For the best experience, open
https://m.newskannada.com
on your mobile browser.
Advertisement

ನಿವೃತ್ತಿ ಬಗ್ಗೆ ಸ್ಪಷ್ಟನೆ ನೀಡಿದ ಸ್ಟಾರ್‌ ಟೆನಿಸಿಗ ರಫೆಲ್‌ ನಡಾಲ್‌

ಸ್ಟಾರ್‌ ಟೆನಿಸಿಗ, 22 ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ರಫೆಲ್‌ ನಡಾಲ್‌ ಕಳೆದ ಒಂದು ವರ್ಷದಿಂದ ಗಾಯದ ಸಮಸ್ಯೆಯಿಂದಾಗಿ ಟೆನಿಸ್​ ಕೋರ್ಟ್​ನಿಂದ ದೂರ ಉಳಿದಿದ್ದಾರೆ. ಮುಂದಿನ ವರ್ಷವೂ ಅವರು ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಕಣಕ್ಕಿಳಿಯುವುದು ಅನುಮಾನ ಎನ್ನಲಾಗಿದೆ. ಇದರ ಮಧ್ಯೆ ಅವರು ತಮ್ಮ ನಿವೃತ್ತಿ ವಿಚಾರವಾಗಿ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.
05:09 PM Dec 08, 2023 IST | Gayathri SG
ನಿವೃತ್ತಿ ಬಗ್ಗೆ ಸ್ಪಷ್ಟನೆ ನೀಡಿದ ಸ್ಟಾರ್‌ ಟೆನಿಸಿಗ ರಫೆಲ್‌ ನಡಾಲ್‌

ಫ್ರಾನ್ಸ್​: ಸ್ಟಾರ್‌ ಟೆನಿಸಿಗ, 22 ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ರಫೆಲ್‌ ನಡಾಲ್‌ ಕಳೆದ ಒಂದು ವರ್ಷದಿಂದ ಗಾಯದ ಸಮಸ್ಯೆಯಿಂದಾಗಿ ಟೆನಿಸ್​ ಕೋರ್ಟ್​ನಿಂದ ದೂರ ಉಳಿದಿದ್ದಾರೆ. ಮುಂದಿನ ವರ್ಷವೂ ಅವರು ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಕಣಕ್ಕಿಳಿಯುವುದು ಅನುಮಾನ ಎನ್ನಲಾಗಿದೆ. ಇದರ ಮಧ್ಯೆ ಅವರು ತಮ್ಮ ನಿವೃತ್ತಿ ವಿಚಾರವಾಗಿ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.

Advertisement

37 ವರ್ಷದ ನಡಾಲ್, "ನಾನು ಈಗಲೇ ನಿವೃತ್ತಿ ಘೋಷಿಸಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ‘ಮುಂದೆ ಏನಾಗಬಹುದೆಂದು ಈಗಲೇ ಹೇಳಲು ಸಾಧ್ಯವಿಲ್ಲ. ನಾನೇ ನನಗೊಂದು ಅವಕಾಶ ನೀಡಬೇಕಿದೆ. ಹಿಂದೆಯೂ ಅನೇಕ ಸಲ ಗಾಯದಿಂದ ತೇಚರಿಸಿ ಟೆನಿಸ್​ ಅಂಗಳಕ್ಕೆ ಮರಳಿ ಟ್ರೋಫಿ ಗೆದ್ದಿದ್ದೇನೆ. ದೈಹಿಕವಾಗಿ ನಾನು ಗಟ್ಟಿಯಾಗಿದ್ದು ಆಡುವ ಮನಸ್ಸು ಇದ್ದಾಗ ನಾನೇಕೆ ಈಗಲೇ ನಿವೃತ್ತಿಗೆ ಕಾಲ ನಿಗದಿಪಡಿಸಲಿ” ಎಂದು ಹೇಳುವ ಮೂಲಕ ತಮ್ಮ ನಿವೃತ್ತಿ ಸದ್ಯಕ್ಕಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ.

ನಾನು ನಿರಂತರವಾಗಿ ಆಡಲು ಬಯಸುತ್ತೇನೆ. ಆದರೆ ಸತತ ಗಾಯಗಳ ನಡುವೆ ಆಡುವುದು ಜಟಿಲವಾದಾಗ ಕಾರ್ಯ. ಕಳೆದ ಕೆಲವು ತಿಂಗಳುಗಳಲ್ಲಿ ನಾನು ಟೆನಿಸ್ ಅಂಗಣಕ್ಕೆ ಹಿಂತಿರುಗಲು ಕಷ್ಟಪಟ್ಟಿದ್ದೇನೆ. ಚೇತರಿಸಿಕೊಳ್ಳಲು ಮತ್ತು ಪುನಶ್ಚೇತನಕ್ಕೆ ಸಮಯ ತೆಗೆದುಕೊಳ್ಳಲು ಬಯಸಿದ್ದೇನೆ. ನಾನು ಹಿಂದಿರುಗುವ ದಿನಾಂಕವನ್ನು ಈಗಲೇ ಹೇಳುವುದು ಕೂಡ ಕಷ್ಟ. ಮಾನಸಿಕವಾಗಿ ಮತ್ತು ದೈಹಿಕವಾಗಿ ಸಿದ್ಧಗೊಂಡ ದಿನ ಆಟಕ್ಕೆ ಮರಳುತ್ತೇನೆ. 2024ರ ಋತುವನ್ನು ಉತ್ತಮವಾಗಿ ಪ್ರಾರಂಭಿಸುವುದು ನನ್ನ ಗುರಿ ಎಂದು ಚಾಂಪಿಯನ್ ಟೆನಿಸ್ ಆಟಗಾರ ನಡಾಲ್ ಹೇಳಿಕೊಂಡಿದ್ದಾರೆ.

Advertisement

ಇನ್ನೊಂದು ಮುಖ್ಯವಾದ ವಿಚಾರವೆಂದರೇ, 4 ತಿಂಗಳ ದಿಂದೆ ಟೆನಿಸ್​ ದಿಗ್ಗಜ ರಫೆಲ್‌ ನಡಾಲ್‌ ಅವರನ್ನು ಐಟಿ ಸಂಸ್ಥೆ ಇನ್ಫೋಸಿಸ್ ಬ್ರ್ಯಾಂಡ್‌ ಅಂಬಾಸಿಡರ್ ಆಗಿ ನೇಮಿಸಿತ್ತು. ಮುಂದಿನ ಮೂರು ವರ್ಷಗಳ ಕಾಲ ನಡಾಲ್​ ಅವರು ಇನ್ಫೋಸಿಸ್​ನ ಬ್ರ್ಯಾಂಡ್‌ ಅಂಬಾಸಿಡರ್ ಆಗಿರಲಿದ್ದಾರೆ.

Advertisement
Tags :
Advertisement