ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

`ಆರ್ಟಿಕಲ್‌ 370ʼ ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವ ರಾಜನಾಥ್ ಸಿಂಗ್

ಇತ್ತೀಚೆಗಷ್ಟೆ ರಿಲೀಸ್‌ ಆದ ನೈಜ ಘಟನೆ ಆಧಾರಿತ`ಆರ್ಟಿಕಲ್‌ 370ʼ ಸಿನಿಮಾಗೆ ಇದೀಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಿನಿಮಾದಲ್ಲಿ ಯಾಮಿ ಗೌತಮಿ ಮುಖ್ಯ ಪಾತ್ರದಲ್ಲಿ ಉತ್ತಮವಾಗಿ ನಟಿಸಿದ್ದಾರೆ. ಬಾಕ್ಸ್ ಆಫೀಸ್​ನಲ್ಲೂ ಈ ಚಿತ್ರ ಒಳ್ಳೆಯ ಗಳಿಕೆ ಮಾಡುತ್ತಿದೆ. ಈ ಚಿತ್ರವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವೀಕ್ಷಿಸಿದ್ದಾರೆ. ಹಾಗೂ ಈ ಸಿನಿಮಾ ತಂಡದ ಬಗ್ಗೆ, ಚಿತ್ರವನ್ನು ನಿರೂಪಿಸಿದ ಬಗ್ಗೆ ಅವರು ಮೆಚ್ಚುಗೆ ಸೂಚಿಸಿದ್ದಾರೆ. ಇದರಿಂದ ತಂಡಕ್ಕೆ ಹೊಸ ಇನ್ನಷ್ಟು ಬಲ ಸಿಕ್ಕಂತೆ ಆಗಿದೆ. ಚಿತ್ರದ ಗಳಿಕೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.
09:50 AM Mar 09, 2024 IST | Nisarga K
`ಆರ್ಟಿಕಲ್‌ 370ʼ ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವ ರಾಜನಾಥ್ ಸಿಂಗ್

ದೆಹಲಿ:  ಇತ್ತೀಚೆಗಷ್ಟೆ ರಿಲೀಸ್‌ ಆದ ನೈಜ ಘಟನೆ ಆಧಾರಿತ`ಆರ್ಟಿಕಲ್‌ 370ʼ ಸಿನಿಮಾಗೆ ಇದೀಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಿನಿಮಾದಲ್ಲಿ ಯಾಮಿ ಗೌತಮಿ ಮುಖ್ಯ ಪಾತ್ರದಲ್ಲಿ ಉತ್ತಮವಾಗಿ ನಟಿಸಿದ್ದಾರೆ. ಬಾಕ್ಸ್ ಆಫೀಸ್​ನಲ್ಲೂ ಈ ಚಿತ್ರ ಒಳ್ಳೆಯ ಗಳಿಕೆ ಮಾಡುತ್ತಿದೆ. ಈ ಚಿತ್ರವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವೀಕ್ಷಿಸಿದ್ದಾರೆ. ಹಾಗೂ ಈ ಸಿನಿಮಾ ತಂಡದ ಬಗ್ಗೆ, ಚಿತ್ರವನ್ನು ನಿರೂಪಿಸಿದ ಬಗ್ಗೆ ಅವರು ಮೆಚ್ಚುಗೆ ಸೂಚಿಸಿದ್ದಾರೆ. ಇದರಿಂದ ತಂಡಕ್ಕೆ ಇನ್ನಷ್ಟು ಬಲ ಸಿಕ್ಕಂತೆ ಆಗಿದೆ. ಚಿತ್ರದ ಗಳಿಕೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

Advertisement

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಿನಿಮಾದ ಕರಿತು ಎಕ್ಸ್‌ ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ‘ನಾನು ನನ್ನ ಕುಟುಂಬದೊಂದಿಗೆ ದೆಹಲಿಯ ಥಿಯೇಟರ್​ಗೆ ಹೋಗಿ ಆರ್ಟಿಕಲ್ 370 ಸಿನಿಮಾ ವೀಕ್ಷಿಸಿದೆ. ಈ ಚಿತ್ರದ ಬಗ್ಗೆ ನಾನು ಅನೇಕರಿಂದ ಮೆಚ್ಚುಗೆಯನ್ನು ಕೇಳಿದೆ. ಈ ಸಿನಿಮಾ ನೈಜ ಘಟನೆಗಳಿಂದ ಪ್ರೇರಿತವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ತೆಗೆದುಹಾಕುವ ಘಟನೆಗಳನ್ನು ಅತ್ಯಂತ ಪರಿಣಾಮಕಾರಿ ರೀತಿಯಲ್ಲಿ ಪ್ರಸ್ತುತಪಡಿಸಲಾಗಿದೆ’ ಎಂದು ಅವರು ಬರೆದಿದ್ದಾರೆ.

Advertisement

 

‘ಈ ಸಿನಿಮಾ ಸಮಸ್ಯೆ ಎಷ್ಟು ಸಂಕೀರ್ಣವಾಗಿತ್ತು ಮತ್ತು ಅದನ್ನು ಪರಿಹರಿಸುವುದು ಎಷ್ಟು ಸವಾಲಾಗಿತ್ತು ಎಂಬುದನ್ನು ತೋರಿಸುತ್ತದೆ. ಇದು ಮಹಿಳಾ ಸಬಲೀಕರಣಕ್ಕೆ ಉತ್ತಮ ಉದಾಹರಣೆ. ಈ ಚಿತ್ರದ ನಿರ್ಮಾಪಕ-ನಿರ್ದೇಶಕರು ಮತ್ತು ಎಲ್ಲಾ ಕಲಾವಿದರ ಕೆಲಸಕ್ಕೆ ನಾನು ಅಭಿನಂದಿಸುತ್ತೇನೆ’ ಎಂದಿದ್ದಾರೆ ರಾಜನಾಥ್ ಸಿಂಗ್.

‘ಆರ್ಟಿಕಲ್ 370’ನ್ನು 2019ರ ಆಗಸ್ಟ್ 5ರಂದು ತೆಗೆಯಲಾಯಿತು. ನಂತರ ಅದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಯಿತು. ಈ ಸಿನಿಮಾ ಇದನ್ನೇ ಆಧರಿಸಿದೆ. ಈ ಚಿತ್ರದಲ್ಲಿ ಯಾಮಿ ಗೌತಮ್ ಮುಖ್ಯ ಪಾತ್ರ ಮಾಡಿದ್ದಾರೆ.

Advertisement
Tags :
Article370BOLLYWOODcinemaLatestNewsMOVIENEW DELHINewsKannadaRAJNATH SIGH
Advertisement
Next Article