ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ರಾಮ ಮಂದಿರ ಉದ್ಘಾಟನೆ: ಶಾರುಖ್​, ಸಲ್ಮಾನ್​, ಆಮಿರ್​ ಖಾನ್​ಗೆ ಸಿಕ್ಕಿಲ್ಲ ಆಹ್ವಾನ

ಅಯೋಧ್ಯೆಯಲ್ಲಿ ಜನವರಿ 22ರಂದು ರಾಮ ಮಂದಿರದ ಉದ್ಘಾಟನೆ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗಲು ಹಲವು ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಲಾಗಿದೆ.
05:02 PM Jan 19, 2024 IST | Ashika S

ಉತ್ತರ ಪ್ರದೇಶ: ಅಯೋಧ್ಯೆಯಲ್ಲಿ ಜನವರಿ 22ರಂದು ರಾಮ ಮಂದಿರದ ಉದ್ಘಾಟನೆ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗಲು ಹಲವು ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಲಾಗಿದೆ.

Advertisement

ಅನೇಕ ರಾಜಕಾರಣಿಗಳು, ಉದ್ಯಮಿಗಳು ಹಾಗೂ ಸಿನಿಮಾ ನಟ-ನಟಿಯರನ್ನು ಆಹ್ವಾನಿಸಿದ  ಫೋಟೋ ವೈರಲ್​ ಆಗಿದೆ. ಈ ನಡುವೆ ಭಾರತೀಯ ಚಿತ್ರರಂಗದ ಕೆಲವು ಪ್ರಮುಖ ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಿಲ್ಲ. ಈ ಬಗ್ಗೆ ಚರ್ಚೆ ನಡೆಯುತ್ತಿದೆ.

ಸಲ್ಮಾನ್​ ಖಾನ್​, ಆಮಿರ್​ ಖಾನ್​, ಶಾರುಖ್​ ಖಾನ್​  ಮುಂತಾದ ನಟರನ್ನು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಸುದ್ದಿಯಾಗಿದೆ.

Advertisement

ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್​ಗೆ ಆಹ್ವಾನ ನೀಡಿಲ್ಲ. ರಣವೀರ್​ ಸಿಂಗ್​, ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್​, ಕರೀನಾ ಕಪೂರ್​ ಖಾನ್​, ಸೈಫ್​ ಅಲಿ ಖಾನ್​, ಕರಣ್​ ಜೋಹರ್​, ಶಿಲ್ಪಾ ಶೆಟ್ಟಿ, ಸಂಜಯ್ ದತ್​ ಮುಂತಾದ ಕಲಾವಿದರಿಗೂ ಆಹ್ವಾನ ತಲುಪಿಲ್ಲ. ಅಂತಿಮವಾಗಿ ಯಾವೆಲ್ಲ ಸೆಲೆಬ್ರಿಟಿಗಳು ಈ ಸಮಾರಂಭದಲ್ಲಿ ಭಾಗಿ ಆಗಲಿದ್ದಾರೆ ಎಂಬುದನ್ನು ಕಾದು ನೋಡಬೇಕು.

ಹಿಂದಿ ಚಿತ್ರರಂಗದ ಹಿರಿಯ ನಟ ಅಮಿತಾಭ್​ ಬಚ್ಚನ್, ಅಕ್ಷಯ್​ ಕುಮಾರ್​, ರಜನಿಕಾಂತ್​, ಆಯುಷ್ಮಾನ್​ ಖುರಾನಾ, ಕಂಗನಾ ರಣಾವತ್​, ಆಲಿಯಾ ಭಟ್​, ರಣಬೀರ್​ ಕಪೂರ್​, ರಣದೀಪ್​ ಹೂಡಾ, ಅನುಷ್ಕಾ ಶರ್ಮಾ, ರಜನಿಕಾಂತ್​, ಅನುಪಮ್​ ಖೇರ್​, ಮಾಧುರಿ ದೀಕ್ಷಿತ್​, ರಿಷಬ್​ ಶೆಟ್ಟಿ, ಯಶ್​, ಅಜಯ್​ ದೇವಗನ್​, ಪ್ರಭಾಸ್​, ರಾಮ್​ ಚರಣ್​, ಸನ್ನಿ ಡಿಯೋಲ್​, ಮೋಹನ್​ಲಾಲ್​, ಸಂಜಯ್​ ಲೀಲಾ ಬನ್ಸಾಲಿ, ಚಿರಂಜೀವಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳಿಗೆ ಆಹ್ವಾನ ಪತ್ರಿಕೆ ತಲುಪಿದೆ.

Advertisement
Tags :
LatetsNewsNewsKannadaಅಯೋಧ್ಯೆಆಹ್ವಾನಉದ್ಘಾಟನೆರಾಮ ಮಂದಿರಸೆಲೆಬ್ರಿಟಿ
Advertisement
Next Article