For the best experience, open
https://m.newskannada.com
on your mobile browser.
Advertisement

ಯುಪಿಐ ಮೂಲಕ ಕ್ಯಾಷ್ ಡೆಪಾಸಿಟ್​ಗೆ ಅವಕಾಶ: ಆರ್​ಬಿಐ ಮಹತ್ವದ ಘೋಷಣೆ

ದೇಶದಲ್ಲಿ ಚಿಲ್ಲರೆ ಹಣದುಬ್ಬರವನ್ನು ಶೇ 4ರ ಮಿತಿಯಲ್ಲಿ ಕಾಯ್ದುಕೊಂಡು ಬೆಲೆಯಲ್ಲಿ ಸ್ಥಿರತೆ ಕಾಪಾಡುವ ಉದ್ದೇಶದಿಂದ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ ನಿರ್ಧರಿಸಿದೆ. ಈ ಮೂಲಕ ಈಗಿರುವ ಶೇ 6.5 ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
01:03 PM Apr 05, 2024 IST | Ashitha S
ಯುಪಿಐ ಮೂಲಕ ಕ್ಯಾಷ್ ಡೆಪಾಸಿಟ್​ಗೆ ಅವಕಾಶ  ಆರ್​ಬಿಐ ಮಹತ್ವದ ಘೋಷಣೆ

ನವದೆಹಲಿ: ದೇಶದಲ್ಲಿ ಚಿಲ್ಲರೆ ಹಣದುಬ್ಬರವನ್ನು ಶೇ 4ರ ಮಿತಿಯಲ್ಲಿ ಕಾಯ್ದುಕೊಂಡು ಬೆಲೆಯಲ್ಲಿ ಸ್ಥಿರತೆ ಕಾಪಾಡುವ ಉದ್ದೇಶದಿಂದ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ ನಿರ್ಧರಿಸಿದೆ. ಈ ಮೂಲಕ ಈಗಿರುವ ಶೇ 6.5 ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

Advertisement

ರೆಪೊ ದರದಲ್ಲಿ ಯಥಾಸ್ಥಿತಿ ಇರುವ ಕಾರಣ ಮನೆ ಖರೀದಾರರಿಗೆ ಇದು ಶುಭ ಸುದ್ದಿಯಾಗಿದೆ. ಏಕೆಂದರೆ ಮನೆ ಖರೀದಿಸಿದವರಿಗೆ ಮಾಸಿಕ ಕಂತುಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ.

ಇದರ ಜೊತೆಗೆ ಯುಪಿಐ ಬಳಸಿ ಕ್ಯಾಷ್ ಡೆಪಾಸಿಟ್ ಮಾಡುವ ಅವಕಾಶ ಈಗ ಸಿಕ್ಕಿದೆ. ಎಂಪಿಸಿ ಸಭೆ ಬಳಿಕ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ಸೌಲಭ್ಯವನ್ನು ಘೋಷಿಸಿದ್ದಾರೆ. ಕ್ಯಾಷ್ ಡೆಪಾಸಿಟ್ ಮೆಷಿನ್​ಗಳಲ್ಲಿ (ಸಿಡಿಎಂ) ಎಟಿಎಂ ಕಾರ್ಡ್ ಬಳಸಿ ನೀವು ನಿಮ್ಮ ಖಾತೆಗೆ ಕ್ಯಾಷ್ ಡೆಪಾಸಿಟ್ ಮಾಡಬಹುದು.

Advertisement

ಈಗ ಇದರ ಜೊತೆಗೆ ಯುಪಿಐ ಮೂಲಕ ಈ ಮೆಷಿನ್​ಗಳಿಗೆ ಲಾಗಿನ್ ಆಗಿ ಕ್ಯಾಷ್ ಡೆಪಾಸಿಟ್ ಮಾಡಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿ ಆರ್​ಬಿಐ ಸದ್ಯದಲ್ಲೇ ಬಹಿರಂಗಪಡಿಸಲಿದೆ.

ಇನ್ನು ಆರ್​ಬಿ ಇತರ ಘೋಷಣೆಗಳಲ್ಲಿ, ಇಂಟರ್ನ್ಯಾಷನಲ್ ಫೈನಾನ್ಷಿಯಲ್ ಸರ್ವಿಸಸ್ ಸೆಂಟರ್​ನಲ್ಲಿ (ಐಎಫ್​ಎಸ್​ಸಿ) ಸಾವರೀನ್ ಗೋಲ್ಡ್ ಬಾಂಡ್​ಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಸ್ಕೀಮ್ ಆರಂಭಿಸಲಾಗುತ್ತಿದೆ.

ಗವರ್ನ್ಮೆಂಟ್ ಸೆಕ್ಯೂರಿಟಿಗಳಲ್ಲಿ ರೀಟೇಲ್ ಹೂಡಿಕೆದಾರರು ಹೂಡಿಕೆ ಮಾಡಲು ರೀಟೇಲ್ ಡೈರೆಕ್ಟ್ ಸ್ಕೀಮ್ ಅನ್ನು 2020ರಲ್ಲಿ ಆರಂಭಿಸಲಾಗಿದೆ. ಇದರ ಅಧಿಕೃತ ಪೋರ್ಟಲ್ ಇದೆ. ಇದೀಗ ಮೊಬೈಲ್ ಆ್ಯಪನ್ನೂ ಆರ್​ಬಿಐ ಬಿಡುಗಡೆ ಮಾಡಿದೆ.

ಅಲ್ಲದೇ ಪೇಟಿಎಂ, ಫೋನ್​ಪೆ ಇತ್ಯಾದಿ ಪ್ರೀಪೇಡ್ ಪೆಮೆಂಟ್ ಇನ್ಸ್​ಟ್ರುಮೆಂಟ್ಸ್​ನಿಂದ (ಪಿಪಿಐ) ಯುಪಿಐ ಪಾವತಿ ಮಾಡಬೇಕಾದರೆ ಆ ಪಿಪಿಐಗಳ ಪ್ಲಾಟ್​ಫಾರ್ಮ್ ಅನ್ನು ಬಳಸಬೇಕಾಗುತ್ತದೆ. ಇದೀಗ ಥರ್ಡ್ ಪಾರ್ಟಿ ಯುಪಿಐ ಆ್ಯಪ್​ಗಳನ್ನು ಇದಕ್ಕಾಗಿ ಬಳಸಲು ಅವಕಾಶ ಕೊಡಲು ಆರ್​ಬಿಐ ನಿರ್ಧರಿಸಿದೆ.

Advertisement
Tags :
Advertisement