ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪಂಜಾಬ್‌ ವಿರುದ್ಧ ಜಯಭೇರಿ ಬಾರಿಸಿದ ಆರ್‌ಸಿಬಿ : ಫ್ಯಾನ್ಸ್‌ಗೆ ಫುಲ್‌ ಖುಶ್‌

ನಗರದ ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿ ನೆನ್ನೆ ನಡೆದ ಐಪಿಎಲ್‌ ಮ್ಯಾಚ್‌ನಲ್ಲಿ ಆರ್‌ಸಿಬಿ ಜಯಬೇರಿ ಬಾರಿಸಿದೆ.ಆರಂಭದಲ್ಲಿ ನಿರಾಸೆಗೊಂಡಿದ್ದ ಫ್ಯಾನ್ಸ್‌ ಕೊನೆಯಲ್ಲಿ ಸಂಭ್ರಮಿಸಿದ್ದಾರೆ. ಪಂಜಾಬ್‌ ಕಿಂಗ್ಸ್‌ನ್ನು 4 ವಿಕೆಟ್‌ಗಳಿಂದ ಸೋಲಿಸಿ ಫಾಫ್ ಪಡೆ ಪಾಯಿಂಟ್ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದೆ.
10:15 AM Mar 26, 2024 IST | Nisarga K
ಪಂಜಾಬ್‌ ವಿರುದ್ಧ ಜಯಭೇರಿ ಬಾರಿಸಿದ ಆರ್‌ಸಿಬಿ : ಫ್ಯಾನ್ಸ್‌ಗೆ ಫುಲ್‌ ಖುಶ್‌

ಬೆಂಗಳೂರು: ನಗರದ ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿ ನೆನ್ನೆ ನಡೆದ ಐಪಿಎಲ್‌ ಮ್ಯಾಚ್‌ನಲ್ಲಿ ಆರ್‌ಸಿಬಿ ಜಯಬೇರಿ ಬಾರಿಸಿದೆ.ಆರಂಭದಲ್ಲಿ ನಿರಾಸೆಗೊಂಡಿದ್ದ ಫ್ಯಾನ್ಸ್‌ ಕೊನೆಯಲ್ಲಿ ಸಂಭ್ರಮಿಸಿದ್ದಾರೆ. ಪಂಜಾಬ್‌ ಕಿಂಗ್ಸ್‌ನ್ನು 4 ವಿಕೆಟ್‌ಗಳಿಂದ ಸೋಲಿಸಿ ಫಾಫ್ ಪಡೆ ಪಾಯಿಂಟ್ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್​ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು 176 ರನ್ ಕಲೆಹಾಕಿತು.ಕೊನೆಯಲ್ಲಿ ದಿನೇಶ್ ಕಾರ್ತಿಕ್ ತಮ್ಮ ಮ್ಯಾಜಿಕಲ್‌ ಆಟದಿಂದ ಮೂಲಕ 10 ಎಸೆತಗಳಲ್ಲಿ ಅಜೇಯ 28 ರನ್ ಮತ್ತು ಮಹಿಪಾಲ್ ಲ್ಯಾಮ್ರೋರ್ 8 ಎಸೆತಗಳಲ್ಲಿ 17 ರನ್ ಗಳಿಸಿ ಇನ್ನು 4 ಎಸೆತಗಳು ಬಾಕಿ ಇರುವಂತೆಯೇ ತಂಡಕ್ಕೆ ಜಯ ತಂದುಕೊಟ್ಟರು.

Advertisement

ಪಂಜಾಬ್‌ನ ಗುರಿ ಬೆನ್ನಟ್ಟಿದ ಆರ್​ಸಿಬಿಗೆ ವಿರಾಟ್ ಕೊಹ್ಲಿ ವೇಗದ ಆರಂಭ ನೀಡಿದರು. 177 ರನ್‌ಗಳಿಗೆ 19.2 ಓವರ್‌ಗಳಲ್ಲಿ,6 ವಿಕೆಟ್‌ಗಳಿಗೆ 178 ರನ್‌ಗಳಿಸಿತು. ಇದಕ್ಕೆ ಕಾರಣ ಕೊಹ್ಲಿ ಗುಡ್‌ಲಕ್‌ ಮೊದಲ ಓವರ್​ನಲ್ಲೇ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾಗಬೇಕಿತ್ತು. ಆದರೆ ಮೊದಲ ಸ್ಲಿಪ್​ನಲ್ಲಿದ್ದ ಜಾನಿ ಬೈರ್​ಸ್ಟೋವ್ ಕೊಹ್ಲಿ ಕ್ಯಾಚ್ ಬಿಟ್ಟರು. ಇದರ ಲಾಭ ಪಡೆದ ವಿರಾಟ್ ಕೊಹ್ಲಿ ಅದೇ ಓವರ್​ಲ್ಲಿ ನಾಲ್ಕು ಬೌಂಡರಿಗಳನ್ನು ಹೊಡೆದರು ರಜತ್ ಪಾಟಿದಾರ್ 18 ರನ್ ಗಳಿಸಿ ವಿರಾಟ್ ಕೊಹ್ಲಿಗೆ ಬೆಂಬಲ ನೀಡಿದರು. ಅಂತಿಮವಾಗಿ ವಿರಾಟ್ ಕೊಹ್ಲಿ 16ನೇ ಓವರ್​ನ ಕೊನೆಯ ಎಸೆತದಲ್ಲಿ ಹರ್ಷಲ್ ಪಟೇಲ್​ಗೆ ಬಲಿಯಾದರು. ತಮ್ಮ ಇನ್ನಿಂಗ್ಸ್​ನಲ್ಲಿ 49 ಎಸೆತಗಳನ್ನು ಎದುರಿಸಿದ ವಿರಾಟ್ 11 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 77 ರನ್ ಗಳಿಸಿದರು

