For the best experience, open
https://m.newskannada.com
on your mobile browser.
Advertisement

ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಲ್ಲಿ 'ರಾಮಾಯಣ' ಪಠ್ಯ ಸೇರ್ಪಡೆ?

ನವದೆಹಲಿ: ಎನ್‌ಸಿಇಆರ್‌ಟಿ ಪಠ್ಯ ಪುಸ್ತಕ ವಿವಾದ ಜೋರಾಗಿದೆ. ಕಾಂಗ್ರೆಸ್‌ ಸೇರಿದಂತೆ ಹಲವು ಪಕ್ಷಗಳು ಬಿಜೆಪಿ ಪಠ್ಯಪುಸ್ತಕವನ್ನು ಕೇಸರಿಕರಣಗೊಳಿಸುತ್ತಿದೆ ಎಂದು ಆರೋಪಿಸುತ್ತಿದೆ.  ಈ ನಡುವೆ ರಾಮಾಯಣ ಮತ್ತು ಮಹಾಭಾರತದಂತಹ ಮಹಾಕಾವ್ಯಗಳನ್ನು ಇತಿಹಾಸದ ಪಠ್ಯಕ್ರಮದ ಭಾಗವಾಗಿ ಶಾಲೆಗಳಲ್ಲಿ ಕಲಿಸಬೇಕು ಎಂದು ಉನ್ನತ ಮಟ್ಟದ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ಸಮಿತಿ ಶಿಫಾರಸು ಮಾಡಿದೆ.
01:55 PM Nov 21, 2023 IST | Ashitha S
ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಲ್ಲಿ  ರಾಮಾಯಣ  ಪಠ್ಯ ಸೇರ್ಪಡೆ

ನವದೆಹಲಿ: ಎನ್‌ಸಿಇಆರ್‌ಟಿ ಪಠ್ಯ ಪುಸ್ತಕ ವಿವಾದ ಜೋರಾಗಿದೆ. ಕಾಂಗ್ರೆಸ್‌ ಸೇರಿದಂತೆ ಹಲವು ಪಕ್ಷಗಳು ಬಿಜೆಪಿ ಪಠ್ಯಪುಸ್ತಕವನ್ನು ಕೇಸರಿಕರಣಗೊಳಿಸುತ್ತಿದೆ ಎಂದು ಆರೋಪಿಸುತ್ತಿದೆ.  ಈ ನಡುವೆ ರಾಮಾಯಣ ಮತ್ತು ಮಹಾಭಾರತದಂತಹ ಮಹಾಕಾವ್ಯಗಳನ್ನು ಇತಿಹಾಸದ ಪಠ್ಯಕ್ರಮದ ಭಾಗವಾಗಿ ಶಾಲೆಗಳಲ್ಲಿ ಕಲಿಸಬೇಕು ಎಂದು ಉನ್ನತ ಮಟ್ಟದ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ಸಮಿತಿ ಶಿಫಾರಸು ಮಾಡಿದೆ.

Advertisement

ಸಂವಿಧಾನದ ಪೀಠಿಕೆಯನ್ನು ಎಲ್ಲಾ ತರಗತಿಗಳ ಗೋಡೆಗಳ ಮೇಲೆ ಸ್ಥಳೀಯ ಭಾಷೆಗಳಲ್ಲಿ ಬರೆಯುವಂತೆ ಸಮಿತಿಯು ಶಿಫಾರಸು ಮಾಡಿದೆ ಎಂದು ಸಮಿತಿಯ ಅಧ್ಯಕ್ಷ ಪ್ರೊ ಸಿ ಐ ಇಸಾಕ್ ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದರು.

ಶಾಲೆಗಳಿಗೆ ಸಮಾಜ ವಿಜ್ಞಾನ ಪಠ್ಯಕ್ರಮವನ್ನು ಪರಿಷ್ಕರಿಸಲು ಸ್ಥಾಪಿಸಲಾದ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ ಸಮಾಜ ವಿಜ್ಞಾನ ಸಮಿತಿಯು ಪಠ್ಯಪುಸ್ತಕಗಳಲ್ಲಿ ಭಾರತೀಯ ಜ್ಞಾನ ವ್ಯವಸ್ಥೆ, ವೇದಗಳು ಮತ್ತು ಆಯುರ್ವೇದವನ್ನು ಪರಿಚಯಿಸುವುದು ಸೇರಿದಂತೆ ಹಲವಾರು ಪ್ರಸ್ತಾಪಗಳನ್ನು ಮಾಡಿದೆ. ಈ ಪ್ರಸ್ತಾವನೆಗೆ ಎನ್‌ಸಿಇಆರ್‌ಟಿಯಿಂದ ಅಂತಿಮ ಒಪ್ಪಿಗೆ ಸಿಗಬೇಕಿದೆ. ಇತಿಹಾಸವನ್ನು ನಾಲ್ಕು ಅವಧಿಗಳಾಗಿ ಅಂದರೆ ಶಾಸ್ತ್ರೀಯ ಅವಧಿ, ಮಧ್ಯಕಾಲೀನ ಅವಧಿ, ಬ್ರಿಟಿಷ್ ಯುಗ ಮತ್ತು ಆಧುನಿಕ ಭಾರತ. ವರ್ಗೀಕರಿಸಲು ಸಮಿತಿಯು ಶಿಫಾರಸುಗಳನ್ನು ಮಾಡಿದೆ.

Advertisement

ಇಲ್ಲಿಯವರೆಗೆ, ಭಾರತೀಯ ಇತಿಹಾಸದಲ್ಲಿ ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಭಾರತ ಎಂಬ ಕೇವಲ ಮೂರು ವರ್ಗೀಕರಣಗಳಿವೆ ಎಂದು ನಿವೃತ್ತ ಇತಿಹಾಸ ಪ್ರಾಧ್ಯಾಪಕ ಐಸಾಕ್ ಹೇಳಿದ್ದಾರೆ.

Advertisement
Tags :
Advertisement