ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ನಾಯಿ ತಿನ್ನಲಿಲ್ಲ ಎಂದು ಅದೇ ಬಿಸ್ಕತ್ತನ್ನು ಕಾರ್ಯಕರ್ತನಿಗೆ ಕೊಟ್ಟ ರಾಹುಲ್

ಭಾರತ್​ ಜೋಡೋ ನ್ಯಾಯ ಯಾತ್ರೆ ಸಂದರ್ಭದಲ್ಲಿ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ನಾಯಿಗೆ ಹಾಕಿದ್ದ ಬಿಸ್ಕತ್ತನ್ನೇ ತೆಗೆದು ಕಾರ್ಯಕರ್ತನಿಗೆ ನೀಡಿರುವ ವಿಡಿಯೋ ವೈರಲ್ ಆಗಿದೆ.
11:06 AM Feb 06, 2024 IST | Ashitha S

ದೆಹಲಿ: ಭಾರತ್​ ಜೋಡೋ ನ್ಯಾಯ ಯಾತ್ರೆ ಸಂದರ್ಭದಲ್ಲಿ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ನಾಯಿಗೆ ಹಾಕಿದ್ದ ಬಿಸ್ಕತ್ತನ್ನೇ ತೆಗೆದು ಕಾರ್ಯಕರ್ತನಿಗೆ ನೀಡಿರುವ ವಿಡಿಯೋ ವೈರಲ್ ಆಗಿದೆ.

Advertisement

ರಾಹುಲ್ ಗಾಂಧಿ ಅವರ ರೋಡ್​ ಶೋ ವೇಳೆ ಅವರ ಜತೆ ಒಂದು ನಾಯಿಯೂ ಇತ್ತು, ಅದಕ್ಕೆ ರಾಹುಲ್ ಗಾಂಧಿ ಬಿಸ್ಕತ್ತು ಹಾಕುತ್ತಿದ್ದರು, ಆದರೆ ಆ ನಾಯಿ ತಿನ್ನುತ್ತಿರಲಿಲ್ಲ, ಅದೇ ಸಮಯದಲ್ಲಿ ಕಾರ್ಯಕರ್ತರೊಬ್ಬರು ರಾಹುಲ್ ಗಾಂಧಿಯನ್ನು ಮಾತನಾಡಿಸಿದರು ಆಗ ರಾಹುಲ್ ನಾಯಿಗೆ ಹಾಕಿದ್ದ ಬಿಸ್ಕತ್ತಲ್ಲೇ ಒಂದು ಬಿಸ್ಕತ್ತನ್ನು ತೆಗೆದು ಕಾರ್ಯಕರ್ತನಿಗೆ ನೀಡಿದ್ದರು. ಈ ವಿಡಿಯೋ ವೈರಲ್ ಆಗಿದೆ.

ಇನ್ನು ಎಕ್ಸ್​ನಲ್ಲಿ ಬಿಜೆಪಿ ಐಟಿ ಸೆಲ್​ನ ಅಮಿತ್ ಮಾಳವೀಯ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಬೂತ್ ಏಜೆಂಟರನ್ನು ನಾಯಿಗಳಿಗೆ ಹೋಲಿಸಿದ್ದರು. ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಅಧ್ಯಕ್ಷರು ತನ್ನ ಕಾರ್ಯಕರ್ತನನ್ನು ನಾಯಿಯಂತೆ ನಡೆಸಿಕೊಂಡರೆ ಅಂತಹ ಪಕ್ಷವು ಕಣ್ಮರೆಯಾಗುವುದು ಪಕ್ಕಾ ಎಂದು ಮಾಳವೀಯ ಬರೆದಿದ್ದಾರೆ.

Advertisement

Advertisement
Tags :
CongressGOVERNMENTindiaLatestNewsNewsKannadaನವದೆಹಲಿನಾಯಿಬೆಂಗಳೂರು
Advertisement
Next Article