ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ರಕ್ಷಿತ್ ಶೆಟ್ಟಿ ಅಭಿನಯದ `777 ಚಾರ್ಲಿ’ ಚಿತ್ರ ಇದೀಗ ಜಪಾನಿನಲ್ಲಿ ಬಿಡುಗಡೆಗೆ ಸಿದ್ಧ

ಪರಂವಃ ಸ್ಟುಡಿಯೋಸ್ ನಿರ್ಮಾಣದ, ಸಿಂಪಲ್‌ ಸ್ಟಾರ್‌ ರಕ್ಷಿತ್ ಶೆಟ್ಟಿ ಅಭಿನಯದ `777 ಚಾರ್ಲಿ’ ಚಿತ್ರ ಇದೀಗ ಜಪಾನೀಸ್ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಇದೇ ಜೂ.28 ಜಪಾನ್ ದೇಶದ ಪ್ರಮುಖ ನಗರಗಳಲ್ಲಿ ಚಿತ್ರ ತೆರೆ ಕಾಣಲಿದೆ.
11:47 AM Apr 28, 2024 IST | Chaitra Kulal

ಬೆಂಗಳೂರು: ಪರಂವಃ ಸ್ಟುಡಿಯೋಸ್ ನಿರ್ಮಾಣದ, ಸಿಂಪಲ್‌ ಸ್ಟಾರ್‌ ರಕ್ಷಿತ್ ಶೆಟ್ಟಿ ಅಭಿನಯದ `777 ಚಾರ್ಲಿ’ ಚಿತ್ರ ಇದೀಗ ಜಪಾನೀಸ್ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಇದೇ ಜೂ.28 ಜಪಾನ್ ದೇಶದ ಪ್ರಮುಖ ನಗರಗಳಲ್ಲಿ ಚಿತ್ರ ತೆರೆ ಕಾಣಲಿದೆ.

Advertisement

ಜಪಾನ್ ಚಿತ್ರರಂಗದಲ್ಲಿ 1೦೦ ವರ್ಷಕ್ಕೂ ಹೆಚ್ಚು ಅನುಭವ ಹೊಂದಿರುವ “ಶೋಚಿಕೋ ಮೂವಿ” ಎಂಬ ಸಂಸ್ಥೆ ಈ ಜಪಾನಿನಲ್ಲಿ ವಿತರಣೆ ಮಾಡಿದೆ. ವಿಶೇಷವೆಂದರೆ, ಇದೇ ಸಂಸ್ಥೆಯು ಈ ಹಿಂದೆ “Hachi: A Dog’s Tale” ಎಂಬ ಚಿತ್ರವನ್ನು ಜಪಾನಿನಲ್ಲಿ ವಿತರಣೆ ಮಾಡಿತ್ತು.

ಕಳೆದ ವರ್ಷ ಥೈಲ್ಯಾಂಡ್‌ನಲ್ಲಿ ಡಬ್ ಆಗಿ ಬಿಡುಗಡೆಗೊಂಡ `777 ಚಾರ್ಲಿ’ ಚಿತ್ರ, ಮುಂದಿನ ದಿನಗಳಲ್ಲಿ ರಷ್ಯಾ, ಲ್ಯಾಟಿನ್ ಅಮೆರಿಕ, ತೈವಾನ್, ಜರ್ಮನಿ ಹಾಗೂ ಇನ್ನಿತರ ದೇಶಗಳಲ್ಲಿ ಬಿಡುಗಡೆಯಾಗಲಿದೆ.

Advertisement

2೦22ರ ಜೂನ್ 10 ರಂದು ‘777 ಚಾರ್ಲಿ’ ಸಿನಿಮಾ 5 ಭಾಷೆಗಳಲ್ಲಿ ಬಿಡುಗಡೆಯಾಗಿ ಎಲ್ಲಾ ವರ್ಗದ ಪ್ರೇಕ್ಷಕರನ್ನು ಭಾವನಾತ್ಮಕವಾಗಿ ಸೆಳೆದಿತ್ತು. ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡ ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಗರಿ ಕೂಡ ಲಭಿಸಿತ್ತು.

