ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಆರ್‌ಸಿಬಿ ತಂಡದ ಹೊಸ ಜರ್ಸಿ ಅನಾವರಣ: ಎಷ್ಟು ಬದಲಾವಣೆ ಆಗಿದೆ ಗೊತ್ತ ?

ಇಂಡಿಯನ್ ಪ್ರೀಮಿಯರ್‌ ಲೀಗ್‌ ಅಖಾಡದಲ್ಲಿ ಚೊಚ್ಚಲ ಟ್ರೋಫಿ ಗೆಲುವಿನ ಕಡೆಗೆ ಕಣ್ಣಿಟ್ಟಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಹೊಸ ಜರ್ಸಿಯೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ.
09:58 AM Mar 20, 2024 IST | Ashitha S

ಬೆಂಗಳೂರು: ಇಂಡಿಯನ್ ಪ್ರೀಮಿಯರ್‌ ಲೀಗ್‌ ಅಖಾಡದಲ್ಲಿ ಚೊಚ್ಚಲ ಟ್ರೋಫಿ ಗೆಲುವಿನ ಕಡೆಗೆ ಕಣ್ಣಿಟ್ಟಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಹೊಸ ಜರ್ಸಿಯೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ.

Advertisement

ಮಾರ್ಚ್ 22ರಂದು ಶುರುವಾಗಲಿರುವ ಐಪಿಎಲ್‌ 2024 ಟೂರ್ನಿಯಲ್ಲಿ ಆರ್‌ಸಿಬಿ ತಂಡ ಕೆಂಪು ಮತ್ತು ನೀಲಿಮಿಶ್ರಿತ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳಲಿದೆ. ಮಂಗಳವಾರ (ಮಾ.19) ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಅನ್‌ಬಾಕ್ಸ್‌ ಕಾರ್ಯಕ್ರಮದಲ್ಲಿ ನೂತನ ಜರ್ಸಿ ಅನಾವರಣ ಮಾಡಲಾಯಿತು. ಇದೇ ವೇಳೆ ತಂಡದಲ್ಲಿದ್ದ ಬ್ಯಾಂಗಲೋರ್‌ ತೆಗೆದು ಬೆಂಗಳೂರು ಸೇರಿಸಲಾಯಿತು.

Advertisement

ಅಂದಹಾಗೆ ಆರ್‌ಸಿಬಿ ತಂಡದ ಸಮವಸ್ತ್ರದಲ್ಲಿ ಈ ಹಿಂದೆಯೂ ನೀಲಿ ಬಣ್ಣದ ಬಳಕೆ ಮಾಡಲಾಗಿತ್ತು. ಕಳೆದ 5-6 ಆವೃತ್ತಿಗಳಲ್ಲಿ ಆರ್‌ಸಿಬಿ ಕೆಂಪು, ಕಪ್ಪು ಮತ್ತು ಸ್ವರ್ಣ ಬಣ್ಣಗಳನ್ನು ತನ್ನ ಸಮವಸ್ತ್ರಕ್ಕೆ ಬಳಕೆ ಮಾಡಿತ್ತು. ಇದೀಗ ಕೆಂಪು, ಸ್ವರ್ಣ ಮತ್ತು ನೀಲಿ ಬಣ್ಣ ಆಯ್ಕೆ ಮಾಡಿ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ತಂಡದ ನಾಯಕ ಫಾಫ್‌ ಡು ಪ್ಲೆಸಿಸ್‌, ಇನನ್ಮುಂದೆ ಫ್ರಾಂಚೈಸಿಯ ಹೆಸರು ರಾಯಲ್‌ ಚಾಲೆಂಜರ್ಸ್‌ ಬ್ಯಾಂಗಲೋರ್‌(Royal Challengers Bangalore) ಅಲ್ಲ "ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು"(Royal Challengers Bengaluru)  ಎಂದು ಅಧಿಕೃತವಾಗಿ ಘೋಷಣೆ ಮಾಡಿದರು. ಮಾಜಿ ನಾಯಕ ವಿರಾಟ್ ಕೊಹ್ಲಿ ಮಾತನಾಡಿ, 'ಇದು ಆರ್‌ಸಿಬಿಯ ಹೊಸ ಅಧ್ಯಾಯ' ಎಂದು ಘೋಷಣೆ ಕೂಗಿದರು.

Advertisement
Tags :
indiaIPLLatestNewsNewsKannadaRCBRCB jerseyನವದೆಹಲಿ
Advertisement
Next Article