For the best experience, open
https://m.newskannada.com
on your mobile browser.
Advertisement

ಪೂನಂ ಪಾಂಡೆ ಬೆಂಬಲಕ್ಕೆ ನಿಂತ ರಾಮ್​ ಗೋಪಾಲ್​ ವರ್ಮಾ

ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಯಾವಾಗಲೂ ಡಿಫರೆಂಟ್​ ಆಗಿ ಆಲೋಚನೆ ಮಾಡುತ್ತಾರೆ. ಸದ್ಯಕ್ಕೆ ರಾಮ್​ ಗೋಪಾಲ್​ ವರ್ಮಾ ಮಾತ್ರ ಪೂನಂ ಪಾಂಡೆಗೆ ಬೆಂಬಲ ಸೂಚಿಸುತ್ತಿದ್ದಾರೆ. ಗರ್ಭಕಂಠದ ಕ್ಯಾನ್ಸರ್​ ಬಗ್ಗೆ ಜಾಗೃತಿ ಮೂಡಿಸಲು ಸುಳ್ಳು ಸುದ್ದಿ ಹಬ್ಬಿಸಿದ ನಟಿಯ ಹುಚ್ಚು ಸಾಹಸವನ್ನು ಆರ್​ಜಿವಿ ಶ್ಲಾಘಿಸಿದ್ದಾರೆ.
11:22 AM Feb 04, 2024 IST | Ashitha S
ಪೂನಂ ಪಾಂಡೆ ಬೆಂಬಲಕ್ಕೆ ನಿಂತ ರಾಮ್​ ಗೋಪಾಲ್​ ವರ್ಮಾ

ಮುಂಬೈ: ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಯಾವಾಗಲೂ ಡಿಫರೆಂಟ್​ ಆಗಿ ಆಲೋಚನೆ ಮಾಡುತ್ತಾರೆ. ಸದ್ಯಕ್ಕೆ ರಾಮ್​ ಗೋಪಾಲ್​ ವರ್ಮಾ ಮಾತ್ರ ಪೂನಂ ಪಾಂಡೆಗೆ ಬೆಂಬಲ ಸೂಚಿಸುತ್ತಿದ್ದಾರೆ. ಗರ್ಭಕಂಠದ ಕ್ಯಾನ್ಸರ್​ ಬಗ್ಗೆ ಜಾಗೃತಿ ಮೂಡಿಸಲು ಸುಳ್ಳು ಸುದ್ದಿ ಹಬ್ಬಿಸಿದ ನಟಿಯ ಹುಚ್ಚು ಸಾಹಸವನ್ನು ಆರ್​ಜಿವಿ ಶ್ಲಾಘಿಸಿದ್ದಾರೆ.

Advertisement

ಈ ಬಗ್ಗೆ ಅವರು ಟ್ವೀಟ್​ ಮಾಡಿ, ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಜೊತೆಗೆ ಪೂನಂ ಪಾಂಡೆಯ ಇನ್​ಸ್ಟಾಗ್ರಾಮ್​ ಪೋಸ್ಟ್​ ಅನ್ನು ಕೂಡ ರಾಮ್​ ಗೋಪಾಲ್​ ವರ್ಮಾ ಹಂಚಿಕೊಂಡಿದ್ದಾರೆ.

‘ಹೇ ಪೂನಂ ಪಾಂಡೆ… ಈ ಒಂದು ಕಾರಣಕ್ಕಾಗಿ ನೀವು ಇಟ್ಟಿರುವ ಹೆಜ್ಜೆಗೆ ಎಲ್ಲರಿಂದ ಕೆಲವು ಟೀಕೆಗಳು ಬರಬಹುದು. ಆದರೆ, ಸಾವಿನ ಸುಳ್ಳು ಸುದ್ದಿ ಮೂಲಕ ನೀವು ಮೂಡಿಸಿದ ಜಾಗೃತಿ ಮತ್ತು ಮಾಡಿದ ಸಾಧನೆಯನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ. ಎಲ್ಲ ಕಡೆಗಳಲ್ಲೂ ಈಗ ಗರ್ಭಕಂಠದ ಕ್ಯಾನ್ಸರ್​ ಬಗ್ಗೆ ಚರ್ಚೆ ಹೆಚ್ಚಾಗಿದೆ. ನಿಮ್ಮಂತೆಯೇ ನಿಮ್ಮ ಆತ್ಮ ಕೂಡ ಸುಂದರವಾಗಿದೆ. ನಿಮಗೆ ಖುಷಿಯ ಜೊತೆ ದೀರ್ಘ ಆಯಸ್ಸು ಸಿಗಲಿ’ ಎಂದು ರಾಮ್​ ಗೋಪಾಲ್​ ವರ್ಮಾ ಹಾರೈಸಿದ್ದಾರೆ.

Advertisement

Advertisement
Tags :
Advertisement