For the best experience, open
https://m.newskannada.com
on your mobile browser.
Advertisement

ಮಂದಸ್ಮಿತ ನಗುಮೊಗದ "ರಾಮಲಲ್ಲಾ"ನ ಹೊಸ ಫೋಟೊ ಕಣ್ತುಂಬಿಕೊಳ್ಳಿ

ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಕೆತ್ತಿದ ರಾಮಲಲ್ಲಾನ ಮೂರ್ತಿಯು ಅಯೋಧ್ಯೆಯ ರಾಮಮಂದಿರದ ಗರ್ಭಗುಡಿ ಪ್ರವೇಶಿಸಿದೆ. ಇದರ ಬೆನ್ನಲ್ಲೇ, ರಾಮಲಲ್ಲಾನ ನಗುಮೊಗದ ಫೋಟೊವನ್ನು ಅನಾವರಣಗೊಳಿಸಲಾಗಿದೆ.ಇದು ಸಾಮಾಜಿಕ ಜಾಲತಾಣಗಲ್ಲಿ ಭಾರಿ ವೈರಲ್‌ ಆಗಿವೆ.
04:54 PM Jan 19, 2024 IST | Ashitha S
ಮಂದಸ್ಮಿತ ನಗುಮೊಗದ  ರಾಮಲಲ್ಲಾ ನ ಹೊಸ ಫೋಟೊ ಕಣ್ತುಂಬಿಕೊಳ್ಳಿ

ಅಯೋಧ್ಯೆ: ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಕೆತ್ತಿದ ರಾಮಲಲ್ಲಾನ ಮೂರ್ತಿಯು ಅಯೋಧ್ಯೆಯ ರಾಮಮಂದಿರದ ಗರ್ಭಗುಡಿ ಪ್ರವೇಶಿಸಿದೆ. ಇದರ ಬೆನ್ನಲ್ಲೇ, ರಾಮಲಲ್ಲಾನ ನಗುಮೊಗದ ಫೋಟೊವನ್ನು ಅನಾವರಣಗೊಳಿಸಲಾಗಿದೆ.ಇದು ಸಾಮಾಜಿಕ ಜಾಲತಾಣಗಲ್ಲಿ ಭಾರಿ ವೈರಲ್‌ ಆಗಿವೆ.

Advertisement

ಕಳೆದ ಗುರುವಾರ ರಾತ್ರಿ 51 ಇಂಚಿನ ರಾಮಲಾಲಾ ವಿಗ್ರಹವನ್ನ ದೇವಸ್ಥಾನಕ್ಕೆ ತರಲಾಗಿತ್ತು. ಮಧ್ಯಾಹ್ನ ವೇದಘೋಷಗಳ ನಡುವೆ ಶ್ರೀರಾಮನ ಮೂರ್ತಿಯನ್ನ ಗರ್ಭಗುಡಿಯಲ್ಲಿ ಇರಿಸಲಾಯಿತು ಎಂದು ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಸಂಬಂಧಿಸಿದ ಅರ್ಚಕ ಅರುಣ್ ದೀಕ್ಷಿತ್ ಮಾಹಿತಿ ನೀಡಿದ್ದಾರೆ.

ಇನ್ನು ರಾಮಮಂದಿರ ಲೋಕಾರ್ಪಣೆಯ ದಿನ ಉತ್ತರ ಪ್ರದೇಶ ಪೊಲೀಸರು ಹಾಗೂ ಪ್ಯಾರಾ ಮಿಲಿಟರಿ ಸಿಬ್ಬಂದಿ ಸೇರಿ ಒಟ್ಟು 11 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ 55 ದೇಶಗಳಿಂದ ಸುಮಾರು 100ಕ್ಕೂ ಅಧಿಕ ಗಣ್ಯರು ಅಯೋಧ್ಯೆಗೆ ಆಗಮಿಸಲಿದ್ದಾರೆ.

Advertisement

Read More:

ಅಯೋಧ್ಯೆ “ರಾಮಲಲ್ಲಾ” ಮೂರ್ತಿಯ ಮತ್ತೊಂದು ಫೋಟೋ ವೈರಲ್‌

Advertisement
Tags :
Advertisement