For the best experience, open
https://m.newskannada.com
on your mobile browser.
Advertisement

ಅಭಿಮಾನಿಗಳ ಕನಸು ನನಸು: ಆರ್​ಸಿಬಿ ಮುಡಿಗೆ ಡಬ್ಲ್ಯುಪಿಎಲ್ ಚಾಂಪಿಯನ್ ಕಿರೀಟ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳೆಯರ ತಂಡವು ಭಾನುವಾರ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ಪ್ರಶಸ್ತಿ ಗೆದ್ದಿತು. ಆರ್‌ಸಿಬಿ ತಂಡದ ಅಭಿಮಾನಿಗಳ 'ಕನಸು' ಈಡೇರಿತು. ಆರ್‌ಸಿಬಿ ಪುರುಷರ ತಂಡವು 16 ವರ್ಷಗಳಿಂದ ಪ್ರಶಸ್ತಿ ಜಯಿಸುವ ಕನಸು ಈಡೇರಿಲ್ಲ.
06:53 AM Mar 18, 2024 IST | Ashitha S
ಅಭಿಮಾನಿಗಳ ಕನಸು ನನಸು  ಆರ್​ಸಿಬಿ ಮುಡಿಗೆ ಡಬ್ಲ್ಯುಪಿಎಲ್ ಚಾಂಪಿಯನ್ ಕಿರೀಟ

ವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳೆಯರ ತಂಡವು ಭಾನುವಾರ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ಪ್ರಶಸ್ತಿ ಗೆದ್ದಿತು. ಆರ್‌ಸಿಬಿ ತಂಡದ ಅಭಿಮಾನಿಗಳ 'ಕನಸು' ಈಡೇರಿತು. ಆರ್‌ಸಿಬಿ ಪುರುಷರ ತಂಡವು 16 ವರ್ಷಗಳಿಂದ ಪ್ರಶಸ್ತಿ ಜಯಿಸುವ ಕನಸು ಈಡೇರಿಲ್ಲ.

Advertisement

ಆದರೆ ಇದೀಗ ಸ್ಮೃತಿ ಮಂದಾನ ನಾಯಕತ್ವದ ಮಹಿಳಾ ತಂಡವು ಡಬ್ಲ್ಯುಪಿಎಲ್‌ನ ಎರಡನೇ ಆವೃತ್ತಿಯಲ್ಲಿಯೇ ಪ್ರಶಸ್ತಿ ಜಯಿಸಿತು. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ 8 ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಜಯಭೇರಿ ಬಾರಿಸಿತು.

ಆರ್‌ಸಿಬಿ ತಂಡದ ಸೋಫಿ ಮಾಲಿನೊ ಅವರ 'ಮ್ಯಾಜಿಕ್ ಓವರ್' ಮತ್ತು ಕನ್ನಡತಿ ಶ್ರೇಯಾಂಕ ಪಾಟೀಲ ಸ್ಪಿನ್ ಮೋಡಿಯಿಂದಾಗಿ ಬೆಂಗಳೂರು ತಂಡವು ಜಯಭೇರಿ ಬಾರಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ತಂಡವು 18.3 ಓವರ್‌ಗಳಲ್ಲಿ 113 ರನ್‌ ಗಳಿಸಿತು. ಈ ಸಾಧಾರಣ ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ಜಯ ಸುಲಭವಾಗಿ ಒಲಿಯಲಿಲ್ಲ. ಡೆಲ್ಲಿ ಬೌಲರ್‌ಗಳ ತಂತ್ರಗಾರಿಕೆಯನ್ನು ಎಚ್ಚರಿಕೆಯಿಂದ ಎದುರಿಸುವ ಸವಾಲನ್ನು ಆರ್‌ಸಿಬಿ ಎದುರಿಸಿತು. ಇದರಿಂದಾಗಿ ಫಲಿತಾಂಶವು ಕೊನೆಯ ಓವರ್‌ನಲ್ಲಿ ನಿರ್ಧಾರವಾಯಿತು. ಕೊನೆಯ ಓವರ್‌ನ ನಾಲ್ಕು ಎಸೆತಗಳಲ್ಲಿ ತಂಡದ ಗೆಲುವಿಗೆ ಮೂರು ರನ್‌ಗಳು ಬೇಕಿದ್ದವು. ಆಗ ರಿಚಾ ಘೋಷ್ ಗಳಿಸಿದ ವಿಜಯ ಬೌಂಡರಿಯೊಂದಿಗೆ ಆರ್‌ಸಿಬಿ ಸಂಭ್ರಮ ಗರಿಗೆದರಿತು. ಡೆಲ್ಲಿ ತಂಡವು ಸತತ ಎರಡನೇ ವರ್ಷವೂ ರನ್ನರ್ಸ್ ಅಪ್ ಆಯಿತು.

Advertisement

ಇನ್ನು ಪ್ರಶಸ್ತಿ ಗೆದ್ದ ಆರ್‌ಸಿಬಿ ತಂಡಕ್ಕೆ ₹6 ಕೋಟಿ ಬಹುಮಾನ, ರನ್ನರ್ಸ್‌ ಅಪ್‌ ಡೆಲ್ಲಿ ಕ್ಯಾಪಿಟಲ್ಸ್‌ಗೆ ₹3 ಕೋಟಿ ಬಹುಮಾನ. ಶ್ರೇಯಾಂಕ ಪಾಟೀಲಗೆ ಪರ್ಪಲ್‌ ಕ್ಯಾಪ್‌, ಎಲಿಸ್‌ ಪೆರಿಗೆ ಆರೇಂಜ್‌ ಕ್ಯಾಪ್‌ ಸಿಕ್ಕಿದೆ.

Advertisement
Tags :
Advertisement