For the best experience, open
https://m.newskannada.com
on your mobile browser.
Advertisement

ರಾತ್ರಿ 1:30 ಆದರೂ ನಿಲ್ಲದ ರೆಡ್​ ಆರ್ಮಿ ಹರ್ಷ; ವಿಡಿಯೋ ಮಾಡಿ ಶೇರ್​ ಮಾಡಿದ ಕೊಹ್ಲಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2024ರಲ್ಲಿ ಅದ್ಭುತವನ್ನೇ ಮಾಡಿದೆ. ಸತತ ಪಂದ್ಯಗಳಲ್ಲಿ ಸೋತು ಒಂದು ಹಂತದಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಬೆಂಗಳೂರು ಯಾರೂ ನಿರೀಕ್ಷಿಸದ ರೀತಿಯಲ್ಲಿ ಪ್ಲೇ ಆಫ್ ತಲುಪಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 27 ರನ್ ಗಳಿಂದ ಗೆದ್ದಿದ್ದ ಆರ್ ಸಿಬಿ, 0.067 ರನ್ ರೇಟ್ ಅಂತರದೊಂದಿಗೆ ಅಗ್ರ-4ರಲ್ಲಿ ಸ್ಥಾನ ಪಡೆದುಕೊಂಡಿದೆ.
10:20 AM May 19, 2024 IST | Ashitha S
ರಾತ್ರಿ 1 30 ಆದರೂ ನಿಲ್ಲದ ರೆಡ್​ ಆರ್ಮಿ ಹರ್ಷ  ವಿಡಿಯೋ ಮಾಡಿ ಶೇರ್​ ಮಾಡಿದ ಕೊಹ್ಲಿ

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2024ರಲ್ಲಿ ಅದ್ಭುತವನ್ನೇ ಮಾಡಿದೆ. ಸತತ ಪಂದ್ಯಗಳಲ್ಲಿ ಸೋತು ಒಂದು ಹಂತದಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಬೆಂಗಳೂರು ಯಾರೂ ನಿರೀಕ್ಷಿಸದ ರೀತಿಯಲ್ಲಿ ಪ್ಲೇ ಆಫ್ ತಲುಪಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 27 ರನ್ ಗಳಿಂದ ಗೆದ್ದಿದ್ದ ಆರ್ ಸಿಬಿ, 0.067 ರನ್ ರೇಟ್ ಅಂತರದೊಂದಿಗೆ ಅಗ್ರ-4ರಲ್ಲಿ ಸ್ಥಾನ ಪಡೆದುಕೊಂಡಿದೆ.

Advertisement

ತೀವ್ರ ಕುತೂಹಲ ಪಡೆದಿದ್ದ ಸಿಎಸ್​ಕೆ ವಿರುದ್ಧ ಪಂದ್ಯದಲ್ಲಿ ಆರ್ಸಿಬಿ ಗೆಲುವು ಸಾಧಿಸುತ್ತಿದ್ದಂತೆ ರೆಡ್​​ ಆರ್ಮಿಯ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಚಿನ್ನಸ್ವಾಮಿ ಸ್ಟೇಡಿಯಂನ ಎರಡು ಕಿಲೋ ಮೀಟರ್ ಸುತ್ತಮುತ್ತ ನಡೆದಿದ್ದ ಅಭಿಮಾನಿಗಳು ಆರ್ ಸಿಬಿ ,ಆರ್ ಸಿಬಿ, ಎಂದು ಘೋಷಣೆ ಕೂಗುತ್ತ ಸಂಭ್ರಮಿಸಿದರು.

ಮೊಬೈಲ್​ನಲ್ಲಿ ಅಭಿಮಾನಿಗಳ ಹರ್ಷೋದ್ಘಾರ ಸೆರೆ ಹಿಡಿದ ಕೊಹ್ಲಿ ನಗರದ ರಾಜಭವನ ರಸ್ತೆ, ಕ್ವೀನ್ಸ್ ರಸ್ತೆ, ಎಂಜಿ ರೋಡ್ ಗಳಲ್ಲಿ ಆರ್ಸಿಬಿ ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.

Advertisement

ಅದರಲ್ಲೂ ಮ್ಯಾಚ್ ಮುಗಿದ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂ ನಿಂದ ಆರ್ ಸಿಬಿ ಆಟಗಾರರ ಬಸ್ ಹೊರಗಡೆ ಬರುತ್ತಿದ್ದಂತೆ ಆರ್ ಸಿ ಬಿ ಅಭಿಮಾನಿಗಳು ಬಸ್ ಅಡ್ಡ ಹಾಕಿ ವಿರಾಟ್​ ಕೊಹ್ಲಿ ಪರ ಘೋಷಣೆ ಕೂಗಿದರು. ಘೋಷಣೆ ಶುರು ಮಾಡಿಕೊಂಡಿದ್ದನ್ನ ಕಂಡ ವಿರಾಟ್ ಕೊಹ್ಲಿ, ಅಭಿಮಾನಿಗಳ ಸಂಭ್ರಮವನ್ನ ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡು ನಗೆ ಚೆಲ್ಲಿದ್ದಾರೆ.

ಇನ್ನು ವಿರಾಟ್ ಕೊಹ್ಲಿ ಮಾಡಿದ ವಿಡಿಯೋವನ್ನು ಆರ್ಸಿಬಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದೆ. ಇಂದು ರಾತ್ರಿ 1:30ಕ್ಕೆ.. ಇದು ಹೆಚ್ಚು ವಿಶೇಷವಾದದ್ದು. ನಾವು ವಿಶ್ವದ ಅತ್ಯುತ್ತಮ ಅಭಿಮಾನಿಗಳನ್ನು ಹೊಂದಿದ್ದೇವೆ ಮತ್ತು ನಾವು ಅದರ ಬಗ್ಗೆ ಹೆಮ್ಮೆಪಡುತ್ತೇವೆ ಎಂದು ಆರ್​ಸಿಬಿ ವಿಡಿಯೋವನ್ನು ಶೇರ್ ಮಾಡಿದೆ. ವಿಡಿಯೋದಲ್ಲಿ ಆರ್ಸಿಬಿ ಅಭಿಮಾನಿಗಳು ಹುಚ್ಚೇದ್ದು ಕುಣಿದು ಕುಪ್ಪಳಿಸಿರುವುದನ್ನು ಕಾಣಬಹುದಾಗಿದೆ.

Advertisement
Tags :
Advertisement