ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಯಶ್, ರಣ್​ಬೀರ್ ಕಪೂರ್ ನಟನೆಯ ‘ರಾಮಾಯಣ’ ಮುಹೂರ್ತಕ್ಕೆ ದಿನಾಂಕ ಫಿಕ್ಸ್

ಬಾಲಿವುಡ್​ನಲ್ಲಿ ರಣ್​ಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಇನ್ನೂ ಕೆಲವು ತಾರೆಯರು ನಟಿಸಲಿರುವ ರಾಮಾಯಣ ಸಿನಿಮಾ ನಿರ್ಮಾಣಗೊಳ್ಳುವ ಸುದ್ದಿ ಕಳೆದ ಒಂದು ವರ್ಷದಿಂದಲೂ ಹರಿದಾಡುತ್ತಲೇ ಇದೆ.
08:12 PM Mar 02, 2024 IST | Ashika S

ಮುಂಬೈ:  ಬಾಲಿವುಡ್​ನಲ್ಲಿ ರಣ್​ಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಇನ್ನೂ ಕೆಲವು ತಾರೆಯರು ನಟಿಸಲಿರುವ ರಾಮಾಯಣ ಸಿನಿಮಾ ನಿರ್ಮಾಣಗೊಳ್ಳುವ ಸುದ್ದಿ ಕಳೆದ ಒಂದು ವರ್ಷದಿಂದಲೂ ಹರಿದಾಡುತ್ತಲೇ ಇದೆ.

Advertisement

ಜನಪ್ರಿಯ ನಿರ್ದೇಶಕ ನಿತೀಶ್ ತಿವಾರಿ ಈ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ಎಲ್ಲ ನಟ-ನಟಿಯರ ಲುಕ್ ಟೆಸ್ಟ್, ಧ್ವನಿ ಪರೀಕ್ಷೆ ಇನ್ನಿತರೆಗಳು ಮುಗಿದಿದೆ ಎನ್ನಲಾಗಿದೆ. ಇದೀಗ ಸಿನಿಮಾದ ಮುಹೂರ್ತಕ್ಕೆ ದಿನಾಂಕವನ್ನು ಚಿತ್ರತಂಡ ನಿಗದಿ ಮಾಡಿದೆ.

ಏಪ್ರಿಲ್ 17ರಂದು ಸಿನಿಮಾದ ಮುಹೂರ್ತವನ್ನು ಚಿತ್ರತಂಡ ಅದ್ಧೂರಿಯಾಗಿ ಮಾಡಲಿದೆ. ಘೋಷಣೆಗೆ ಏಪ್ರಿಲ್ 17ನ್ನೇ ಆಯ್ದುಕೊಳ್ಳಲು ಕಾರಣವೂ ಇದೆ. ಅಂದು ರಾಮನವಮಿ. ಹಾಗಾಗಿ ಅದೇ ದಿನದಂದು ಚಿತ್ರತಂಡ ಸಿನಿಮಾದ ಮುಹೂರ್ತ ಮಾಡಲಿದೆ. ಸಿನಿಮಾದ ಹೆಸರು ಸಹ ಅದೇ ದಿನ ಘೋಷಣೆ ಆಗಲಿದೆ.

Advertisement

ಸಿನಿಮಾದಲ್ಲಿ ರಣ್​ಬೀರ್ ಕಪೂರ್ ರಾಮನ ಪಾತ್ರದಲ್ಲಿ ನಟಿಸಲಿದ್ದಾರೆ. ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ. ಕನ್ನಡದ ನಟ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟ ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿ ನಟಿಸಲಿದ್ದಾರೆ. ರಕುಲ್ ಪ್ರೀತ್ ಸಿಂಗ್, ಲಾರಾ ದತ್ತ ಅವರುಗಳು ಕೈಕೆ, ಊರ್ಮಿಳೆಯ ಪಾತ್ರದಲ್ಲಿ ನಟಿಸಲಿದ್ದಾರೆ.

Advertisement
Tags :
BOLLYWOODLatetsNewsNewsKannada
Advertisement
Next Article