ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಟ್ರೋಫಿ ಗೆದ್ದಿದ್ದು ನಾನೊಬ್ಬಳೆ ಅಲ್ಲ,ನನ್ನ ಟೀಮ್‌ : ಸ್ಮೃತಿ ಮಂದಾನ

ನಿನ್ನೆ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ WPL ಫೈನಲ್​​ನಲ್ಲಿ ಆರ್​ಸಿಬಿ ಕಪ್​​ಗೆ ಮುತ್ತಿಟ್ಟಿದೆ. ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿ ಮೊದಲ ಬಾರಿಗೆ ಮಹಿಳಾ ಪ್ರೀಮಿಯರ್ ಲೀಗ್‌ನ ಚಾಂಪಿಯನ್ ಆಯಿತು.
09:43 AM Mar 18, 2024 IST | Nisarga K
ಟ್ರೋಫಿ ಗೆದ್ದಿದ್ದು ನಾನೊಬ್ಬಳೆ ಅಲ್ಲ,ನನ್ನ ಟೀಮ್‌ : ಸ್ಮೃತಿ ಮಂದಾನ

ಬೆಂಗಳೂರು: ನಿನ್ನೆ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ WPL ಫೈನಲ್​​ನಲ್ಲಿ ಆರ್​ಸಿಬಿ ಕಪ್​​ಗೆ ಮುತ್ತಿಟ್ಟಿದೆ. ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿ ಮೊದಲ ಬಾರಿಗೆ ಮಹಿಳಾ ಪ್ರೀಮಿಯರ್ ಲೀಗ್‌ನ ಚಾಂಪಿಯನ್ ಆಯಿತು.

Advertisement

ತಂಡದ ನಾಯಕಿ ಸ್ಮೃತಿ ಮಂದಾನ  ಟ್ರೋಫಿ ಹಿಡಿದು ಮಾತನಾಡುತ್ತ, ನನಗಿನ್ನು ನಂಬಲು ಸಾದ್ಯವಾಗುತ್ತಿಲ್ಲ, ಮಾತಾಡಲು ಅಪದಗಳು ಸಿಗುತ್ತಿಲ್ಲ, ನಮ್ಮ ತಂಡದ ಪ್ರದರ್ಶನ ಶ್ಲಾಘನೀಯವಾಗಿತ್ತು, ಆದರೆ ಮೊದಲಲ್ಲಿ ದೆಹಲಿ ಜೊತೆ ಎರಡು ಕಠಿಣ ಸೋಲು ಕಂಡಿದ್ದೆವು. ಆದರೆ ಫೈನಲ್‌ನಲ್ಲಿ ಕಪ್‌ ನಮ್ಮ ಪಾಲಾಗಿದೆ.ಕಳೆದ ವರ್ಷದ ಸೋಲೆ ಈಗ ನಮ್ಮ ಗೆಲುವಿಗೆ ಕಾರಣ. ಟೀಮ್ ಮ್ಯಾನೇಜ್ಮೆಂಟ್ ಇದು ನಿಮ್ಮ ಟೀಮ್ ಎಂದು ಹೇಳಿತು. ಟ್ರೋಫಿ ನನ್ನ ಒಬ್ಬಳ ಗೆಲವುವಲ್ಲ ಇಡೀ ತಂಡದ ಗೆಲವು ಎಂದು ತಮ್ಮ ಮಾತಿನಿಂದಲೂ ಅಭಿಮಾನಿಗಳ ಮನ ಗೆದ್ದರು.

ಇತ್ತ ಕಡೆ ಅಭಿಮಾನಿ ಗಳ 16 ವರ್ಷದ ಕನಸು ಆರ್‌ಸಿಬಿ ಮಹಿಳಾ ತಂಡ ನೆರವೇರಿಸಿದೆ. ರಾಜಧಾನಿಯಲ್ಲಿ ಆರ್‌ಸಿಬಿ ಫ್ಯಾನ್ಸ್‌ಗಳು ಖುಷಿಯಲ್ಲಿ ಹುಚ್ಚದ್ದು ಕಣಿದು ಕುಪ್ಪಳಿಸಿ ತಮ್ಮ ಸಂತೋಷವನ್ನು ಭರ್ಜರಿಯಾಗಿ ಆಚರಿಸಿದ್ದಾರೆ. ನೆನ್ನೆ ರಾತ್ರಿಯಿಂದಲೇ ಬೀದಿ ಬೀದಿಯಲ್ಲಿ ಡಿಜೆ, ಪಟಾಕಿ ಸಿಡಿಸಿ ಕುಣಿಯುತ್ತ ಈ ಬಾರಿ ನಮ್ದು ಎಂದು ಕೂಗುತ್ತಾ ಸಂಭ್ರಸಿದ್ದಾರೆ.

Advertisement

 

Advertisement
Tags :
bengalurucricketFANSLatestNewsleaderNewsKannadaRCBSMRUTHI MANDANAsportswinners
Advertisement
Next Article