ಇನ್ನು ತನ್ನ ಮ್ಯಾಜಿಕಲ್‌ ಆಟ ಶುರುಮಾಡಿದ ಕಾರ್ತಿಕ್‌ ಕೇವಲ ಎರಡು ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಬೌಂಡರಿ ಬಾರಿಸಿ ತಂಡಕ್ಕೆ ನಿಟ್ಟುಸಿರು ಬಿಡುವಂತೆ ಮಾಡಿದರು. ಅಂತಿಮವಾಗಿ ಎರಡು ಓವರ್‌ಗಳಲ್ಲಿ ಆರ್​ಸಿಬಿ ಗೆಲುವಿಗೆ 23 ರನ್‌ಗಳ ಅಗತ್ಯವಿತ್ತು. ಹರ್ಷಲ್ ಪಟೇಲ್‌ ಬೌಲ್ ಮಾಡಿದ 19ನೇ ಓವರ್‌ನಲ್ಲಿ ಕಾರ್ತಿಕ್ ಮತ್ತು ಲ್ಯಾಮ್ರೋರ್ ಎರಡು ಬೌಂಡರಿಗಳ ಸಹಾಯದಿಂದ 13 ರನ್ ನ್ನು ಚೆಚ್ಚಿದರು. ಅಂತು ಕೊನೆಯಲ್ಲಿ ಕಾರ್ತಿಕ್‌ ನ ರೋಚಕ ಬ್ಯಾಟಿಂಗ್‌ ನಿಂದ ತಂಡವನ್ನು ದಡ ಸೇರಿಸಿದ್ರು.

Advertisement

ಪಂಜಾಬ್​ ಪರ ಓಪನರ್​ ಆಗಿ ಬಂದ ಕ್ಯಾಪ್ಟನ್​ ಶಿಖರ್​ಧವನ್​​ 37 ಬಾಲ್​ನಲ್ಲಿ 1 ಸಿಕ್ಸರ್​​, 5 ಫೋರ್​ ಸಮೇತ 45 ರನ್​ ಚಚ್ಚಿದ್ರು. ಬಳಿಕ ಬಂದ ಪ್ರಭುಸಿಮ್ರಾನ್​ 2 ಸಿಕ್ಸರ್​​, 2 ಫೋರ್​ ಸಮೇತ 25 ರನ್​ ಗಳಿಸಿ ವಿಕೆಟ್​ ಒಪ್ಪಿಸಿದ್ರು ̤
ಇನ್ನು, ಲಿಯಮ್​ ಲಿವಿಂಗ್​ಸ್ಟೋನ್​ 1 ಸಿಕ್ಸ್​, 1 ಫೋರ್​ ಜತೆ 17 ರನ್​, ಸ್ಯಾಮ್​ ಕರನ್​ 3 ಫೋರ್​ನೊಂದಿಗೆ 23 ರನ್​ ಸಿಡಿಸಿದ್ರು. ಜಿತೇಶ್​ ಶರ್ಮಾ 2 ಸಿಕ್ಸರ್​​, 1 ಫೋರ್​ನೊಂದಿಗೆ 27 ರನ್​ ಪೇರಿಸಿದ್ರು. ನೆಯ ಓವರ್‌ನಲ್ಲಿ ಶಶಾಂಕ್ ಸಿಂಗ್ 20 ರನ್ ಬಾರಿಸಿ ತಂಡವನ್ನು 170 ರನ್​ಗಳ ಗಡಿ ದಾಟಿಸಿದರು.

 

Advertisement
Tags :
bengalurucricketCRICKET MATCHLatestNewsNewsKarnatakaPUNJABRCBWON THE MATCH
Advertisement
Next Article