ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ರಶ್ಮಿಕಾ ಮಂದಣ್ಣ ಡೀಪ್​ಫೇಕ್​ ವಿಡಿಯೋ: ಗೆಳತಿ ಪರ ನಿಂತ ದೇವರಕೊಂಡ

ನಟಿ ರಶ್ಮಿಕಾ ಮಂದಣ್ಣಅವರ ಡೀಪ್​ಫೇಕ್​ ವಿಡಿಯೋ ಬಗ್ಗೆ ಎಲ್ಲೆಲ್ಲೂ ಚರ್ಚೆ ಆಗುತ್ತಿದ್ದು,  ಅವರ ನಕಲಿ ವೈರಲ್​ ವಿಡಿಯೋದ  ಕುರಿತು ಪ್ರಕಟ ಆಗಿರುವ ಸುದ್ದಿಯನ್ನು ವಿಜಯ್​ ದೇವರಕೊಂಡ  ಶೇರ್​ ಮಾಡಿಕೊಂಡು ತಮ್ಮ ಗೆಳತಿಯ ಪರವಾಗಿ ಅವರು ವಾದ ಮಾಡಿದ್ದಾರೆ. 
06:47 PM Nov 08, 2023 IST | Ashika S

ಮುಂಬೈ : ನಟಿ ರಶ್ಮಿಕಾ ಮಂದಣ್ಣಅವರ ಡೀಪ್​ಫೇಕ್​ ವಿಡಿಯೋ ಬಗ್ಗೆ ಎಲ್ಲೆಲ್ಲೂ ಚರ್ಚೆ ಆಗುತ್ತಿದ್ದು,  ಅವರ ನಕಲಿ ವೈರಲ್​ ವಿಡಿಯೋದ  ಕುರಿತು ಪ್ರಕಟ ಆಗಿರುವ ಸುದ್ದಿಯನ್ನು ವಿಜಯ್​ ದೇವರಕೊಂಡ  ಶೇರ್​ ಮಾಡಿಕೊಂಡು ತಮ್ಮ ಗೆಳತಿಯ ಪರವಾಗಿ ಅವರು ವಾದ ಮಾಡಿದ್ದಾರೆ.

Advertisement

ಟಾಲಿವುಡ್​ನ ಸೂಪರ್​ ಹಿಟ್​ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್​ ದೇವರಕೊಂಡ  ನಡುವೆ ಒಳ್ಳೆಯ ಬಾಂಧವ್ಯ ಇದೇ. ವೃತ್ತಿಜೀವನದಲ್ಲಿ ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತಿದ್ದಾರೆ. ಈಗ ರಶ್ಮಿಕಾ ಮಂದಣ್ಣ ಅವರ ನಕಲಿ ವಿಡಿಯೋ ವೈರಲ್​ ಆಗಿದ್ದನ್ನು ವಿಜಯ್​ ದೇವರಕೊಂಡ ಖಂಡಿಸಿದ್ದಾರೆ.

‘ರಶ್ಮಿಕಾ ಮಂದಣ್ಣ ಫೇಕ್​ ವಿಡಿಯೋ ವೈರಲ್ ಆದ ಬಳಿಕ ಡೀಪ್​ಫೇಕರ್ಸ್​ ನಿಯಂತ್ರಣಕ್ಕೆ ಮುಂದಾದ ಪೊಲೀಸರು’ ಎಂದು ಪ್ರಕಟ ಆಗಿರುವ ಸುದ್ದಿಯನ್ನು ವಿಜಯ್​ ದೇವರಕೊಂಡ ಶೇರ್​ ಮಾಡಿಕೊಂಡಿದ್ದಾರೆ. ‘ಭವಿಷ್ಯಕ್ಕಾಗಿ ಇದು ತುಂಬಾ ಮುಖ್ಯವಾದ ಕ್ರಮ. ಈ ರೀತಿ ಯಾರಿಗೂ ಆಗಬಾರದು. ಸೈಬರ್​ ಕ್ರೈಮ್​ ತಡೆಯಲು ಸಮರ್ಥವಾದ ಮತ್ತು ಸುಲಭಕ್ಕೆ ಜನರ ಸಂಪರ್ಕಕ್ಕೆ ಸಿಗುವಂತಹ ಸೈಬರ್​ ಘಟಕ ಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾದರೆ ಜನರಿಗೆ ಹೆಚ್ಚು ರಕ್ಷಣೆ ಸಿಗುತ್ತದೆ’ ಎಂದು ವಿಜಯ್​ ದೇವರಕೊಂಡ ಬರೆದುಕೊಂಡಿದ್ದಾರೆ.

Advertisement

ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಬಾಲಿವುಡ್​ ನಟ ಇಶಾನ್​ ಕಟ್ಟರ್​ ಅವರು ಕೂಡ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಇದನ್ನು ಖಂಡಿಸುತ್ತೇನೆ. ಡೀಪ್​ಫೇಕ್​ ಎಂಬುದು ಒಳ್ಳೆಯದಲ್ಲ. ಅನುಮತಿ ಇಲ್ಲದೇ ಒಬ್ಬರ ದೇಹ ಮತ್ತು ಮುಖವನ್ನು ಬಳಸುವುದು ಸರಿಯಲ್ಲ. ಅಂಥ ವಿಚಾರಗಳಿಗೆ ನನ್ನ ಬೆಂಬಲ ಇಲ್ಲ’ ಎಂದು ಇಶಾನ್​ ಕಟ್ಟರ್​ ಹೇಳಿದ್ದಾರೆ.

Advertisement
Tags :
LatetsNewsNewsKannadaಡೀಪ್​ಫೇಕ್​ನಟಿ ರಶ್ಮಿಕಾ ಮಂದಣ್ಣವಿಡಿಯೋವೈರಲ್
Advertisement
Next Article