For the best experience, open
https://m.newskannada.com
on your mobile browser.
Advertisement

ಜುಲೈ 12 ರಂದು ಶೀನಾ ನಾಡೋಳಿ ಯವರ ತುಳು ಮತ್ತು ಕನ್ನಡ ಕೃತಿಗಳ ಬಿಡುಗಡೆ

ಶೀನಾ ನಾಡೋಳಿಯವರ 'ಬೊಳಂತ್ಯೆ - ಉರ್ಪೆಲ್' (ತುಳು ಅಕಾಡೆಮಿ ಪ್ರಕಟಿತ), 'ಧರ್ಮದೃಷ್ಟಿ' ಮತ್ತು 'ಪ್ಲೀಸ್ ನನ್ನ ಫೀಸ್ ಕೊಡಿ' ಎಂಬ ಕೃತಿಗಳು ಜುಲೈ12ರಂದು ಬಿಡುಗಡೆಗೊಳ್ಳಲಿದೆ.
12:18 PM Jul 10, 2024 IST | Ashitha S
ಜುಲೈ 12 ರಂದು ಶೀನಾ ನಾಡೋಳಿ ಯವರ ತುಳು ಮತ್ತು ಕನ್ನಡ ಕೃತಿಗಳ ಬಿಡುಗಡೆ

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕಾಂಜವೇ ಸಾಂಸ್ಕೃತಿಕ ವೇದಿಕೆ ಬೆಳ್ತಂಗಡಿ, ವಿದ್ಯಾ ಪ್ರಕಾಶನ ಅತ್ತಾವರ ಮಂಗಳೂರು, ಮತ್ತು ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಇವರ ಸಹಯೋಗದಲ್ಲಿ ಶೀನಾ ನಾಡೋಳಿಯವರ "ಬೊಳಂತ್ಯೆ - ಉರ್ಪೆಲ್" (ತುಳು ಅಕಾಡೆಮಿ ಪ್ರಕಟಿತ), "ಧರ್ಮದೃಷ್ಟಿ" ಮತ್ತು "ಪ್ಲೀಸ್ ನನ್ನ ಫೀಸ್ ಕೊಡಿ" ಎಂಬ ಕೃತಿಗಳು ಜುಲೈ12ರ ಶುಕ್ರವಾರ ಸಂಜೆ ಗಂಟೆ 4:15 ಕ್ಕೆ ಮಂಗಳೂರಿನ ಕೆನರಾ ಕಾಲೇಜಿನ ಸಭಾಂಗಣದಲ್ಲಿ ಬಿಡುಗಡೆಗೊಳ್ಳಲಿದೆ.

Advertisement

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿಗಳಾದ ಡಾ.ಕೆ. ಚಿನ್ನಪ್ಪ ಗೌಡ ಇವರು ಕೃತಿ ಬಿಡುಗಡೆ ಮಾಡಲಿದ್ದಾರೆ. ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪುತ್ತೂರು ಇದರ ಆಂಗ್ಲ ಭಾಷಾ ಪ್ರಾಧ್ಯಾಪಕರಾದ ಶ್ರೀ ನಂದಕಿಶೋರ್. ಎಸ್ ಮತ್ತು ಖ್ಯಾತ ರಂಗಕರ್ಮಿ ಶ್ರೀ ಮೋಹನ್ ಚಂದ್ರ ಯು, ಇವರು ಕೃತಿಗಳ ಪರಿಚಯವನ್ನು ಮಾಡಲಿದ್ದಾರೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ತಾರನಾಥ್ ಗಟ್ಟಿ ಕಾಪಿಕಾಡ್ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಇದರ ಅಧ್ಯಕ್ಷರು ಶ್ರೀ ಗೋಪಾಲಕೃಷ್ಣ ಶೆಟ್ಟಿ, ಖ್ಯಾತ ಸಾಹಿತಿಗಳಾದ ಶ್ರೀ ರಘು ಇಡ್ಕಿದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇದರ ಮಾಜಿ ಅಧ್ಯಕ್ಷರು ಶ್ರೀ ದಯಾನಂದ ಕತ್ತಲ್ ಸಾರ್ ಮತ್ತು ಕಾರ್ಯಕ್ರಮದ ಸದಸ್ಯ ಸಂಚಾಲಕರಾದ ಅಕ್ಷಯ ಆರ್ ಶೆಟ್ಟಿ, ಕಾಂಜವೇ ಸಾಂಸ್ಕೃತಿಕ ವೇದಿಕೆ ಬೆಳ್ತಂಗಡಿ ಇದರ ಸಂಚಾಲಕರಾದ ಶ್ರೀ ಆನಂದ ಗೌಡ ಇವರು ಪಾಲ್ಗೊಳ್ಳಲಿದ್ದಾರೆ.

Advertisement

ಕಾರ್ಯಕ್ರಮದಲ್ಲಿ ಗಾಯಕ, ಚಲನಚಿತ್ರ ನಟ ಮೈಮ್ ರಾಮ್ ದಾಸ್ ಅವರಿಂದ ತತ್ವ ಗೀತೆಗಳ ಗಾಯನ ಪ್ರಸ್ತುತಿ ಇದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement
Tags :
Advertisement