For the best experience, open
https://m.newskannada.com
on your mobile browser.
Advertisement

ಮತದಾರರಿಗೆ 'ರ‍್ಯಾಪಿಡೋ' ಉಚಿತ ಪ್ರಯಾಣದ ಆಫರ್

'ಸವಾರಿಜಿಮ್ಮದರಿಕಿ' ಉಪಕ್ರಮದ ಭಾಗವಾಗಿ ರಾಜ್ಯದ ವಿಶೇಷಚೇತನರು ಮತ್ತು ಹಿರಿಯ ನಾಗರಿಕ ಮತದಾರರಿಗೆ ಉಚಿತ ಬೈಕ್ , ಟ್ಯಾಕ್ಸಿ, ಆಟೋ ಮತ್ತು ಕ್ಯಾಬ್ ಗಳಲ್ಲಿ ತೆರಳುವ ಅವಕಾಶ ಮಾಡಿಕೊಡಲಾಗುವುದು ಎಂದು 'ರ‍್ಯಾಪಿಡೋ' ಬುಧವಾರ ಹೇಳಿದೆ.
05:39 PM Apr 24, 2024 IST | Ashitha S
ಮತದಾರರಿಗೆ  ರ‍್ಯಾಪಿಡೋ  ಉಚಿತ ಪ್ರಯಾಣದ ಆಫರ್

ಬೆಂಗಳೂರು: "ಸವಾರಿಜಿಮ್ಮದರಿಕಿ" ಉಪಕ್ರಮದ ಭಾಗವಾಗಿ ರಾಜ್ಯದ ವಿಶೇಷಚೇತನರು ಮತ್ತು ಹಿರಿಯ ನಾಗರಿಕ ಮತದಾರರಿಗೆ ಉಚಿತ ಬೈಕ್ , ಟ್ಯಾಕ್ಸಿ, ಆಟೋ ಮತ್ತು ಕ್ಯಾಬ್ ಗಳಲ್ಲಿ ತೆರಳುವ ಅವಕಾಶ ಮಾಡಿಕೊಡಲಾಗುವುದು ಎಂದು 'ರ‍್ಯಾಪಿಡೋ' ಬುಧವಾರ ಹೇಳಿದೆ.

Advertisement

ಬೆಂಗಳೂರು, ಮೈಸೂರು ಮತ್ತು ಮಂಗಳೂರಿನ ಮತದಾರರು ಏಪ್ರಿಲ್ 26 ರಂದು VOTENOW' ಕೋಡ್ ಬಳಸಿಕೊಂಡು ಮತಗಟ್ಟೆಗಳಿಗೆ ಉಚಿತವಾಗಿ ಪ್ರಯಾಣಿಸಬಹುದಾಗಿದೆ.

"ಭಾರತೀಯ ಚುನಾವಣಾ ಆಯೋಗ (ಇಸಿಐ) ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಹಯೋಗದೊಂದಿಗೆ 2024 ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಬೆಂಗಳೂರಿನಲ್ಲಿರುವ ವಿಶೇಷ ಚೇತನರು ಮತ್ತು ಹಿರಿಯ ನಾಗರಿಕ ಮತದಾರರಿಗೆ ಉಚಿತ ಆಟೋ ಮತ್ತು ಕ್ಯಾಬ್ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು 'ರ‍್ಯಾಪಿಡೋ ಹೇಳಿಕೆಯಲ್ಲಿ ತಿಳಿಸಿದೆ.

Advertisement

ವಿಶೇಷ ಚೇತನರು ಮತ್ತು ಹಿರಿಯ ನಾಗರಿಕ ಮತದಾರರು ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಚಲಾಯಿಸಲು ಸಮಾನ ಅವಕಾಶ ಕಲ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು 'ರ‍್ಯಾಪಿಡೋ ಸಹ ಸಂಸ್ಥಾಪಕ ಪವನ್ ಗುಂಟುಪಲ್ಲಿ ಹೇಳಿದ್ದಾರೆ.

Advertisement
Tags :
Advertisement