For the best experience, open
https://m.newskannada.com
on your mobile browser.
Advertisement

ಆರ್​​ಸಿಬಿ ತಂಡದ ಸತತ 5 ಪಂದ್ಯಗಳ ಗೆಲುವಿಗೆ ಕಾರಣ ಯಾರು ಗೊತ್ತಾ?

ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ 17ನೇ ಸೀಸನ್​​ ಮುಕ್ತಾಯ ಹಂತಕ್ಕೆ ಬಂದಿದೆ. ಸತತ 6 ಪಂದ್ಯ ಗೆದ್ದು ಪ್ಲೇ ಆಫ್​ ರೇಸ್​​ನಲ್ಲಿರೋ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ಟೀಮ್​​​​​ ಚೆನ್ನೈ ವಿರುದ್ಧ ಮುಂದಿನ ಪಂದ್ಯ ಗೆಲ್ಲಲೇಬೇಕಿದೆ.
05:36 PM May 15, 2024 IST | Ashitha S
ಆರ್​​ಸಿಬಿ ತಂಡದ ಸತತ 5 ಪಂದ್ಯಗಳ ಗೆಲುವಿಗೆ ಕಾರಣ ಯಾರು ಗೊತ್ತಾ

ಬೆಂಗಳೂರು: ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ 17ನೇ ಸೀಸನ್​​ ಮುಕ್ತಾಯ ಹಂತಕ್ಕೆ ಬಂದಿದೆ. ಸತತ 6 ಪಂದ್ಯ ಗೆದ್ದು ಪ್ಲೇ ಆಫ್​ ರೇಸ್​​ನಲ್ಲಿರೋ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ಟೀಮ್​​​​​ ಚೆನ್ನೈ ವಿರುದ್ಧ ಮುಂದಿನ ಪಂದ್ಯ ಗೆಲ್ಲಲೇಬೇಕಿದೆ. ಚೆನ್ನೈ ವಿರುದ್ಧ ಕೇವಲ 18 ರನ್​​ನಿಂದ ಗೆದ್ದರೆ ಸಾಕು ಆರ್​​ಸಿಬಿ ಪ್ಲೇ ಆಫ್​ಗೆ ಹೋಗೋದು ಪಕ್ಕಾ. ಈ ಮಧ್ಯೆ

Advertisement

ನಾವು ಬ್ಯಾಕ್​ ಟು ಬ್ಯಾಕ್​ 5 ಪಂದ್ಯ ಗೆದ್ದು ಪ್ಲೇ ಆಫ್​ ರೇಸ್​ನಲ್ಲಿ ಇದ್ದೇವೆ. ಇದು ನಮಗೆ ಬಹಳ ಸಂತೋಷ ತಂದಿದೆ. ಮೊದಲರ್ಧ ಸೀಸನ್​ನಲ್ಲಿ ನಾವು ಉತ್ತಮ ಪ್ರದರ್ಶನ ನೀಡಲಿಲ್ಲ. ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡು ವಿಭಾಗದಲ್ಲೂ ಫೇಲ್ಯೂರ್​ ಆಗಿದ್ದೆವು. ಆದರೆ, ಒಬ್ಬ ಆಟಗಾರನ ಆಗಮನದಿಂದ ಆರ್​​ಸಿಬಿ ಗೆದ್ದು ಪ್ಲೇ ಆಫ್​ ರೇಸ್​ನಲ್ಲಿದೆ ಎಂದರು ಫಾಫ್​​.

ಸ್ವಪ್ನಿಲ್​​ ಸಿಂಗ್​ ಆರ್​​ಸಿಬಿ ತಂಡದ ಯುವ ಆಟಗಾರ. ಈತ ಬಂದ ಮೇಲೆ ಆರ್​​ಸಿಬಿ ಸತತ 5 ಪಂದ್ಯ ಗೆದ್ದಿದೆ. ಅವರ ಬೌಲಿಂಗ್​​ನಿಂದಲೇ ತಂಡಕ್ಕೆ ಹೆಚ್ಚಿನ ಶಕ್ತಿ ಸಿಕ್ಕಿದೆ. ಸ್ವಪ್ನಿಲ್​ ಆರ್​​ಸಿಬಿ ತಂಡದಲ್ಲಿರೋದು ನಮ್ಮ ಅದೃಷ್ಟ. ಇವರ ಜತೆಗೆ ದಯಾಳ್​​ ಕೂಡ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ ಎಂದರು.

Advertisement

Advertisement
Tags :
Advertisement