For the best experience, open
https://m.newskannada.com
on your mobile browser.
Advertisement

'ಯುವ ಸಾಹಿತ್ಯ ರತ್ನ' ಪ್ರಶಸ್ತಿ ಪಡೆದ ರಂಜನಿ ರಾಘವನ್

ಕಿರುತರೆಯ ಅಂದದ ಚೆಂದದ ನಟಿಯರಲ್ಲಿ ನಟಿ ರಂಜಿನಿ ರಾಘವನ್ ಕೂಡ ಒಬ್ರು. ಕಿರುತೆರೆಯಲ್ಲಿ ಕನ್ನಡತಿ ಧಾರಾವಾಹಿಯ ಮೂಲಕ ಅಭಿಮಾನಿಗಳ ಕಣ್ಣಲ್ಲಿ ತಮ್ಮ ವರ್ಚಸ್ಸನ್ನೆ ಬದಲಾಯಿಸಿ ಬಿಟ್ಟಿದ್ದಾರೆ.
08:08 PM Jul 11, 2024 IST | Ashitha S
 ಯುವ ಸಾಹಿತ್ಯ ರತ್ನ  ಪ್ರಶಸ್ತಿ ಪಡೆದ ರಂಜನಿ ರಾಘವನ್

ಬೆಂಗಳೂರು:  ಕಿರುತರೆಯ ಅಂದದ ಚೆಂದದ ನಟಿಯರಲ್ಲಿ ನಟಿ ರಂಜಿನಿ ರಾಘವನ್ ಕೂಡ ಒಬ್ರು. ಕಿರುತೆರೆಯಲ್ಲಿ ಕನ್ನಡತಿ ಧಾರಾವಾಹಿಯ ಮೂಲಕ ಅಭಿಮಾನಿಗಳ ಕಣ್ಣಲ್ಲಿ ತಮ್ಮ ವರ್ಚಸ್ಸನ್ನೆ ಬದಲಾಯಿಸಿ ಬಿಟ್ಟಿದ್ದಾರೆ.

Advertisement

ಭುವಿ ಪಾತ್ರದ ಮೂಲಕ ಕನ್ನಡತಿಯಲ್ಲಿ ನಮ್ಮನೆಲ್ಲಾ ರಂಜಿಸಿ, ಕರುನಾಡಿಗೆ ಕನ್ನಡ ಕಂಪನ್ನ ಹರಿಸಿದವ್ರು ನಟಿ ರಂಜನಿ. ಈ ಸೀರಿಯಲ್ ಮಧ್ಯೆ ರಂಜಿನಿ ತಮ್ಮೊಳಗೆ ಒಬ್ಬರು ಬರಹಗಾರ್ತಿ ಕೂಡ ಇದ್ದಾರೆ ಅನ್ನೋದನ್ನ ತೋರಿಸಿಕೊಟ್ಟರು. ಧಾರಾವಾಹಿ ಶೂಟಿಂಗ್ ಈ ಬ್ಯುಸಿ ಶೆಡ್ಯೂಲ್‌ನಲ್ಲೂ ಕೂಡ ರಂಜನಿ ತಮ್ಮ ಓದುವ ಹವ್ಯಾಸ, ಕಥೆ ಬರೆಯುವ ಹವ್ಯಾಸವನ್ನ ಮುಂದುವರೆಸಿದ್ರು. ಇನ್ನೂ ಧಾರಾವಾಹಿ ಮಧ್ಯೆದಲ್ಲೇ ರಂಜಿನಿ ಮೊಟ್ಟ ಮೊದಲನೇ ಬಾರಿಗೆ ತಮ್ಮ ಮೊದಲ ಪುಸ್ತಕ ಬಿಡುಗಡೆ ಮಾಡಿದ್ರು ಅದುವೇ ಕಥೆ ಡಬ್ಬಿ.

ಈ ಸಣ್ಣ ಕಥೆಗಳ ಪುಸ್ತಕವಂತೂ ಬಾರಿ ದೊಡ್ಡ ಮಟ್ಟದಲ್ಲಿ ಓದುಗರಿಗೆ ಮುಟ್ಟಿತ್ತು. ಎಲ್ಲಾ ಯುವ ಪೀಳಿಗೆಯನ್ನ ಮತ್ತೆ ಓದುವ ಕಡೆಗೆ ಸೆಳೆಯವಲ್ಲಿ ನಟಿ, ಬರಹಗಾರ್ತಿ ರಂಜಿನಿ ತಮ್ಮ ಯಶಸ್ಸನ್ನ ಕಂಡರು. ವೀಕ್ಷಕರು ತಮ್ಮ ಚೊಚ್ಚಲ ಪುಸ್ತಕಕ್ಕೆ ಕೊಟ್ಟ ಪ್ರೀತಿಗೆ ರಂಜಿನಿ ತಮ್ಮ ಎರಡನೇ ಪುಸ್ತಕವಾಗಿ ಸ್ವೈಪ್ ರೈಟ್ ಎಂಬ ಕಾದಂಬರಿಯನ್ನ ಬರೆದ್ರು. ಇನ್ನೂ ಇದು ಕೂಡ ಅವರ ಸಾಹಿತ್ಯ ಬದುಕಿಗೆ ಯಶಸ್ಸಿನ ಮುನ್ನುಡಿ ಬರೆದಿದೆ.ranjani-raghavan

Advertisement

ಇನ್ನೂ ಸಾಹಿತ್ಯ ಬದುಕಲ್ಲಿ ನಟಿ ರಂಜಿನಿ ತಮ್ಮ ಮೊಟ್ಟಮೊದಲನೇ ಕಾದಂಬರಿ ಸ್ವೈಪ್ ರೈಟ್ ಪುಸ್ತಕಕ್ಕೆ ಯುವ ಸಾಹಿತ್ಯ ರತ್ನ ಪ್ರಶಸ್ತಿ ಭಾಜಿನರಾಗಿದ್ದಾರೆ. ಹೌದು ಪುಸ್ತಕ ಭಂಡಾರ ಬಹುರೂಪಿ ಏರ್ಪಾಡಿಸಿದ್ದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಬರಹಗಾರ್ತಿ ರಂಜಿನಿಗೆ ಯುವ ಸಾಹಿತ್ಯ ರತ್ನ ಪ್ರಶಸ್ತಿ ನೀಡುವ ಮೂಲಕ ಪುಸ್ತಕ ಭಂಡಾರ ಗೌರವಿಸಿದೆ

Advertisement
Tags :
Advertisement