For the best experience, open
https://m.newskannada.com
on your mobile browser.
Advertisement

ಬಿಗ್​​ ಶಾಕಿಂಗ್ ನ್ಯೂಸ್ ಕೊಟ್ಟ ದಿನೇಶ್ ಕಾರ್ತಿಕ್

ಐಪಿಎಲ್​ ಆರಂಭಕ್ಕೆ ಕೇವಲ 15 ದಿನಗಳು ಬಾಕಿ ಇದೆ. ಹೀಗಿರುವಾಗ ಆರ್​ಸಿಬಿ ತಂಡದ ಆಟಗಾರನೊಬ್ಬನ ಕುರಿತಾದ ಅಚ್ಚರಿಯ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ ವಿಕೇಟ್​ ಕೀಪರ್​ ಮತ್ತು ದಾಂಡಿಗ ದಿನೇಶ್​ ಕಾರ್ತಿಕ್​ಗೆ ಇದು ಕೊನೆಯ ಪಂದ್ಯವಾಗಲಿದೆಯಂತೆ. ಸದ್ಯ ಪಂದ್ಯಕ್ಕೂ ಮುನ್ನ ಹರಿದಾಡುತ್ತಿರುವ ಶಾಕಿಂಗ್​ ಸುದ್ದಿಯಿಂದ ಆರ್​ಸಿಬಿ ಅಭಿಮಾನಿಗಳು ಭಾವುಕರಾಗಿದ್ದಾರೆ.
02:09 PM Mar 07, 2024 IST | Ashitha S
ಬಿಗ್​​ ಶಾಕಿಂಗ್ ನ್ಯೂಸ್ ಕೊಟ್ಟ ದಿನೇಶ್ ಕಾರ್ತಿಕ್

ಮುಂಬೈ: ಐಪಿಎಲ್​ ಆರಂಭಕ್ಕೆ ಕೇವಲ 15 ದಿನಗಳು ಬಾಕಿ ಇದೆ. ಹೀಗಿರುವಾಗ ಆರ್​ಸಿಬಿ ತಂಡದ ಆಟಗಾರನೊಬ್ಬನ ಕುರಿತಾದ ಅಚ್ಚರಿಯ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ ವಿಕೇಟ್​ ಕೀಪರ್​ ಮತ್ತು ದಾಂಡಿಗ ದಿನೇಶ್​ ಕಾರ್ತಿಕ್​ಗೆ ಇದು ಕೊನೆಯ ಪಂದ್ಯವಾಗಲಿದೆಯಂತೆ. ಸದ್ಯ ಪಂದ್ಯಕ್ಕೂ ಮುನ್ನ ಹರಿದಾಡುತ್ತಿರುವ ಶಾಕಿಂಗ್​ ಸುದ್ದಿಯಿಂದ ಆರ್​ಸಿಬಿ ಅಭಿಮಾನಿಗಳು ಭಾವುಕರಾಗಿದ್ದಾರೆ.

Advertisement

ಮಾರ್ಚ್​ 22ಕ್ಕೆ ಐಪಿಎಲ್​ ಪಂದ್ಯ ಪ್ರಾರಂಭವಾಗಲಿದೆ. ಮೊದಲ ಪಂದ್ಯದ ಮೂಲಕ ಆರ್​ಸಿಬಿ ಈ ವರ್ಷದ ಐಪಿಎಲ್​ ಅನ್ನು ಉದ್ಘಾಟನೆ ಮಾಡಲಿದೆ. ಆದರೆ ಈ ವರ್ಷದ ಐಪಿಎಲ್​ ಪಂದ್ಯವೇ ಕೊನೆಯ ಪಂದ್ಯವೆಂದು ದಿನೇಶ್​ ಕಾರ್ತಿಕ್​ ನಿರ್ಧರಿಸಲು ಸಿದ್ಧರಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಟಿ20 ಲೀಗ್​ ಬಳಿಕ ಅಂತರಾಷ್ಟ್ರೀಯ ಪಂದ್ಯಕ್ಕೂ ನಿವೃತ್ತಿ ಘೋಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸದ್ಯ ರಾಯಲ್​ ಚಾಲೆಂಜರ್ಸ್​ ತಂಡದ ಜೊತೆಗೆ ಒಪ್ಪಂದ ಮಾಡಿಕೊಂಡಿರುವ 38 ವರ್ಷದ ದಿನೆಶ್​ ಕಾರ್ತಿಕ್​ 2008ರಿಂದ ಐಪಿಎಲ್​​ ಎದುರಿಸುತ್ತಾ ಬಂದಿದ್ದಾರೆ. ಅಂದಹಾಗೆಯೇ ಐಪಿಎಲ್​ನ 16 ಆವೃತ್ತಿಗಳನ್ನ ದಿನೇಶ್​ ಕಾರ್ತಿಕ್​ ಆಡುತ್ತಾ ಬಂದಿದ್ದಾರೆ. ಸದ್ಯ ದಿನೇರ್ಶ್ ಕಾರ್ತಿಕ್​ 2024ರ ಆವೃತ್ತಿಯು ಕೊನೆಯ ಐಪಿಎಲ್​ ಆಗಲಿದೆ ಬಳಿಕ ಅಂತರಾಷ್ಟ್ರೀಯ ನಿವೃತ್ತಿಯನ್ನು ಘೋಷಿಸಲಿದ್ದಾರೆ ಎಂಬ ಶಾಕ್​ ಮೇಲೆ ಶಾಕಿಂಗ್ ಸುದ್ದಿಗಳು ಹೊರಬಿದ್ದಿವೆ.

Advertisement

Advertisement
Tags :
Advertisement