For the best experience, open
https://m.newskannada.com
on your mobile browser.
Advertisement

ಸಿನಿಮಾಗಾಗಿ ಬಾಡಿ ಟ್ರಾನ್ಸ್​ಫಾರ್ಮೇಷನ್​ ಮಾಡಿಕೊಂಡ ರಣದೀಪ್​ ಹೂಡಾ: ಅಭಿಮಾನಿಗಳು ಅಚ್ಚರಿ

ವಿನಾಯಕ್​ ದಾಮೋದರ್​ ಸಾವರ್ಕರ್​  ಅವರ ಬದುಕಿನ ವಿವರವನ್ನು ಆಧರಿಸಿ ಸಿನೆಮಾ ‘ಸ್ವಾತಂತ್ರ್ಯ ವೀರ ಸಾವರ್ಕರ್​’ ತಯಾರಾಗುತ್ತಿದೆ. ಈ ಚಿತ್ರಕ್ಕೆ   ಬಾಲಿವುಡ್‌ ನಟ ರಣದೀಪ್​ ಹೂಡಾ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಅಲ್ಲದೇ ನಿರ್ದೇಶನ ಕೂಡ ಅವರೇ ಮಾಡಿದ್ದಾರೆ.
08:02 PM Mar 18, 2024 IST | Ashika S
ಸಿನಿಮಾಗಾಗಿ ಬಾಡಿ ಟ್ರಾನ್ಸ್​ಫಾರ್ಮೇಷನ್​ ಮಾಡಿಕೊಂಡ ರಣದೀಪ್​ ಹೂಡಾ  ಅಭಿಮಾನಿಗಳು ಅಚ್ಚರಿ

ಮುಂಬೈ: ವಿನಾಯಕ್​ ದಾಮೋದರ್​ ಸಾವರ್ಕರ್ ಅವರ ಬದುಕಿನ ವಿವರವನ್ನು ಆಧರಿಸಿ ಸಿನಿಮಾ ‘ಸ್ವಾತಂತ್ರ್ಯ ವೀರ ಸಾವರ್ಕರ್​’ ತಯಾರಾಗುತ್ತಿದೆ. ಈ ಚಿತ್ರಕ್ಕೆ   ಬಾಲಿವುಡ್‌ ನಟ ರಣದೀಪ್​ ಹೂಡಾ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಅಲ್ಲದೇ ನಿರ್ದೇಶನ ಕೂಡ ಅವರೇ ಮಾಡಿದ್ದಾರೆ.

Advertisement

ಮೊನ್ನೆಯಷ್ಟೇ ಸ್ವಾತಂತ್ರ್ಯ ವೀರ ಸಾವರ್ಕರ್ ಚಿತ್ರದ ಟ್ರೇಲರ್ ಬಿಡುಗಡೆಯಾಗಿತ್ತು. ಈ ಟ್ರೇಲರ್ ನೋಡಿದ ಅಭಿಮಾನಿಗಳಲ್ಲಿ ಸಿನಿಮಾದ ಬಗ್ಗೆ ನಿರೀಕ್ಷೆ ದುಪ್ಪಟ್ಟಾಗಿದೆ.

ಆ ಪಾತ್ರದ ಮೇಲಿನ ಬದ್ಧತೆಗಾಗಿ ರಣದೀಪ್​ ಹೂಡಾ ಅವರು ಬಾಡಿ ಟ್ರಾನ್ಸ್​ಫಾರ್ಮೇಷನ್​ ಮಾಡಿಕೊಂಡಿದ್ದಾರೆ. ಅವರು ಬದಲಾದ ಪರಿ ಕಂಡು ಅಭಿಮಾನಿಗಳಿಗೆ ಅಚ್ಚರಿ ಆಗಿದೆ.

Advertisement

ರಣದೀಪ್​ ಹೂಡಾ ಅವರ ಫೋಟೋವೊಂದು ಸಾಮಾಜಿಕ ಜಾಲತಾಣಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಫೋಟೋದಲ್ಲಿ ವೀರ್ ಸಾವರ್ಕರ್ ಚಿತ್ರಕ್ಕಾಗಿ ತಮ್ಮ ದೇಹದ ತೂಕವನ್ನು ಬರೋಬ್ಬರಿ 30 ಕೆಜಿ ಇಳಿಸಿಕೊಂಡಿದ್ದಾರೆ. ಕಟ್ಟುಮಸ್ತಾದ ಬಾಡಿ ಹೊಂದಿದ್ದ ರಣದೀಪ್​ ಹೂಡಾ ಅವರು ಸಾವರ್ಕರ್​ ಪಾತ್ರಕ್ಕಾಗಿ ಸಿಕ್ಕಾಪಟ್ಟೆ ತೆಳ್ಳಗಾಗಿದ್ದಾರೆ.

ಈ ಸಿನಿಮಾದಲ್ಲಿ ರಣದೀಪ್​ ಹೂಡಾ ಜೊತೆ ನಟಿ ಅಂಕಿತಾ ಲೋಖಂಡೆ ಕೂಡ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಮಾರ್ಚ್​ 22ರಂದು ಹಿಂದಿ ಮಾತ್ರವಲ್ಲದೇ ಮರಾಠಿ ಭಾಷೆಯಲ್ಲೂ ಈ ಸಿನಿಮಾ ಬಿಡುಗಡೆ ಆಗಲಿದೆ.

‘ಸ್ವಾತಂತ್ರ್ಯ ವೀರ ಸಾವರ್ಕರ್​’ ಸಿನಿಮಾ ಮಾರ್ಚ್​ 22ರಂದು ಬಿಡುಗಡೆ ಆಗಲಿದೆ.

 

View this post on Instagram

 

A post shared by Randeep Hooda (@randeephooda)

Advertisement
Tags :
Advertisement