ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮಲಯಾಳಂನ ‘ಟರ್ಬೋ’ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ

ಮಲಯಾಳಂ ನಟ ಮಮ್ಮೂಟಿ ಅವರೇ ನಿರ್ಮಾಣ ಮಾಡಿ  ನಟಿಸುತ್ತಿರುವ ‘ಟರ್ಬೋ’ ಸಿನಿಮಾದಲ್ಲಿ ಕನ್ನಡದ ಜನಪ್ರಿಯ ನಟ ರಾಜ್ ಬಿ. ಶೆಟ್ಟಿ ಸೇರ್ಪಡೆ ಆಗಿದ್ದಾರೆ. ಮಮ್ಮೂಟಿ ಕಡೆಯಿಂದಲೇ ಈ ಬಗ್ಗೆ ಅಧಿಕೃತ ಘೋಷಣೆ ಆಗಿದೆ. ‘ರಾಜ್ ಬಿ. ಶೆಟ್ಟಿ ಅವರಿಗೆ ಸ್ವಾಗತ’ ಎಂದು ಬರೆಯಲಾಗಿದೆ.
08:27 PM Nov 22, 2023 IST | Ashika S

ಬೆಂಗಳೂರು: ಮಲಯಾಳಂ ನಟ ಮಮ್ಮೂಟಿ ಅವರೇ ನಿರ್ಮಾಣ ಮಾಡಿ  ನಟಿಸುತ್ತಿರುವ ‘ಟರ್ಬೋ’ ಸಿನಿಮಾದಲ್ಲಿ ಕನ್ನಡದ ಜನಪ್ರಿಯ ನಟ ರಾಜ್ ಬಿ. ಶೆಟ್ಟಿ ಸೇರ್ಪಡೆ ಆಗಿದ್ದಾರೆ. ಮಮ್ಮೂಟಿ ಕಡೆಯಿಂದಲೇ ಈ ಬಗ್ಗೆ ಅಧಿಕೃತ ಘೋಷಣೆ ಆಗಿದೆ. ‘ರಾಜ್ ಬಿ. ಶೆಟ್ಟಿ ಅವರಿಗೆ ಸ್ವಾಗತ’ ಎಂದು ಬರೆಯಲಾಗಿದೆ.

Advertisement

ರಾಜ್ ಬಿ ಶೆಟ್ಟಿ ಅವರು ‘ಒಂದು ಮೊಟ್ಟೆಯ ಕಥೆ’ ಸಿನಿಮಾ ಮೂಲಕ ಜನಪ್ರಿಯತೆ ಪಡೆದರು. ಇದಾದ ಬಳಿಕ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ, ನಿರ್ದೇಶಿಸಿದ್ದಾರೆ. ಈಗ ಪರಭಾಷೆಯವರೂ ಅವರ ಟ್ಯಾಲೆಂಟ್​ನ ಗುರುತಿಸಿದ್ದಾರೆ. ಅವರು ನಟಿಸಿ, ನಿರ್ದೇಶಿಸಿರುವ ‘ಸ್ವಾತಿ ಮುತ್ತಿನ ಮಳೆಹನಿಯೇ’ ಈ ವಾರ ರಿಲೀಸ್ ಆಗುತ್ತಿದೆ.

‘ಟರ್ಬೋ’ ಸಿನಿಮಾ ವೈಶಾಖ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ವೈಶಾಖ್ ಹಾಗೂ ಮಮ್ಮೂಟಿ ಜೊತೆ ಅವರು ‘ಪೊಕಿರಿ ರಾಜ’ ಹಾಗೂ ‘ಮಧುರ ರಾಜ’ ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಈ ಸಿನಿಮಾ ಆ್ಯಕ್ಷನ್ ಕಾಮಿಡಿ ಶೈಲಿಯಲ್ಲಿ ಮೂಡಿಬರುತ್ತಿದೆ. ‘ಟರ್ಬೋ’ ಚಿತ್ರವನ್ನು ದುಲ್ಕರ್ ಸಲ್ಮಾನ್ ಪ್ರೊಡಕ್ಷನ್ ಹೌಸ್ ಹಂಚಿಕೆ ಮಾಡಲಿದೆ.

Advertisement

Advertisement
Tags :
‘ಟರ್ಬೋ’LatetsNewsNewsKannadaಮಮ್ಮೂಟಿಮಲಯಾಳಂರಾಜ್ ಬಿ.ಶೆಟ್ಟಿ
Advertisement
Next Article