ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ರಾಮೇಶ್ವರಂ ಕೆಫೆ ಬ್ಲಾಸ್ಟ್​ ಕೇಸ್: ಬಾಂಬ್​​ಗೆ ಇದನ್ನು ಬಳಕೆ ಮಾಡಿದ್ರಾ?

ನಗರದಲ್ಲಿ ನಡೆದ ರಾಮೇಶ್ವರ ಕೆಫೆ ಬಾಂಬ್ ಬ್ಲಾಸ್ಟ್​ನ ಪ್ರಕರಣದಲ್ಲಿ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಮಿಂಚಿನಂತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸ್ಪೋಟಕ್ಕೆ IED ಬಳಸಿದ್ರೂ ಹೇಗೆ ಬ್ಲಾಸ್ಟ್​ ಮಾಡಿದ್ರು ಅನ್ನೋ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
07:21 AM Mar 03, 2024 IST | Ashitha S

ಬೆಂಗಳೂರು: ನಗರದಲ್ಲಿ ನಡೆದ ರಾಮೇಶ್ವರ ಕೆಫೆ ಬಾಂಬ್ ಬ್ಲಾಸ್ಟ್​ನ ಪ್ರಕರಣದಲ್ಲಿ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಮಿಂಚಿನಂತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸ್ಪೋಟಕ್ಕೆ IED ಬಳಸಿದ್ರೂ ಹೇಗೆ ಬ್ಲಾಸ್ಟ್​ ಮಾಡಿದ್ರು ಅನ್ನೋ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

Advertisement

ರಾಮೇಶ್ವರ ಕೆಫೆಯಲ್ಲಿ ಬ್ಲಾಸ್ಟ್​​ ಆದ ಬಾಂಬ್​ನಲ್ಲಿ IED ಸುಧಾರಿತ ಸ್ಫೋಟಕ ಡಿವೈಸ್ ಬಳಸಿರುವುದು ಪತ್ತೆಯಾಗಿದೆ. ಕೃತ್ಯಕ್ಕೆ ಬಳಸಲಾದ ಡಿವೈಸ್ ಕುರಿತು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಈ ಬಾಂಬ್​​ ಅನ್ನ ಸ್ಥಳೀಯವಾಗಿ ಸಿಗುವ ಕಚ್ಚಾ ವಸ್ತುಗಳನ್ನ ಬಳಸಿ ಸಿದ್ಧಪಡಿಸಲಾಗುತ್ತದೆ.

ಮೊಳೆಗಳು, ಗಾಜಿನ ಚೂರು, ಗನ್ ಪೌಡರ್ ಅಥವಾ ಬೆಂಕಿ ಕಡ್ಡಿಯ ಮದ್ದುಗಳನ್ನೂ ಬಳಸಿ ತಯಾರಿಸಬಹುದು. ಪ್ರೆಷರ್ ಆಗುವಂತೆ ಡಿವೈಸ್​ ಅನ್ನು ಸೃಷ್ಟಿಸಿ ಸ್ಫೋಟಿಸಬಹುದು. ಕಚ್ಚಾ ವಸ್ತುಗಳ ಪ್ರಮಾಣ ಹೆಚ್ಚಾದಂತೆ ತೀವ್ರತೆ ಪಡೆದುಕೊಳ್ಳುತ್ತೆ. ಜಿಲೇಟಿನ್​ಗಳನ್ನ ಬಳಸಿ ಈ ಪ್ಲಾಸ್ಟಿಕ್ ಸ್ಫೋಟಕ ತಯಾರಿಕೆ ಮಾಡಲಾಗಿದೆ. ಪುಟ್ಟಿ ಎಕ್ಸ್​ಪ್ಲೋಸಿವ್ ಅಂತಲೂ ಈ ಪ್ಲಾಸ್ಟಿಕ್ ಎಕ್ಸ್​ಪ್ಲೋಸಿವ್​ಗಳನ್ನ ಕರೆಯಲಾಗುತ್ತದೆ. ಈ ರೀತಿ ಮಾಡಿರುವ ಡಿವೈಸನ್ನು ಯಾವುದೇ ಮೆಟಲ್ ಡಿಟೆಕ್ಟರ್ ಕಂಡು ಹಿಡಿಯಲ್ಲ. ಭದ್ರತಾ ಸಿಬ್ಬಂದಿ ಕಣ್ಣುತಪ್ಪಿಸಿ ಸಲೀಸಾಗಿ ತೆಗೆದುಕೊಂಡು ಹೋಗಬಹುದು. ಆದ್ರೆ ಸ್ಲೀಪರ್ ಸೆಲ್​ಗಳಿಲ್ಲದೆ IED ಬಾಂಬ್ ತಯಾರಿಸುವುದು ಸುಲಭವಲ್ಲ. ಸ್ಲೀಪರ್ ಸೆಲ್​ ಪೂರೈಸುವ ಬಿಡಿ ವಸ್ತುಗಳಿಂದ ಬಾಂಬ್ ತಯಾರಿಕೆ ಮಾಡಲಾಗಿದೆ.

Advertisement

ಇನ್ನು ಈ ಬಾಂಬ್​ ಸ್ಫೋಟ ಮಾಡಿದ್ದು ಹೇಗೆ ಅನ್ನೋದನ್ನ ಕಂಡು ಹಿಡಿಯಲು ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ.

 

Advertisement
Tags :
GOVERNMENTindiaKARNATAKALatestNewsNewsKannadaRameshwaramcafeಬಾಂಬ್‌ಬೆಂಗಳೂರುರಾಮೇಶ್ವರಂ ಕೆಫೆ
Advertisement
Next Article