For the best experience, open
https://m.newskannada.com
on your mobile browser.
Advertisement

ಸಿಎಂ ಅವಕಾಶವನ್ನು ನಿರಾಕರಿಸಿದ್ದ ನಟ ರಾಜಕುಮಾರ್: ಹಳೆ ನೆನಪು ಸ್ಮರಿಸಿದ ಮೊಯ್ಲಿ

ನಟ ರಾಜ್ ಕುಮಾರ್ ಅವರಿಗೆ ಕರ್ನಾಟಕ ಮುಖ್ಯಮಂತ್ರಿ ಆಗುವ ಅವಕಾಶವೊಂದು ಒದಗಿಬಂದಿತ್ತು. ಆದರೆ, ಆದರೆ ಡಾ.ರಾಜಕುಮಾರ್ ನಾನು ರಾಜಕೀಯಕ್ಕೆ ಬರುವುದಿಲ್ಲ ಎಂದು ಹೇಳಿ ಈ ಅವಕಾಶವನ್ನು ನಯವಾಗಿ ನಿರಾಕರಿಸಿದರು ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಶಿವರಾಜ್ ಕುಮಾರ್ ಸಮ್ಮುಖದಲ್ಲೇ ಈ ಹಳೆಯ ನೆನಪನ್ನು ಸ್ಮರಿಸಿದರು.
05:41 PM Apr 22, 2024 IST | Nisarga K
ಸಿಎಂ ಅವಕಾಶವನ್ನು ನಿರಾಕರಿಸಿದ್ದ ನಟ ರಾಜಕುಮಾರ್  ಹಳೆ ನೆನಪು ಸ್ಮರಿಸಿದ ಮೊಯ್ಲಿ
ಸಿಎಂ ಅವಕಾಶವನ್ನು ನಿರಾಕರಿಸಿದ್ದ ನಟ ರಾಜಕುಮಾರ್: ಹಳೆ ನೆನಪು ಸ್ಮರಿಸಿದ ಮೊಯ್ಲಿ

ಉಡುಪಿ: ನಟ ರಾಜ್ ಕುಮಾರ್ ಅವರಿಗೆ ಕರ್ನಾಟಕ ಮುಖ್ಯಮಂತ್ರಿ ಆಗುವ ಅವಕಾಶವೊಂದು ಒದಗಿಬಂದಿತ್ತು. ಆದರೆ, ಆದರೆ ಡಾ.ರಾಜಕುಮಾರ್ ನಾನು ರಾಜಕೀಯಕ್ಕೆ ಬರುವುದಿಲ್ಲ ಎಂದು ಹೇಳಿ ಈ ಅವಕಾಶವನ್ನು ನಯವಾಗಿ ನಿರಾಕರಿಸಿದರು ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಶಿವರಾಜ್ ಕುಮಾರ್ ಸಮ್ಮುಖದಲ್ಲೇ ಈ ಹಳೆಯ ನೆನಪನ್ನು ಸ್ಮರಿಸಿದರು.

Advertisement

ಅಂದು ಆಂಧ್ರ ಪ್ರದೇಶದಲ್ಲಿ ಎನ್.ಟಿ.ರಾಮ ರಾವ್, ತಮಿಳುನಾಡಿನಲ್ಲಿ ಎಂಜಿಆರ್ ರಾಜಕೀಯಕ್ಕೆ ಬಂದಿದ್ದರು. ಅದೇ ರೀತಿ ಕರ್ನಾಟಕದಲ್ಲೂ ಡಾ.ರಾಜಕುಮಾರ್ ರಾಜಕೀಯಕ್ಕೆ ಬಂದು ಮುಖ್ಯಮಂತ್ರಿ ಆಗುತ್ತಾರೆ ಎಂಬ ಮಾತುಗಳಿದ್ದವು. ಅದಕ್ಕಾಗಿ ನಾವು ಡಾ.ರಾಜಕುಮಾರ್ ಹಾಗೂ ಪಾವರ್ತಮ್ಮರನ್ನು ದಿಲ್ಲಿಗೆ ಕರೆದುಕೊಂಡು ಹೋಗಿ ಇಂದಿರಾ ಗಾಂಧಿ ಅವರನ್ನು ಭೇಟಿ ಮಾಡಿಸಿದ್ದೇವು. ಆದರೆ ಡಾ.ರಾಜಕುಮಾರ್ ನಾನು ರಾಜಕೀಯಕ್ಕೆ ಬರುವುದಿಲ್ಲ ಎಂದು ಈ ಅವಕಾಶವನ್ನು ನಿರಾಕರಿಸಿದರು ಎಂದರು.

ಒಂದು ವೇಳೆ ರಾಜಕುಮಾರ್ ಅವತ್ತು ರಾಜಕೀಯಕ್ಕೆ ಬರುತ್ತಿದ್ದರೆ ಇಂದಿಗೂ ಕರ್ನಾಟಕದ ರಾಜಕೀಯದಲ್ಲಿ ರಾರಾಜಿಸುತ್ತಿರುತ್ತಿದ್ದರು. ಬಳಿಕ ರಾಜ್ಯಸಭಾ ಸದಸ್ಯತ್ವ ಸ್ವೀಕರಿಸುವಂತೆ ಇಂದಿರಾ ಗಾಂಧಿ ಕೇಳಿಕೊಂಡರು. ಅದನ್ನು ಕೂಡ ತಿರಸ್ಕರಿಸಿದ ತ್ಯಾಗಜೀವಿ ಡಾ.ರಾಜಕುಮಾರ್ ಎಂದು ಮೊಯ್ಲಿ ಹೇಳಿದರು.

Advertisement

Advertisement
Tags :
Advertisement