ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ದೇವಾಲಯ ಪ್ರವೇಶಿಸದಂತೆ ತಡೆ: ರಾಹುಲ್ ಗಾಂಧಿ ಅಸಮಾಧಾನ

ಕಾನೂನು ಮತ್ತು ಸುವ್ಯವಸ್ಥೆಯ ಬಿಕ್ಕಟ್ಟಿನ ಸಂದರ್ಭದಲ್ಲಿ ಎಲ್ಲರೂ ವೈಷ್ಣವ ಸನ್ಯಾಸಿ ಶ್ರೀಮಂತ ಶಂಕರದೇವ ಅವರ ಜನ್ಮಸ್ಥಳಕ್ಕೆ ಹೋಗುತ್ತಾರೆ. ಆದರೆ ನಾನು ಮಾತ್ರ ಹೋಗಬಾರದು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅಸಮಾಧಾನ ಹೊರ ಹಾಕಿದರು.
05:14 PM Jan 22, 2024 IST | Ashitha S

 ಅಸ್ಸಾಂ: ಕಾನೂನು ಮತ್ತು ಸುವ್ಯವಸ್ಥೆಯ ಬಿಕ್ಕಟ್ಟಿನ ಸಂದರ್ಭದಲ್ಲಿ ಎಲ್ಲರೂ ವೈಷ್ಣವ ಸನ್ಯಾಸಿ ಶ್ರೀಮಂತ ಶಂಕರದೇವ ಅವರ ಜನ್ಮಸ್ಥಳಕ್ಕೆ ಹೋಗುತ್ತಾರೆ. ಆದರೆ ನಾನು ಮಾತ್ರ ಹೋಗಬಾರದು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅಸಮಾಧಾನ ಹೊರ ಹಾಕಿದರು.

Advertisement

ಶಂಕರದೇವರ ಜನ್ಮಸ್ಥಳಕ್ಕೆ ಹೊರಟಿದ್ದ ರಾಹುಲ್ ಗಾಂಧಿ ಅವರನ್ನು ಮಾರ್ಗ ಮಧ್ಯೆ ಹೈಬರ್ಗಾಂವ್‌ನಲ್ಲಿ ತಡೆಹಿಡಿಯಲಾಯಿತು. ಇದನ್ನು ವಿರೋಧಿಸಿ ರಾಹುಲ್‌ ಗಾಂಧಿ, ಹಿರಿಯ ಕಾಂಗ್ರೆಸ್‌ ನಾಯಕರು ಮತ್ತು ಬೆಂಬಲಿಗರೊಂದಿಗೆ ಅಲ್ಲಿಯೇ ಧರಣಿ ನಡೆಸಿದರು. ಪಕ್ಷದ ಸಂಸದ ಗೌರವ್‌ ಗೊಗೊಯ್‌ ಮತ್ತು ಬಟದ್ರಾವ ಶಾಸಕ ಸಿಬಾಮೋನಿ ಬೋರಾ ಅವರು ರಾಹುಲ್ ಗಾಂಧಿ ಪರವಾಗಿ ಶಂಕರದೇವರ ಜನ್ಮಸ್ಥಳಕ್ಕೆ ತೆರಳಿದರು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್‌ ಗಾಂಧಿ, 'ನಾನು ಶಂಕರದೇವರ ತತ್ವಶಾಸ್ತ್ರವನ್ನು ನಂಬುತ್ತೇನೆ. ಅಲ್ಲದೆ, ನಾವು ಜನರನ್ನು ಒಗ್ಗೂಡಿಸುವುದರಲ್ಲಿ ನಂಬಿಕೆ ಇಟ್ಟಿದ್ದೇವೆ, ದ್ವೇಷವನ್ನು ಹರಡುವುದರಲ್ಲಿ ಅಲ್ಲ' ಎಂದು ಹೇಳಿದರು.

Advertisement

Advertisement
Tags :
BJPCongressindiaLatestNewsNewsKannadaನವದೆಹಲಿರಾಹುಲ್ ಗಾಂಧಿ
Advertisement
Next Article