ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬಾಯ್ತಪ್ಪಿ ಡಿಕೆಶಿಯನ್ನು ಸಿಎಂ ಎಂದು ಕರೆದ ರಾಹುಲ್ ಗಾಂಧಿ

ಲೋಕಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗಲಿದ್ದಾರೆ ಎನ್ನುವ ಹಲವು ಚರ್ಚೆಗಳ ನಡುವೆ ರಾಹುಲ್ ಗಾಂಧಿ ಅವರು ಬಾಯ್ತಪ್ಪಿ ಡಿಕೆಶಿಯನ್ನು ಸಿಎಂ ಎಂದು ಮಾತು ಭಾರೀ ಚರ್ಚೆಗೆ ಕಾರಣವಾಗಿದೆ.
06:13 PM Apr 17, 2024 IST | Chaitra Kulal

ಕೋಲಾರ: ಲೋಕಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗಲಿದ್ದಾರೆ ಎನ್ನುವ ಹಲವು ಚರ್ಚೆಗಳ ನಡುವೆ ರಾಹುಲ್ ಗಾಂಧಿ ಅವರು ಬಾಯ್ತಪ್ಪಿ ಡಿಕೆಶಿಯನ್ನು ಸಿಎಂ ಎಂದು ಮಾತು ಭಾರೀ ಚರ್ಚೆಗೆ ಕಾರಣವಾಗಿದೆ.

Advertisement

ಮಾಲೂರು ತಾಲೂಕಿನ ಚೊಕ್ಕಂಡಹಳ್ಳಿ ಗೇಟ್ ನಲ್ಲಿ ಬುಧವಾರ ಸಂಜೆ ನಡೆದ ಕಾಂಗ್ರೆಸ್ ಬೃಹತ್ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕರ್ನಾಟಕ ಜನರಿಗೆ ನಮಸ್ಕಾರ ಎಂದು ಕನ್ನಡದಲ್ಲಿ ಮಾತು ಆರಂಭಿಸಿದರು. ಆ ಬಳಿಕ ಕಾಂಗ್ರೆಸ್ ಪ್ರಬಲ ನಾಯಕರಿಬ್ಬರ ಹುದ್ದೆಗಳನ್ನೇ ಬದಲಿಸಿ ಸಂಭೋದಿಸಿದರು.

ಖರ್ಗೆ ಜಿ, ಕಾಂಗ್ರೆಸ್ ಅಧ್ಯಕ್ಷ ಸಿದ್ದರಾಮಯ್ಯ ಜಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿ, ಕೆ.ಎಚ್. ಮುನಿಯಪ್ಪ ಜಿ ಎಂದು ಭಾಷಣ ಆರಂಭಿಸಿದರು. ಇದು ಬಿಜೆಪಿ, ಜೆಡಿಎಸ್ ಮತ್ತು ಟ್ರೋಲ್ ಮಾಡುವವರಿಗೆ ದೊಡ್ಡ ಆಹಾರವಾಗಿ ಪರಿಣಮಿಸಿದೆ.

Advertisement

ತಮ್ಮ ಭಾಷಣದ ಉದ್ದಕ್ಕೂ ಬಿಜೆಪಿ ಮತ್ತು ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರಾದರೂ ಎಲ್ಲಕ್ಕಿಂತ ಹೆಚ್ಚು ಆದ್ಯತೆ ಅವರು ಅರಿವಿಗೆ ಬಾರದೆ ಹುದ್ದೆಗಳ ಬದಲಾವಣೆ ಮಾಡಿ ಸಂಬೋಧಿಸಿರುವುದು ಎಲ್ಲರ ಚರ್ಚೆಗೆ ಕಾರಣವಾಗಿದೆ ಬಿಟ್ಟಿದೆ.

Advertisement
Tags :
ElectionsLatestNewsLOK SABHANewsKarnatakaRAHUL GANDHIಕೋಲಾರಡಿಕೆಶಿ
Advertisement
Next Article