೂಲಕ ಟೆಸ್ಟ್​ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದ ಆಶ್ವಿನ್ ಇದುವರೆಗೆ 100 ಟೆಸ್ಟ್ ಪಂದ್ಯಗಳಲ್ಲಿ 187 ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಈ ವೇಳೆ ಒಟ್ಟು 507 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಹಾಗೆಯೇ 35 ಬಾರಿ 5 ವಿಕೆಟ್ ಪಡೆದಿದ್ದಾರೆ.

Advertisement

ಇನ್ನು ಬ್ಯಾಟಿಂಗ್​ನಲ್ಲಿ 3309 ರನ್​ ಕಲೆಹಾಕಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಪರ 500+ ವಿಕೆಟ್ ಹಾಗೂ 3 ಸಾವಿರ ರನ್ ಕಲೆಹಾಕಿದ ಏಕೈಕ ಆಟಗಾರನಾಗಿ ಗುರುತಿಸಿಕೊಂಡಿಸಿದ್ದಾರೆ.

ಧರ್ಮಶಾಲಾದಲ್ಲಿ ನಡೆಯುತ್ತಿರುವ ಈ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ಔಪಚಾರಿಕ ಪಂದ್ಯವಾಗಿದ್ದರೂ ಅಶ್ವಿನ್​ಗೆ ವಿಶೇಷ ಮ್ಯಾಚ್. ಈ ಮ್ಯಾಚ್​ನಲ್ಲಿ ಗೆಲ್ಲುವ ಮೂಲಕ ಅಶ್ವಿನ್​ಗೆ ಸ್ಮರಣೀಯ ಗೆಲುವಿನ ಉಡುಗೊರೆ ನೀಡಲು ಟೀಮ್ ಇಂಡಿಯಾ ಪ್ಲ್ಯಾನ್ ರೂಪಿಸಿದೆ.

Advertisement
Tags :
Advertisement