For the best experience, open
https://m.newskannada.com
on your mobile browser.
Advertisement

ಬಿಡುಗಡೆಗೆ ತಯಾರಾದ ರಿಯಲ್ ಮಿಯ ಹೊಸ ನಾರ್ಜೊ ಸ್ಮಾರ್ಟ್​ಫೋನ್

ಪ್ರಸಿದ್ಧ ರಿಯಲ್ ಮಿ ಕಂಪನಿ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ನಾರ್ಜೊ ಸ್ಮಾರ್ಟ್‌ಫೋನ್‌ನ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಕಳೆದ ಕೆಲವು ದಿನಗಳಿಂದ ಫೋನ್‌ನ ಲ್ಯಾಂಡಿಂಗ್ ಪುಟವು ಇ ಕಾಮರ್ಸ್ ತಾಣವಾದ ಅಮೆಜಾನ್​ನಲ್ಲಿ ಲೈವ್ ಆಗಿತ್ತು.
08:17 AM Mar 14, 2024 IST | Ashitha S
ಬಿಡುಗಡೆಗೆ ತಯಾರಾದ ರಿಯಲ್ ಮಿಯ ಹೊಸ ನಾರ್ಜೊ ಸ್ಮಾರ್ಟ್​ಫೋನ್

ಪ್ರಸಿದ್ಧ ರಿಯಲ್ ಮಿ ಕಂಪನಿ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ನಾರ್ಜೊ ಸ್ಮಾರ್ಟ್‌ಫೋನ್‌ನ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಕಳೆದ ಕೆಲವು ದಿನಗಳಿಂದ ಫೋನ್‌ನ ಲ್ಯಾಂಡಿಂಗ್ ಪುಟವು ಇ ಕಾಮರ್ಸ್ ತಾಣವಾದ ಅಮೆಜಾನ್​ನಲ್ಲಿ ಲೈವ್ ಆಗಿತ್ತು.

Advertisement

ಇದೀಗ ರಿಯಲ್ ಮಿ ಅಧಿಕೃತವಾಗಿ ನಾರ್ಜೊ 70 ಪ್ರೊ 5G ಅನ್ನು ಮಾರ್ಚ್ 19 ರಂದು ದೇಶದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ದೃಢಪಡಿಸಿದೆ.

ರಿಯಲ್ ಮಿ ನಾರ್ಜೊ 70 ಪ್ರೊ ಬೆಲೆ ಎಷ್ಟೆಂದು ಬಹಿರಂಗಗೊಂಡಿಲ್ಲ. ಮೂಲಗಳ ಪ್ರಕಾರ ಇದು 25,000-30,000 ರೂ. ಒಳಗೆ ಇರಬಹುದು ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ ಜುಲೈನಲ್ಲಿ ಬಿಡುಗಡೆ ಆದ ರಿಯಲ್ ಮಿ ನಾರ್ಜೊ 60 ಪ್ರೊ ಬೆಲೆ ರೂ. 23,999 ಆಗಿದೆ. ಇದು ಆರಂಭಿಕ ಬೆಲೆ ಆಗಿದೆ. ಹೀಗಾಗಿ ಮುಂಬರುವ ಸ್ಮಾರ್ಟ್‌ಫೋನ್ ಇದೇ ಬೆಲೆ ಶ್ರೇಣಿಯಲ್ಲಿ ಬರುವ ಸಾಧ್ಯತೆಯಿದೆ.

Advertisement

ರಿಯಲ್ ಮಿ ನಾರ್ಜೊ 70 ಪ್ರೊ 5G ಸ್ಮಾರ್ಟ್​ಫೋನ್ ಅಂಡ್ರಾಯ್ಡ್ 14 ಆಧಾರಿತ ರಿಯಲ್ ಮಿ UI 5 ನಲ್ಲಿ ಕಾರ್ಯನಿರ್ವಹಿಸುತ್ತದೆ. ವಿಶೇಷ ಎಂದರೆ ರಿಯಲ್ ಮಿಯ ಇದೇ ಬೆಲೆಯ ಫೋನ್‌ಗಳಲ್ಲಿ ಸಾಮಾನ್ಯವಾಗಿ ಕಂಡುಬರುವುದಕ್ಕಿಂತ 65 ಪ್ರತಿಶತ ಕಡಿಮೆ ಬ್ಲೋಟ್‌ವೇರ್ ಅನ್ನು ಈ ಫೋನ್ ಹೊಂದಿರುತ್ತದೆ.

ಸೋನಿ IMX890 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾದೊಂದಿಗೆ ರಿಯಲ್ ಮಿ ನಾರ್ಜೊ 70 ಪ್ರೊ 5G ತನ್ನ ಬೆಲೆ ವಿಭಾಗದಲ್ಲಿ ಮೊದಲ ಸ್ಮಾರ್ಟ್‌ಫೋನ್ ಆಗಿರುತ್ತದೆ ಎಂದು ಕಂಪನಿಯು ದೃಢಪಡಿಸಿದೆ. ಫೋನ್‌ನ ಹಿಂಭಾಗದ ಫಲಕವು “ಡ್ಯುವೋ ಟಚ್ ಗ್ಲಾಸ್” ವಿನ್ಯಾಸವನ್ನು ಹೊಂದಿದೆ ಎಂದು ಬ್ರ್ಯಾಂಡ್ ಹೇಳಿಕೊಂಡಿದೆ.

ರಿಯಲ್ ಮಿ ನಾರ್ಜೊ 70 ಪ್ರೊ ಪೂರ್ಣ HD+ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರವನ್ನು ಬೆಂಬಲಿಸುವ ಫ್ಲಾಟ್ AMOLED ಪ್ರದರ್ಶನವನ್ನು ಹೊಂದಿದೆ ಎಂದು ತಿಳಿದು ಬಂದಿದೆ.

Advertisement
Tags :
Advertisement