For the best experience, open
https://m.newskannada.com
on your mobile browser.
Advertisement

ಜ.23ಕ್ಕೆ 545 PSI ಹುದ್ದೆಗಳಿಗೆ ಮರು ಪರೀಕ್ಷೆ

ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣದ ಹಿನ್ನೆಲೆಯಲ್ಲಿ ರದ್ದಾಗಿದ್ದ 545 PSI PSI ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಮರುಪರೀಕ್ಷೆಯನ್ನು ಜ. 23ರಂದು ನಡೆಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸೋಮವಾರ ಪ್ರಕಟಿಸಿದೆ. 
07:56 AM Jan 09, 2024 IST | Ramya Bolantoor
ಜ 23ಕ್ಕೆ 545 psi ಹುದ್ದೆಗಳಿಗೆ ಮರು ಪರೀಕ್ಷೆ

ಬೆಂಗಳೂರು : ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣದ ಹಿನ್ನೆಲೆಯಲ್ಲಿ ರದ್ದಾಗಿದ್ದ 545 PSI PSI ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಮರುಪರೀಕ್ಷೆಯನ್ನು ಜ. 23ರಂದು ನಡೆಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸೋಮವಾರ ಪ್ರಕಟಿಸಿದೆ.

Advertisement

ಜ.23ರ ಮಂಗಳವಾರ ಬೆಳಗ್ಗೆ 10.30ರಿಂದ ಮಧ್ಯಾಹ್ನ 12 ಗಂಟೆವರೆಗೆ ಪೇಪರ್ -1 (50 ಅಂಕ) ಮತ್ತು ಮಧ್ಯಾಹ್ನ 1 ಗಂಟೆಯಿಂದ 2.30ರವರೆಗೆ ಪತ್ರಿಕೆ -2ಕ್ಕೆ (150 ಅಂಕ) ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಗಳನ್ನು ಸೂಕ್ತ ತಪಾಸಣೆಗೆ ಒಳಪಡಿಸು ವುದರಿಂದ ಬೆಳಗ್ಗೆ 8.30ಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಪ್ರವೇಶ ಪತ್ರದ ಜೊತೆಗೆ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಸರ್ಕಾರದ ಮಾನ್ಯತೆಯ ಯಾವು ದಾದರೂ ಒಂದು ಗುರುತಿನ ಚೀಟಿ ಇದ್ದರೆ ಮಾತ್ರ ಪರೀಕ್ಷಾ ಕೇಂದ್ರಕ್ಕೆ  ಬಿಡುವುದಿದಲ್ಲ.

ನೀರಿನ ಬಾಟಲ್, ಮೊಬೈಲ್ ಗಳನ್ನು ನಿಷೇಧಿಸಲಾಗಿದೆ. ಮೊಬೈಲ್‌ನಲ್ಲಿ ಗುರುತಿನ ಚೀಟಿ ತೋರಿಸಲು ಅವಕಾಶವಿರುವುದಿಲ್ಲ, ಅಭ್ಯರ್ಥಿ ಗಳು ಸಾಧ್ಯವಾದಷ್ಟು ಕಾಲರ್ ಇಲ್ಲದ ಶರ್ಟ್ ಹಾಕಿ ಕೊಂಡು ಬರಬೇಕು. ಕಿವಿ ಅಥವಾ ಬಾಯಿ ಮುಚ್ಚು ವಂತಹ ದಿರಿಸು, ಜೀನ್ಸ್, ಬೆಲ್ಟ್, ಶೂ ಹಾಕಿಕೊಂಡು ಬರುವಂತಿಲ್ಲ ಎಂದು ಕೆಇಎ ಪ್ರಕಟಣೆ ತಿಳಿಸಿದೆ.

Advertisement

Advertisement
Tags :
Advertisement