For the best experience, open
https://m.newskannada.com
on your mobile browser.
Advertisement

ʼಇಂಡಿಯಾʼ ಗೆದ್ದರೆ ಸಿಎಎ, ಎನ್​ಆರ್​ಸಿ ರದ್ದು: ಪ್ರಣಾಳಿಕೆಯಲ್ಲಿ ದೀದಿ ಘೋಷಣೆ

ಲೋಕಸಭಾ ಚುನಾವಣೆ ಹಿನ್ನಲೆ ಪ್ರತಿ ಪಕ್ಷಗಳು ತಮ್ಮ ಪ್ರಣಾಳಿಗಳನ್ನು ಬಿಡುಗಡೆ ಮಾಡಿದ್ದು ಇದೀಗ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ಕೂಡ ಪ್ರಣಾಳಿಕೆ ಬಿಡುಗಡೆ ಮಾಡಿದೆ.
05:53 PM Apr 17, 2024 IST | Nisarga K
ʼಇಂಡಿಯಾʼ ಗೆದ್ದರೆ ಸಿಎಎ  ಎನ್​ಆರ್​ಸಿ ರದ್ದು  ಪ್ರಣಾಳಿಕೆಯಲ್ಲಿ ದೀದಿ ಘೋಷಣೆ
ಟಿಎಂಸಿ ಪ್ರಣಾಳಿಕೆ ಬಿಡುಗಡೆ : ʻಇಂಡಿಯಾʼ ಅಧಿಕಾರಕ್ಕೆ ಬಂದರೆ ಸಿಎಎ,ಯುಸಿಸಿ ರದ್ದು

ಕೋಲ್ಕೊತಾ: ಲೋಕಸಭಾ ಚುನಾವಣೆ ಹಿನ್ನಲೆ ಪ್ರತಿ ಪಕ್ಷಗಳು ತಮ್ಮ ಪ್ರಣಾಳಿಗಳನ್ನು ಬಿಡುಗಡೆ ಮಾಡಿದ್ದು ಇದೀಗ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ಕೂಡ ಪ್ರಣಾಳಿಕೆ ಬಿಡುಗಡೆ ಮಾಡಿದೆ. “ಇಂಡಿಯಾ ಒಕ್ಕೂಟವು ಅಧಿಕಾರಕ್ಕೆ ಬಂದರೆ ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ರದ್ದುಗೊಳಿಲಾಗುವುದು” ಎಂಬುದಾಗಿ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದೆ. “ದೀದಿಯ ಶಪಥಗಳು” ಎಂಬ ಹೆಸರಿನ ಪ್ರಣಾಳಿಕೆಯನ್ನು ಮಮತಾ ಬ್ಯಾನರ್ಜಿ ಅವರ ನೇತೃತ್ವದಲ್ಲಿ ಟಿಎಂಸಿ ನಾಯಕರು ಬಿಡುಗಡೆ ಮಾಡಿದ್ದಾರೆ.

Advertisement

ಟಿಎಂಸಿ ಪ್ರಣಾಳಿಕೆಯಲ್ಲಿ ಘೋಷಿಸಲಾದ ಅಂಶಗಳಿವು,
ಕೇಂದ್ರದಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಪೌರತ್ವ ತಿದ್ದುಪಡಿ ಕಾಯ್ದೆ ರದ್ದು
ಏಕರೂಪ ನಾಗರಿಕ ಸಂಹಿತೆ (UCC), ಎನ್‌ಆರ್‌ಸಿಯನ್ನು ರದ್ದುಗೊಳಿಸಲಾಗುವುದು
ಬಡವರಿಗೆ ವರ್ಷಕ್ಕೆ 10 ಅಡುಗೆ ಅನಿಲ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲಾಗುವುದು
ಎಲ್ಲ ಬಡವರಿಗೂ ಉಚಿತವಾಗಿ ಮನೆ ನಿರ್ಮಿಸಿ ಕೊಡಲಾಗುವುದು
ಕಾರ್ಮಿಕರು, ದಿನಗೂಲಿ ನೌಕರರ ಕೂಲಿಯನ್ನು 400 ರೂ.ಗೆ ಏರಿಕೆ ಮಾಡಲಾಗುವುದು
ರೇಷನ್‌ ಕಾರ್ಡ್‌ ಹೊಂದಿದವರಿಗೆ ಮನೆ ಬಾಗಿಲಿಗೆ ಉಚಿತವಾಗಿ ಪಡಿತರ ಪೂರೈಸಲಾಗುವುದು
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಹೆಚ್ಚಿನ ಹಣಕಾಸು ನೆರವು
ರೈತರಿಗಾಗಿ ಎಂ.ಎಸ್.ಸ್ವಾಮಿನಾಥನ್‌ ಆಯೋಗದ ಶಿಫಾರಸುಗಳನ್ನು ಜಾರಿಗೆ ತರುವುದು

Advertisement

Advertisement
Tags :
Advertisement