For the best experience, open
https://m.newskannada.com
on your mobile browser.
Advertisement

ಆರ್ ಸಿ ಬಿ ಸ್ಟಾರ್ ದಿನೇಶ್​ ಕಾರ್ತಿಕ್​ಗೆ ಹೊಸ ಜವಾಬ್ದಾರಿ

ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್​​ ಫಿನಿಶರ್​ ದಿನೇಶ್ ಕಾರ್ತಿಕ್ ಅವರನ್ನು ಇಂಗ್ಲೆಂಡ್ ಲಯನ್ಸ್ ತಂಡದ ಬ್ಯಾಟಿಂಗ್ ಕೋಚ್​ ಆಗಿ ಆಯ್ಕೆ ಮಾಡಲಾಗಿದೆ.
06:08 PM Jan 11, 2024 IST | Ashika S
ಆರ್ ಸಿ ಬಿ  ಸ್ಟಾರ್ ದಿನೇಶ್​ ಕಾರ್ತಿಕ್​ಗೆ ಹೊಸ ಜವಾಬ್ದಾರಿ

ಬೆಂಗಳೂರು: ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್​​ ಫಿನಿಶರ್​ ದಿನೇಶ್ ಕಾರ್ತಿಕ್ ಅವರನ್ನು ಇಂಗ್ಲೆಂಡ್ ಲಯನ್ಸ್ ತಂಡದ ಬ್ಯಾಟಿಂಗ್ ಕೋಚ್​ ಆಗಿ ಆಯ್ಕೆ ಮಾಡಲಾಗಿದೆ.

Advertisement

ಜನವರಿ 25ನೇ ತಾರೀಕಿನಿಂದ ಟೀಂ ಇಂಡಿಯಾ, ಇಂಗ್ಲೆಂಡ್​ ಮಧ್ಯೆ ಟೆಸ್ಟ್ ಸರಣಿ ಶುರುವಾಗಲಿದೆ. ಇದಕ್ಕೂ ಮುನ್ನ ಭಾರತ ಎ ಮತ್ತು ಇಂಗ್ಲೆಂಡ್ ಲಯನ್ಸ್ ನಡುವೆ ಅಭ್ಯಾಸ ಪಂದ್ಯಗಳು ನಡೆಯಲಿವೆ. ಇದಾದ ಬಳಿಕ ಜ. 17ರಿಂದ 20ರವರೆಗೆ 4 ದಿನಗಳ ಪಂದ್ಯ ನಡೆಯಲಿದೆ. ಇದಕ್ಕೆ ದಿನೇಶ್ ಕಾರ್ತಿಕ್ ಅವರನ್ನು ಇಂಗ್ಲೆಂಡ್ ಲಯನ್ಸ್ ತಂಡದ ಬ್ಯಾಟಿಂಗ್ ಕೋಚ್​ ಆಗಿ ಆಯ್ಕೆ ಮಾಡಲಾಗಿದೆ.

ದಿನೇಶ್​ ಕಾರ್ತಿಕ್​​​ ಜ. 18ರವರೆಗೆ ಈ ಜವಾಬ್ದಾರಿ ನಿರ್ವಹಿಸಲಿದ್ದಾರೆ.

Advertisement

ಇಯಾನ್ ಬೆಲ್ ಬದಲಿಗೆ ಕಾರ್ತಿಕ್ ಈ ಜವಾಬ್ದಾರಿ ಹೊತ್ತಿದ್ದಾರೆ. ಬಿಗ್ ಬ್ಯಾಷ್ ಲೀಗ್‌ನಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್‌ ತಂಡದಲ್ಲಿ ಕೆಲಸ ಮಾಡುತ್ತಿರೋ ಬೆಲ್ ನ. 18ರ ನಂತರ ತಂಡ ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

​ಇವರು 2022ರಲ್ಲಿ ನಡೆದ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಫಿನಿಶರ್​ ರೋಲ್​ ಸಿಕ್ಕರೂ ತಂಡದ ಪರ ಹೇಳಿಕೊಳ್ಳುವಂತಹ ಪ್ರದರ್ಶನವೇನು ನೀಡಿರಲಿಲ್ಲ. ಇದಾದ ಬಳಿಕ ಭಾರತ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ ಆದರೂ ಇಂಗ್ಲೆಂಡ್​​ ಟೀಮ್​​​ ದಿನೇಶ್​​ಗಾಗಿ ಹೊಸ ಹುದ್ದೆ ಸೃಷ್ಟಿಸಿರುವುದು ವಿಶೇಷವಾಗಿದೆ.

Advertisement
Tags :
Advertisement