For the best experience, open
https://m.newskannada.com
on your mobile browser.
Advertisement

ಆರ್‌ಸಿಬಿ ಸಿಎಸ್‌ಕೆ ಹೈವೋಲ್ಟೇಜ್ ಪಂದ್ಯ: ಸೈಬರ್‌ ಖದೀಮರಿಂದ ವಂಚನೆ

ಇಂದು ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆಗಿದೆ. ಆದರೆ ಈ ಪಂದ್ಯದ ಟಿಕೆಟ್‌ ನೀಡುತ್ತೇವೆ ಎಂದು ಆನ್‌ಲೈನ್‌ನಲ್ಲಿ ಸೈಬರ್ ಕಳ್ಳರು ಅಭಿಮಾನಿಗಳಿಗೆ ಮೋಸ ಮಾಡುತ್ತಿದ್ದಾರೆ.
08:54 AM May 18, 2024 IST | Ashika S
ಆರ್‌ಸಿಬಿ ಸಿಎಸ್‌ಕೆ ಹೈವೋಲ್ಟೇಜ್ ಪಂದ್ಯ  ಸೈಬರ್‌ ಖದೀಮರಿಂದ ವಂಚನೆ

ಬೆಂಗಳೂರು: ಇಂದು ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಆರ್‌ಸಿಬಿ ಸಿಎಸ್‌ಕೆ ಹೈವೋಲ್ಟೇಜ್ ಪಂದ್ಯದ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆಗಿದೆ. ಆದರೆ ಈ ಪಂದ್ಯದ ಟಿಕೆಟ್‌ ನೀಡುತ್ತೇವೆ ಎಂದು ಆನ್‌ಲೈನ್‌ನಲ್ಲಿ ಸೈಬರ್ ಕಳ್ಳರು ಅಭಿಮಾನಿಗಳಿಗೆ ಮೋಸ ಮಾಡುತ್ತಿದ್ದಾರೆ.

Advertisement

ಸೈಬರ್ ಖದೀಮರು ಆನ್‌ಲೈನ್‌ನಲ್ಲಿ ಮ್ಯಾಚ್‌ ಟಿಕೆಟ್‌ ಬೇಕಾದರೆ ಲಿಂಕ್ ಓಪನ್ ಮಾಡಿ ಟಿಕೆಟ್ ಬುಕ್ ಮಾಡಿಕೊಳ್ಳಿ ಎಂಬ ಪೋಸ್ಟ್‌ ಕಳುಹಿಸುತ್ತಿದ್ದಾರೆ.

ನಕಲಿ ಲಿಂಕ್‌ನಿಂದ ಟಿಕೆಟ್ ಬುಕ್ ಮಾಡಿಕೊಂಡವರು ಹಣವನ್ನ ಕಳೆದುಕೊಂಡಿದ್ದು ಬಿಟ್ಟರೆ ಬೇರೆ ಯಾವುದೇ ಪ್ರಯೋಜನವಾಗಿಲ್ಲ.

Advertisement

ಹೀಗೆ ಬಂದ ಲಿಂಕ್‌ಮೇಲೆ ಕ್ಲಿಕ್ ಮಾಡಿ 3 ಟಿಕೆಟ್‌ಗೆ 3,600 ರೂ. ಪಾವತಿ ಮಾಡಿದ್ದ ಆಕಾಶ್ ಕುಮಾರ್‌ ಈಗ ಸೈಬರ್‌ ಠಾಣೆಗೆ ದೂರು ನೀಡಿದ ಬಳಿಕ ಕೃತ್ಯ ಬೆಳಕಿಗೆ ಬಂದಿದೆ.

Advertisement
Tags :
Advertisement