ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಐಪಿಎಲ್ 2024: ವರ್ಷದ ಕ್ರೀಡಾ ಫ್ರಾಂಚೈಸ್ ಪ್ರಶಸ್ತಿ ಬಾಚಿಕೊಂಡ ಆರ್‌ ಸಿ ಬಿ

ಇಂಡಿಯನ್ ಪ್ರೀಮಿಯರ್ ಲೀಗ್​​​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ರಶಸ್ತಿ ಗೆಲ್ಲುವ ಕನಸು ಕನಸಾಗಿಯೇ ಉಳಿದಿದೆ. ಕಳೆದ 16 ಸೀಸನ್​ಗಳಿಂದ ಆರ್​ಸಿಬಿ ಚೊಚ್ಚಲ ಬಾರಿ ಕಿರೀಟ ಮುಡಿಗೇರಿಸಿಕೊಳ್ಳುವ ಪ್ರಯತ್ನದಲ್ಲಿದೆ. ಈ ಪ್ರಯತ್ನದ ಫಲವಾಗಿ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ವರ್ಷದ ಅತ್ಯುತ್ತಮ ಕ್ರೀಡಾ ಫ್ರಾಂಚೈಸ್ ಪ್ರಶಸ್ತಿ ದೊರಕಿದೆ.
05:44 PM Dec 05, 2023 IST | Ashitha S

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್​​​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ರಶಸ್ತಿ ಗೆಲ್ಲುವ ಕನಸು ಕನಸಾಗಿಯೇ ಉಳಿದಿದೆ. ಕಳೆದ 16 ಸೀಸನ್​ಗಳಿಂದ ಆರ್​ಸಿಬಿ ಚೊಚ್ಚಲ ಬಾರಿ ಕಿರೀಟ ಮುಡಿಗೇರಿಸಿಕೊಳ್ಳುವ ಪ್ರಯತ್ನದಲ್ಲಿದೆ. ಈ ಪ್ರಯತ್ನದ ಫಲವಾಗಿ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ವರ್ಷದ ಅತ್ಯುತ್ತಮ ಕ್ರೀಡಾ ಫ್ರಾಂಚೈಸ್ ಪ್ರಶಸ್ತಿ ದೊರಕಿದೆ.

Advertisement

ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (KIIT) - CII ಸ್ಪೋರ್ಟ್ಸ್ ಬಿಸಿನೆಸ್ ಅವಾರ್ಡ್ಸ್ 2023 ರ ಮೊದಲ ಆವೃತ್ತಿಯಲ್ಲಿ ಆರ್​ಸಿಬಿಗೆ ಅತ್ಯುತ್ತಮ ಕ್ರೀಡಾ ಫ್ರಾಂಚೈಸ್ ಪ್ರಶಸ್ತಿ ನೀಡಲಾಗಿದೆ. ಈ ಮೂಲಕ ಆರ್​ಸಿಬಿ ದೇಶೀಯ ಅಂಗಳದ ಅತ್ಯುತ್ತಮ ಫ್ರಾಂಚೈಸ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇನ್ನು ಈ ಬಾರಿ ಆರ್‌ ಸಿ ಬಿ ಮ್ಯಾನೇಜ್ಮೆಂಟ್​ನಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಮುಖ್ಯ ಕೋಚ್ ಆಗಿ ಸಂಜಯ್ ಬಂಗಾರ್ ಬದಲಿಗೆ ಆ್ಯಂಡಿ ಫ್ಲವರ್​ ಅವರನ್ನು ಕರೆತರಲಾಗಿದೆ. ಹಾಗೆಯೇ ತಂಡದ ಡೈರೆಕ್ಟರ್ ಆಗಿ ಮೈಕ್ ಹಸ್ಸನ್ ಸ್ಥಾನದಲ್ಲಿ ಮೊ ಬೊಬಟ್ ಅವರನ್ನು ನೇಮಿಸಲಾಗಿದೆ.

Advertisement

Advertisement
Tags :
cricketGOVERNMENTindiaLatestNewsNewsKannadaRCBಆರ್‌ ಸಿ ಬಿ
Advertisement
Next Article