ಪೋಷಕರನ್ನು ಕಳೆದುಕೊಂಡು ಗೊತ್ತು ಗುರಿಯಿಲ್ಲದೇ ತನ್ನದೇ ಪ್ರಪಂಚದಲ್ಲಿ ಯಾಂತ್ರಿಕ ಬದುಕು ನಡೆಸುತ್ತಿರುವ ಧರ್ಮ. ಅಚಾನಕ್ ಆಗಿ ಆತನ ಬದುಕಿಗೆ ನಾಯಿಯೊಂದು ಎಂಟ್ರಿ ಕೊಡುತ್ತದೆ. ಕಳೆಗುಂದಿದ ಆತನ ಬದುಕಿಗೆ ಆ ನಾಯಿ ಬಣ್ಣ ತುಂಬುತ್ತದೆ. ಅದಕ್ಕೆ ‘777 ಚಾರ್ಲಿ’ ಎಂದು ನಾಮಕರಣ ಮಾಡುತ್ತಾನೆ. ಇಂಟರ್‌ವಲ್ ವೇಳೆಗೆ ಕಥೆಗೆ ತಿರುವು ಸಿಗುತ್ತದೆ.

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಾದೇಶಿಕ ಸಿನಿಮಾ ವಿಭಾಗದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಕನ್ನಡದ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು.

777 ಚಾರ್ಲಿ ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುವುದಕ್ಕೂ ಮೊದಲೇ ಚಿತ್ರತಂಡ ಹಲವು ಕಡೆಗಳಲ್ಲಿ ಪ್ರೀಮಿಯರ್‌ಶೋ ಏರ್ಪಡಿಸಿತ್ತು. ಇಲ್ಲಿಯೂ ಸಹ ಜನರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಚಿತ್ರದ ಪ್ರಸಾರದ ಹಕ್ಕು ಕೂಡ ಒಳ್ಳೆಯ ಮೊತ್ತಕ್ಕೆ ಮಾರಾಟವಾಗಿತ್ತು.

ರಾಜ್‌ಬಿ ಶೆಟ್ಟಿ, ದಾನಿಶ್‌ಸೇಠ್‌, ಸಂಗೀತಾ ಶೃಂಗೇರಿ, ತಮಿಳಿನ ಬಾಬಿ ಸಿಂಹ ನಟಿಸಿದ್ದರು. ಕಿರಣ್‌ರಾಜ್‌ಈ ಚಿತ್ರದ ನಿರ್ದೇಶಕರಾಗಿದ್ದು, ರಕ್ಷಿತ್‌ಶೆಟ್ಟಿ ತಮ್ಮ ಹೋಮ್‌ಬ್ಯಾನರ್‌ಪರಂವಃ ಸ್ಟುಡಿಯೋಸ್ ಅಡಿಯಲ್ಲಿ ಚಿತ್ರ ನಿರ್ದೇಶಿಸಿದ್ದರು. ನೋಬಿನ್‌ಪೌಲ್‌ಸಂಗೀತ ಮತ್ತು ಹಿನ್ನೆಲೆ ಸಂಗೀತ ನೀಡಿದ್ದು, ಅರವಿಂದ್‌ಕಶ್ಯಪ್‌ಛಾಯಾಗ್ರಹಣ ಮಾಡಿದ್ದರು. ಪ್ರ

ತೀಕ್‌ಶೆಟ್ಟಿ ಸಂಕಲನ, ಪ್ರಗತಿ ರಿಷಬ್‌ಶೆಟ್ಟಿ ಅವರ ವಸ್ತ್ರ ವಿನ್ಯಾಸ ಈ ಚಿತ್ರಕ್ಕಿದೆ. ಚಿತ್ರದ ಹಿಂದಿ ಅವತರಣಿಕೆಗೆ ಸಂಜಯ್‌ಉಪಾಧ್ಯ ಸಂಭಾಷಣೆ ನೀಡಿದ್ದು, ಹಾಡುಗಳಿಗೆ ಹಿಂದಿಯಲ್ಲಿ ಶೈನಿ ದಾಸ್‌, ಕಾರ್ತಿಕಾ ನೈನನ್‌ದುಬೆ, ಮಾನ್ಸಾ ಪಾಂಡೆ, ಅಲೆಕ್ಸ್‌ಡಿಸೋಜಾ, ಸಾಯೇಶ್‌ಪೈ ಪನಂಡಿಕರ್ ಸಾಹಿತ್ಯ ನೀಡಿದ್ದರು.

 

Advertisement
Tags :
777 CHARLIEJapaneseRAKSHIT SHETTYಬೆಂಗಳೂರುರಕ್ಷಿತ್ ಶೆಟ್ಟಿ
Advertisement
Next Article