For the best experience, open
https://m.newskannada.com
on your mobile browser.
Advertisement

ʼನನ್ನನ್ನು ನೋಡಬೇಡಿ, ಅಟಲ್‌ ಸೇತುವೆ ನೋಡಿʼ ಎಂದ ರಶ್ಮಿಕಾಗೆ ಪಿಎಂ ಮೋದಿ ಮೆಚ್ಚುಗೆ

ನಟಿ ರಶ್ಮಿಕಾ ಮಂದಣ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಅವರ ಸಿನಿಮಾಗಳು. ಸಾಲು ಸಾಲು ಸಿನಿಮಾಗಳು ಹಿಟ್ ಆಗಿದ್ದರಿಂದ ಅವರ ಖ್ಯಾತಿ ಹೆಚ್ಚಿದೆ.
11:05 AM May 17, 2024 IST | Ashitha S
ʼನನ್ನನ್ನು ನೋಡಬೇಡಿ  ಅಟಲ್‌ ಸೇತುವೆ ನೋಡಿʼ ಎಂದ ರಶ್ಮಿಕಾಗೆ ಪಿಎಂ ಮೋದಿ ಮೆಚ್ಚುಗೆ

ದೆಹಲಿ: ನಟಿ ರಶ್ಮಿಕಾ ಮಂದಣ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಅವರ ಸಿನಿಮಾಗಳು. ಸಾಲು ಸಾಲು ಸಿನಿಮಾಗಳು ಹಿಟ್ ಆಗಿದ್ದರಿಂದ ಅವರ ಖ್ಯಾತಿ ಹೆಚ್ಚಿದೆ.

Advertisement

ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಯಲ್ಲಿ ಅವರಿಗೆ ಫ್ಯಾನ್ಸ್ ಇದ್ದಾರೆ. ಈಗ ಅವರು ಅಟಲ್ ಸೇತು ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಮುಂಬೈನ ನೂತನ ಅಟಲ್‌ ಸೇತು ಬಗ್ಗೆ ಮುಕ್ತಕಂಠದಿಂದ ಹೊಗಳಿದ್ದರು. ನನ್ನನ್ನು ನೋಡಬೇಡಿ, ಅಟಲ್‌ ಸೇತುವೆ ನೋಡಿ. . .ಈ ರಸ್ತೆಯಲ್ಲಿ ಈ ಮೊದಲು ಎರಡು ಗಂಟೆಗಳ ಕಾಲ ಕ್ರಮಿಸಬೇಕಿತ್ತು. ಆದರೆ ಇದೀಗ ಕೇವಲ 20 ನಿಮಿಷಗಳಲ್ಲಿ ಪ್ರಯಾಣಿಸಬಹುದು. ಈ ಸೇತುವೆ ನಿರ್ಮಾಣಕ್ಕೂ ಮೊದಲು, ಇದು ಅಸಾಧಯ ಎಂದವರೇ ಹೆಚ್ಚು ಮಂದಿ. ಆದರೆ, ಈಗ ಅದು ಸಾಕಾರಗೊಂಡಿದೆ.

ಇಂದು ನಾವು ನವ ಮುಂಬೈನಿಂದ ಮುಂಬೈ ಮತ್ತು ಗೋವಾದಿಂದ ಮುಂಬೈ ಮತ್ತು ಬೆಂಗಳೂರಿನಿಂದ ಮುಂಬೈ ಎಲ್ಲ ಕಡೆಗೂ ಸುಲಭವಾಗಿ ಪ್ರಯಾಣಿಸಬಹುದು, ಇಂತಹ ಸೌಕರ್ಯದ ಕುರಿತು ಹೆಮ್ಮೆಯಾಗುತ್ತಿದೆ. ಕಳೆದ 10 ವರ್ಷಗಳಲ್ಲಿ ಭಾರತ ಬಹಳಷ್ಟು ಬದಲಾಗಿದೆ. ಭಾರತ ದೊಡ್ಡದಾಗಿ ಕನಸು ಕಾಣಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು. ಆದರೆ, ಏಳೇ ವರ್ಷಗಳಲ್ಲಿ ಈ ದೊಡ್ಡ ಬ್ರಿಡ್ಜ್ ನಿರ್ಮಾಣ ಮಾಡಿದ್ದೇವೆ. ಅಟಲ್ ಸೇತು ಇದು ಕೇವಲ ಸೇತುವೆ ಅಲ್ಲ, ಯುವ ಭಾರತಕ್ಕೆ ಇದು ಗ್ಯಾರಂಟಿ. ಈ ರೀತಿಯ ನೂರು ಅಟಲ್ ಸೇತುವೆ ಸ್ಥಾಪಿಸಬೇಕು ಎಂದರೆ ಅಭಿವೃದ್ಧಿಗೆ ಮತ ಹಾಕಿ’ ಎಂದು ರಶ್ಮಿಕಾ ಹೇಳಿಕೊಂಡಿದ್ದರು.

Advertisement

ಈ ಟ್ವೀಟ್​ನ ಪ್ರಧಾನಿ ನರೇಂದ್ರ ಮೋದಿ ರೀಟ್ವೀಟ್ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಪೋಸ್ಟ್‌ ಶೇರ್‌ ಮಾಡುತ್ತಿದ್ದಂತೆ, ಅದೇ ಪೋಸ್ಟ್‌ ಅನ್ನು ಮರು ಟ್ವಿಟ್‌ ಮಾಡಿದ ಪಿಎಂ, ಖಂಡಿತವಾಗಿ ಹೌದು! ಜನರನ್ನು ಸಂಪರ್ಕಿಸುವುದು ಮತ್ತು ಜೀವನವನ್ನು ಸುಧಾರಿಸುವುದಕ್ಕಿಂತ ಹೆಚ್ಚು ತೃಪ್ತಿಕರವಾದದ್ದೇನೂ ಇಲ್ಲ" ಎಂದು ಒಂದೇ ಸಾಲಿನಲ್ಲಿ ಪ್ರತಿಕ್ರಿಯಿಸಿದ್ದಾರೆ.

https://x.com/narendramodi/status/1791144829336084582

Advertisement
Tags :
Advertisement