For the best experience, open
https://m.newskannada.com
on your mobile browser.
Advertisement

ಡೀಪ್‌ ಫೇಕ್‌ ವಿಡಿಯೋ ಪ್ರಕರಣ : ಪೊಲೀಸ್‌ ವಿಚಾರಣೆಗೆ ಹಾಜರಾದ ರಶ್ಮಿಕಾ

ಇತ್ತೀಚೆಗೆ ರಶ್ಮಿಕಾ ಮಂದಣ್ಣಗೆ ಸಂಬಂಧಿಸಿದ ಡೀಪ್ ಫೇಕ್ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಈ ಸಂಬಂಧ ದೆಹಲಿ ಪೊಲೀಸರ ವಿಚಾರಣೆಗೆ ರಶ್ಮಿಕಾ ಮಂದಣ್ಣ ಹಾಜರಾಗಿದ್ದಾರೆ. ದೆಹಲಿ ಪೊಲೀಸ್ ವಿಶೇಷ ಘಟಕದ ಐಎಫ್​ಎಸ್​ಓ ತಂಡವು ರಶ್ಮಿಕಾ ಮಂದಣ್ಣರ ಹೇಳಿಕೆಯನ್ನು ದಾಖಲಿಸಿಕೊಂಡಿದೆ.
03:32 PM Apr 30, 2024 IST | Nisarga K
ಡೀಪ್‌ ಫೇಕ್‌ ವಿಡಿಯೋ ಪ್ರಕರಣ   ಪೊಲೀಸ್‌ ವಿಚಾರಣೆಗೆ ಹಾಜರಾದ ರಶ್ಮಿಕಾ
ಡೀಪ್‌ ಫೇಕ್‌ ವಿಡಿಯೋ ಪ್ರಕರಣ : ಪೊಲೀಸ್‌ ವಿಚಾರಣೆಗೆ ಹಾಜರಾದ ರಶ್ಮಿಕಾ

ಮುಂಬೈ: ಇತ್ತೀಚೆಗೆ ರಶ್ಮಿಕಾ ಮಂದಣ್ಣಗೆ ಸಂಬಂಧಿಸಿದ ಡೀಪ್ ಫೇಕ್ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಈ ಸಂಬಂಧ ದೆಹಲಿ ಪೊಲೀಸರ ವಿಚಾರಣೆಗೆ ರಶ್ಮಿಕಾ ಮಂದಣ್ಣ ಹಾಜರಾಗಿದ್ದಾರೆ. ದೆಹಲಿ ಪೊಲೀಸ್ ವಿಶೇಷ ಘಟಕದ ಐಎಫ್​ಎಸ್​ಓ ತಂಡವು ರಶ್ಮಿಕಾ ಮಂದಣ್ಣರ ಹೇಳಿಕೆಯನ್ನು ದಾಖಲಿಸಿಕೊಂಡಿದೆ.

Advertisement

ರಶ್ಮಿಕಾ ಮಂದಣ್ಣ ಅಭಿನಯದ ಅನಿಮಲ್ ಚಿತ್ರ ಬಿಡುಗಡೆಗೂ ಮೊದಲು ಅಂದರೆ ನವೆಂಬರ್ 6, 2023ರಂದು ಸೋಶಿಯಲ್ ಮೀಡಿಯಾದಲ್ಲಿ ಡೀಪ್ ಫೇಕ್ ವಿಡಿಯೋ ವೈರಲ್ ಆಗಿತ್ತು. ಬ್ರಿಟಿಷ್ ಸೋಶಿಯಲ್ ಮೀಡಿಯಾ ಸ್ಟಾರ್ ಝಾರ ಪಟೇಲ್ ವಿಡಿಯೋಗೆ ರಶ್ಮಿಕಾರ ಫೋಟೋ ಬಳಸಿಕೊಳ್ಳಲಾಗಿತ್ತು.

ಈ ಪ್ರಕರಣದಲ್ಲಿ ಜನವರಿ 21 ರಂದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇ. ನವೀನ್ ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈತ ರಶ್ಮಿಕಾ ಮಂದಣ್ಣ ಸೇರಿ ದಕ್ಷಿಣ ಭಾರತದ ಇಬ್ಬರು ನಟಿಯರ ಸೆಲೆಬ್ರಿಟಿ ಪೇಜ್​ಗಳನ್ನು ನಡೆಸುತ್ತಿದ್ದ. ಈ ಮೂಲಕ ತನ್ನ ಫಾಲೋವರ್ಸ್‌ನ್ನು ಹೆಚ್ಚಿಸಿಕೊಳ್ಳುವ ಪ್ಲಾನ್‌ ಅತನದಾಗಿತ್ತು ಎನ್ನಲಾಗಿದೆ.

Advertisement

Advertisement
Tags :
Advertisement