For the best experience, open
https://m.newskannada.com
on your mobile browser.
Advertisement

IPL: ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧ ರಾಜಸ್ತಾನ್​​ ರಾಯಲ್ಸ್​ ಗೆ ಜಯ

ಜೈಪುರ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​ ​ 4ನೇ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧ ರಾಜಸ್ತಾನ್​​ ರಾಯಲ್ಸ್​ ತಂಡ ಗೆದ್ದು ಬೀಗಿದೆ. 
08:41 PM Mar 24, 2024 IST | Ashika S
ipl  ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧ ರಾಜಸ್ತಾನ್​​ ರಾಯಲ್ಸ್​ ಗೆ ಜಯ

ಜೈಪುರ: ಇಂದು ಜೈಪುರ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​ ​ 4ನೇ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧ ರಾಜಸ್ತಾನ್​​ ರಾಯಲ್ಸ್​ ತಂಡ ಗೆದ್ದು ಬೀಗಿದೆ.

Advertisement

ಟಾಸ್​ ಗೆದ್ದು ಫಸ್ಟ್​ ಬ್ಯಾಟಿಂಗ್​ ಮಾಡಿದ ರಾಜಸ್ತಾನ್​ ರಾಯಲ್ಸ್​ ತಂಡದ ಪರ ಓಪನರ್​ ಆಗಿ ಬಂದ ಜೋಸ್​ ಬಟ್ಲರ್​ ಕೇವಲ 11, ಯಶಸ್ವಿ ಜೈಸ್ವಾಲ್​ 24 ರನ್​ ಗಳಿಸಿ ಔಟಾದ್ರು. ಬಳಿಕ ಕ್ರೀಸ್​ಗೆ ಬಂದ ಸಂಜು ಸ್ಯಾಮ್ಸನ್​ ಕೊನೆವರೆಗೂ ಕ್ರೀಸ್​ನಲ್ಲೇ ಇದ್ದು ಲಕ್ನೋ ಬೌಲರ್​ಗಳ ಬೆಂಡೆತ್ತಿದ್ರು.

ರಾಜಸ್ತಾನ್​​​ 4 ವಿಕೆಟ್​ ನಷ್ಟಕ್ಕೆ ನಿಗದಿತ 20 ಓವರ್​ಗಳಲ್ಲಿ 193 ರನ್​ ಗಳಿಸಿದೆ. ಈ ಮೂಲಕ ಲಕ್ನೋ ತಂಡಕ್ಕೆ 194 ರನ್​ ಬಿಗ್​ ಟಾರ್ಗೆಟ್​ ನೀಡಿತ್ತು.

Advertisement

ರಾಜಸ್ತಾನ್​ ನೀಡಿದ 194 ರನ್​ಗಳ ಗುರಿ ಬೆನ್ನತ್ತಿದ ಲಕ್ನೋ ಪರ ಕೆ.ಎಲ್​ ರಾಹುಲ್​ 2 ಸಿಕ್ಸರ್​​, 4 ಫೋರ್​ ಸಮೇತ 58 ರನ್​ ನೀಡಿದರು. ನಿಕೋಲಸ್​ ಪೂರನ್​​ 4 ಸಿಕ್ಸರ್​​, 4 ಫೋರ್​ ಸಮೇತ 64 ರನ್​ ಬಾರಿಸಿದ್ರು. ದೀಪಕ್​ ಹೂಡಾ 26 ರನ್​ ಪೇರಿಸಿದರು ತಂಡ ಸೋತಿತು.

Advertisement
Tags :
Advertisement