ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಎಎಪಿ ಸಂಸದ ರಾಘವ್ ಚಡ್ಡಾ ಅಮಾನತನ್ನು ಹಿಂಪಡೆದ ರಾಜ್ಯಸಭೆ

ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ  ಅವರ ಅಮಾನತು ಕ್ರಮವನ್ನು ರಾಜ್ಯಸಭೆ ಇಂದು (ಡಿ.04) ಹಿಂಪಡೆದಿದೆ. ಐವರು ರಾಜ್ಯಸಭಾ ಸಂಸದರ ನಕಲಿ ಸಹಿ ಮಾಡಿದ ಆರೋಪ ಹೊತ್ತಿರುವ ರಾಘವ್ ಚಡ್ಡಾ ಅವರನ್ನು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿತು.
03:31 PM Dec 04, 2023 IST | Ashitha S

ದೆಹಲಿ: ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ  ಅವರ ಅಮಾನತು ಕ್ರಮವನ್ನು ರಾಜ್ಯಸಭೆ ಇಂದು (ಡಿ.04) ಹಿಂಪಡೆದಿದೆ. ಐವರು ರಾಜ್ಯಸಭಾ ಸಂಸದರ ನಕಲಿ ಸಹಿ ಮಾಡಿದ ಆರೋಪ ಹೊತ್ತಿರುವ ರಾಘವ್ ಚಡ್ಡಾ ಅವರನ್ನು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿತು.

Advertisement

ಅವರ ವಿರುದ್ಧದ ಪ್ರಕರಣದ ತನಿಖೆಯ ವಿಶೇಷಾಧಿಕಾರಗಳ ಸಮಿತಿಯು ತನ್ನ ವರದಿಯನ್ನು ಸಲ್ಲಿಸುವವರೆಗೆ ಅಮಾನತಿನಲ್ಲಿ ಇಡಲಾಗುವುದು ಎಂದು ರಾಜ್ಯಸಭೆಯಲ್ಲಿ ಹೇಳಲಾಗಿತು. ರಾಘವ್ ಚಡ್ಡಾ ಅವರು ಮಾಡಿದ್ದು ಅಕ್ರಮ ಎಂದು ಪಿಯೂಷ್ ಗೋಯಲ್ ಅವರು ಅಮಾನತುಗೊಳಿಸುವ ಪ್ರಸ್ತಾಪವನ್ನು ಮಂಡಿಸಿದರು. ಚಡ್ಡಾ ಅವರ ನಡವಳಿಕೆಯು ಅನಿರೀಕ್ಷಿತ ಮತ್ತು ಸಂಸತ್ತಿನ ಸದಸ್ಯರಿಗೆ ತಕ್ಕುದಾದುದು ಅಲ್ಲ. ಚಡ್ಡಾ ಅವರು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಗೋಯಲ್ ಅಮಾನತು ಪ್ರಸ್ತಾಪವನ್ನು ಮಂಡಿಸಿದರು.

ಅಮಾನತು ಹಿಂಪಡೆದ ನಂತರ, ಚಾಡಾ ಅವರು ವಿಡಿಯೋ ಸಂದೇಶದ ಮೂಲಕ ಸುಪ್ರೀಂ ಕೋರ್ಟ್ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಆಗಸ್ಟ್ 11ರಂದು ನನ್ನನ್ನು ರಾಜ್ಯಸಭೆಯಿಂದ ಅಮಾನತುಗೊಳಿಸಲಾಯಿತು. ನನ್ನ ಅಮಾನತು ಹಿಂಪಡೆಯುವಂತೆ ಸುಪ್ರೀಂ ಕೋರ್ಟ್‌ಗೆ ಹೋಗಿದ್ದೆ. ಸುಪ್ರೀಂ ಕೋರ್ಟ್ ಇದನ್ನು ಅರಿತಿದೆ ಮತ್ತು ಈಗ ನನ್ನ ಅಮಾನತು 115 ದಿನಗಳ ನಂತರ ಹಿಂಪಡೆದಿದೆ. ನನ್ನ ಅಮಾನತು ರದ್ದುಗೊಂಡಿರುವುದಕ್ಕೆ ನನಗೆ ಸಂತೋಷವಾಗಿದೆ ಮತ್ತು ನಾನು ಸುಪ್ರೀಂ ಕೋರ್ಟ್ ಹಾಗೂ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.

Advertisement

 

Advertisement
Tags :
GOVERNMENTindiaLatestNewsNewsKannadaRaghav ChadhaRAJYASABHAನವದೆಹಲಿರಾಘವ್ ಚಡ್ಡಾ
Advertisement
Next Article