ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕೇಳುಗರ ಮನ ಕದಿಯಲಿರುವ ʼಕದ್ದು ಕದ್ದುʼ; ಜ. ೨೦ರಂದು ಬಿಡುಗಡೆ

JustRoll Films LLPಯ ಬಹುನಿರೀಕ್ಷಿತ ʼಕದ್ದು ಕದ್ದುʼ ಪ್ರೇಮಗೀತೆಯ ಬಿಡುಗಡೆಯನ್ನು ಜ. ೨೦ರಂದು ನಿಗದಿಪಡಿಸಲಾಗಿದೆ.
09:01 PM Jan 15, 2024 IST | Maithri S

JustRoll Films LLPಯ ಬಹುನಿರೀಕ್ಷಿತ ʼಕದ್ದು ಕದ್ದುʼ ಪ್ರೇಮಗೀತೆಯ ಬಿಡುಗಡೆಯನ್ನು ಜ. ೨೦ರಂದು ನಿಗದಿಪಡಿಸಲಾಗಿದೆ.

Advertisement

JustRoll Films LLP ನಿರ್ಮಾಣದ ಈ ಹಾಡಿನಲ್ಲಿ ಹೆಸರಾಂತ ಗಾಯಕರಾದ ಸುನಿಧಿ ಗಣೇಶ್ ಮತ್ತು ವಿಶಾಕ್ ನಾಗಲಾಪುರ ಅವರ ಗಾಯನವಿದ್ದು, ಕೋಸ್ಟಲ್‌ವುಡ್ ಸಂಗೀತ ನಿರ್ದೇಶಕ ಬಹುಮುಖ ಪ್ರತಿಭೆ ಶ್ರೀಧರ್ ಕರ್ಕೇರ ಅವರು ಸಂಗೀತ ಮತ್ತು ಸಾಹಿತ್ಯ ರಚನೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ಮನರಂಜನೆಯಲ್ಲಿ ಹೆಸರು ಮಾಡಿರುವ JustRoll Films LLP ಉತ್ತಮ ಗುಣಮಟ್ಟದ ಹಾಗು ನವ ಸಂಗೀತಕ್ಕೆ ಹೆಸರುವಾಸಿ. ಈ ಹಾಡಿನಲ್ಲಿ ದೀಪಕ್‌ ರಾಜ್‌ ಉಳ್ಳಾಲರ ತಬಲ ಮತ್ತು ಢೋಲಕ್‌ ಸದ್ದು ಮಾಡಿದ್ದು, ನುರಿತ ಸಂಗೀತಗಾರರ ತಂಡವನ್ನೇ ಕಾಣಬಹುದು.

Advertisement

ಹಾಡಿನ ರೆಕಾರ್ಡಿಂಗ್‌ ಬೆಂಗಳೂರಿನ ಆಕ್ಟೇವ್‌ ಸ್ಟುಡಿಯೋ ಮತ್ತು ಮಂಗಳೂರಿನ ಸೌಂಡ್‌ ವೇವ್‌ ಸ್ಟುಡಿಯೋದಲ್ಲಿ ನುರಿತ ಇಂಜಿನಿಯರ್‌ ಸಚಿನ್‌ ದೊಡಮನಿ ಹಾಗು ಮೊಹಮ್ಮದ್‌ ಫೈಝ಼ರ ಮೇಲ್ವಿಚಾರಣೆಯಲ್ಲಿ ನಡೆಯಿತು. ಹಾಡಿನ ಪ್ರತಿ ಹಂತದಲ್ಲಿ JustRoll Films LLPನ ತಂತ್ರಜ್ಞಾನ ಮತ್ತು ಪ್ರತಿಭೆಯನ್ನು ಕಾಣಬಹುದು.

ಇದರಲ್ಲಿ ಸಿನಿಮಾಟೋಗ್ರಫರ್‌ ಟಿ. ಜೈಜೀವನ್‌ ಜವಾಹರಜೀ ಮತ್ತು ಶಶಾಂಕ್‌ ಬಿರುವಾರ ಕೊಡುಗೆ ಇದ್ದು, ನೋಡುಗರ ಕಣ್ಣಿಗೂ ಹಬ್ಬ ಖಚಿತ. ಧ್ವನಿ ಮತ್ತು ದೃಶ್ಯಗಳ ಎಡಿಟಿಂಗ್‌ ಅನ್ನು RVN ಸ್ಟುಡಿಯೋದ ಅರ್ವಿನ್‌ ಲೋಬೋ ನೋಡಿಕೊಂಡಿದ್ದು, ಪವನ್‌ ಆಚಾರ್ಯ ಬೋಳೂರರು ಪ್ರಚಾರ ಕಾರ್ಯ ವಹಿಸಿಕೊಂಡಿದ್ದಾರೆ.

ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುವ ಭರವಸೆಯನ್ನು ʼಕದ್ದು ಕದ್ದುʼ ಕೊಡುತ್ತಿದ್ದು, ಇದು JustRoll Films LLPನ ಗುಣಮಟ್ಟದ ಬದ್ಧತೆ, ಸಂಗೀತದಲ್ಲಿನ ಹೊಸ ಅನ್ವೇಷಣೆಗೆ  ಸಾಕ್ಷಿಯಾಗಲಿದೆ. ಹೊಸ ವರ್ಷದೊಂದಿಗೆ JustRoll Films LLP ಕಡೆಯಿಂದ ವರ್ಷವಿಡೀ ಇನ್ನಷ್ಟು ಸುಮಧುರ ಸಂಗೀತಗಳ ನಿರೀಕ್ಷೆಯಿದೆ.

Advertisement
Tags :
JustRoll Films LLPKaddukadduLatestNewsNewsKannadaSONG RELEASE
Advertisement
Next Article