ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ನೇಪಾಳದಲ್ಲಿ ಶ್ರೀರಾಮ-ಸೀತಾ ಐತಿಹಾಸಿಕ ದಾಖಲೆ

ಶ್ರೀರಾಮಚಂದ್ರನಿಗೂ ನೇಪಾಳಕ್ಕೂ ಭಾರಿ ಸಂಬಂಧವಿದೆ. ರಾಮಾಯಣದಲ್ಲಿ ಉಲ್ಲೇಖವಾಗಿರುವ ಪ್ರಕಾರ, ಸೀತಾ ಮಾತೆಯು ನೇಪಾಳದ ಜನಕ ಮಹಾರಾಜನ ಪುತ್ರಿ. ಅಯೋಧ್ಯಾ ರಾಮನ ಜೊತೆಗೆ ಸೀತೆಯ ವಿವಾಹ ಆಗುತ್ತದೆ. ಅಯೋಧ್ಯೆಯಲ್ಲಿ ರಾಮ ನವಮಿಯ ದಿನದಂದು ಭಗವಾನ್ ಶ್ರೀರಾಮನ ಹುಟ್ಟುಹಬ್ಬ ಆಚರಣೆ ಮಾಡುವ ಸಂದರ್ಭದಲ್ಲೇ ನೇಪಾಳದ ಜನಕಪುರದಲ್ಲಿ ಭಗವಾನ್ ಶ್ರೀರಾಮ ಹಾಗೂ ಸೀತಾ ಮಾತೆಯ ವಿವಾಹ ಮಹೋತ್ಸವದ ಸಂಭ್ರಮಾಚರಣೆಯೂ ನಡೆಯುತ್ತದೆ. ಶುಕ್ಲ ಪಕ್ಷದ ಐದನೇ ದಿನ ಈ ಆಚರಣೆ ನಡೆಯುತ್ತದೆ.  ಇದೀಗ ನೇಪಾಳದ ಜನಕ್‌ಪುರದಲ್ಲಿ ಒಂದು ಅದ್ಭುತ ದೃಶ್ಯ ಕಂಡುಬಂದಿದೆ.
02:47 PM Dec 23, 2023 IST | Ashitha S

ನೇಪಾಳ: ಶ್ರೀರಾಮಚಂದ್ರನಿಗೂ ನೇಪಾಳಕ್ಕೂ ಭಾರಿ ಸಂಬಂಧವಿದೆ. ರಾಮಾಯಣದಲ್ಲಿ ಉಲ್ಲೇಖವಾಗಿರುವ ಪ್ರಕಾರ, ಸೀತಾ ಮಾತೆಯು ನೇಪಾಳದ ಜನಕ ಮಹಾರಾಜನ ಪುತ್ರಿ. ಅಯೋಧ್ಯಾ ರಾಮನ ಜೊತೆಗೆ ಸೀತೆಯ ವಿವಾಹ ಆಗುತ್ತದೆ. ಅಯೋಧ್ಯೆಯಲ್ಲಿ ರಾಮ ನವಮಿಯ ದಿನದಂದು ಭಗವಾನ್ ಶ್ರೀರಾಮನ ಹುಟ್ಟುಹಬ್ಬ ಆಚರಣೆ ಮಾಡುವ ಸಂದರ್ಭದಲ್ಲೇ ನೇಪಾಳದ ಜನಕಪುರದಲ್ಲಿ ಭಗವಾನ್ ಶ್ರೀರಾಮ ಹಾಗೂ ಸೀತಾ ಮಾತೆಯ ವಿವಾಹ ಮಹೋತ್ಸವದ ಸಂಭ್ರಮಾಚರಣೆಯೂ ನಡೆಯುತ್ತದೆ. ಶುಕ್ಲ ಪಕ್ಷದ ಐದನೇ ದಿನ ಈ ಆಚರಣೆ ನಡೆಯುತ್ತದೆ.  ಇದೀಗ ನೇಪಾಳದ ಜನಕ್‌ಪುರದಲ್ಲಿ ಒಂದು ಅದ್ಭುತ ದೃಶ್ಯ ಕಂಡುಬಂದಿದೆ.

Advertisement

ಅದೇನೆಂದರೆ, ಮಧ್ಯಪ್ರದೇಶದ ಹರ್ದಾ ಜಿಲ್ಲೆಯಿಂದ ಬಂದ ಕಲಾವಿದರು 11 ಸಾವಿರದ 11 ಚದರ ಅಡಿ ಜಾಗದಲ್ಲಿ ಶ್ರೀರಾಮ ಮತ್ತು ಸೀತೆಯ ಕಲಾಕೃತಿಯನ್ನು ರಚಿಸಿದ್ದಾರೆ. ಇದನೇಪಾಳರಲ್ಲಿ 101 ಕ್ವಿಂಟಾಲ್ ಧಾನ್ಯಗಳನ್ನು ಬಳಸಲಾಗಿದೆ. ಒಟ್ಟು 11 ಬಗೆಯ ಧಾನ್ಯಗಳನ್ನು ಬಳಸಲಾಗಿದ್ದು ಇತಿಹಾಸ ಸೃಷ್ಟಿಯಾಗಿದೆ.

ನೇಪಾಳದ ಜನಕ್‌ಪುರ ಧಾಮ್‌ನಲ್ಲಿರುವ ರಂಗಭೂಮಿ ಮೈದಾನದಲ್ಲಿ   ಸೀತಾ ರಾಮ ವಿವಾಹ ಪಂಚಮಿ ಮಹೋತ್ಸವದ ಸಂದರ್ಭದಲ್ಲಿ ಇದನ್ನು ಅನಾವರಣಗೊಳಿಸಲಾಗಿದೆ.  ಈ ಸಂದರ್ಭದಲ್ಲಿ ಮಧ್ಯಪ್ರದೇಶದ ಹರ್ದಾ ಜಿಲ್ಲೆಯ ಕಲಾವಿದರೂ ನೇಪಾಳ ತಲುಪಿದ್ದರು. ಈ ಕಲಾವಿದರು 11,011 ಚದರ ಅಡಿ ಭೂಮಿಯಲ್ಲಿ ಭಗವಾನ್ ಶ್ರೀ ಸೀತಾ-ರಾಮರ ಕಲಾಕೃತಿಯನ್ನು ಸಿದ್ಧಪಡಿಸಿದರು. ಈ ಚಿತ್ರವು ವಿಶ್ವದ ಅತಿದೊಡ್ಡ ಚಿತ್ರ ಎಂದು ಹೇಳಲಾಗುತ್ತಿದೆ.

Advertisement

ಹರ್ದಾ ಜಿಲ್ಲೆಯಿಂದ ಜನಕ್‌ಪುರ ಧಾಮಕ್ಕೆ ಆಗಮಿಸಿದ ಕಲಾವಿದರು ಧಾನ್ಯಗಳಿಂದ ಮಾಡಿದ ರಾಮ ಮತ್ತು ಸೀತೆಯ ಈ ಚಿತ್ರವನ್ನು ಸಿದ್ಧಪಡಿಸಿದ್ದಾರೆ. ಹರ್ದಾ ಕಲಾವಿದ ಸತೀಶ್ ಗುರ್ಜರ್ ಅವರ 11 ಸದಸ್ಯರ ತಂಡ ಇದನ್ನು ಸಿದ್ಧಪಡಿಸಿದೆ ಎಂದು ತಿಳಿದು ಬಂದಿದೆ.

Advertisement
Tags :
BreakingNewsGOVERNMENTindiaLatestNewsNewsKannadaಅಯೋಧ್ಯನವದೆಹಲಿನೇಪಾಳಬೆಂಗಳೂರುರಾಮಸೀತಾ
Advertisement
Next Article