For the best experience, open
https://m.newskannada.com
on your mobile browser.
Advertisement

ಮತದಾನ ಮಾಡದವರನ್ನು ಮತಪಟ್ಟಿಯಿಂದ ತೆಗೆದುಹಾಕಿ: ನಟ ಅನಂತ್ ನಾಗ್

ಮತಹಾಕದವರ ವಿರುದ್ಧ ಹಿರಿಯ ನಟ ಅನಂತ್ ನಾಗ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
05:43 PM Apr 26, 2024 IST | Chaitra Kulal
ಮತದಾನ ಮಾಡದವರನ್ನು ಮತಪಟ್ಟಿಯಿಂದ ತೆಗೆದುಹಾಕಿ  ನಟ ಅನಂತ್ ನಾಗ್

ಬೆಂಗಳೂರು: ಮತಹಾಕದವರ ವಿರುದ್ಧ ಹಿರಿಯ ನಟ ಅನಂತ್ ನಾಗ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಅನಂತ್‌ನಾಗ್‌ ಅವರು ಅಶ್ವಥ್ ನಗರದ ಪುಟ್ಟಯ್ಯ ಕಾಂಪೌಂಡ್ ಅಂಗನವಾಡಿ ಕೇಂದ್ರದಲ್ಲಿ ಮತ ಚಲಾಯಿಸಿದರು. ನಂತರ ಮಾತನಾಡಿದ ಅವರು  ಮತದಾನ ಮಾಡದವರನ್ನ ಮತಪಟ್ಟಿಯಿಂದ ತೆಗೆದುಹಾಕಿ. ಕಳೆದ ಐದು ಚುನಾವಣೆಗಳಿಂದ ಇದರ ಬಗ್ಗೆಯೇ ಚರ್ಚೆ ಆಗುತ್ತಲೇ ಇದೆ. ಯಾರು ನಿರಂತರವಾಗಿ ಮತ ಹಾಕುವುದಿಲ್ಲವೋ ಅವರನ್ನ ಮತಪಟ್ಟಿಯಿಂದಲೇ ತೆಗೆದುಹಾಕಿ ಎಂದರು.

ಅಲ್ಲಿ ಯೋಧರು ದೇಶಕ್ಕಾಗಿ ಪ್ರಾಣ ಕೊಡುತ್ತಿದ್ದಾರೆ. ಇವರು ಮನೆಯಿಂದ ಹೊರಬಂದು ಒಂದು ಓಟ್ ಮಾಡೋಕಾಗಲ್ವ? ಸ್ವಾತಂತ್ರ್ಯ ಬಂದು 75 ವರ್ಷ ಆಯ್ತು. ಇನ್ನೂ ಎಂಥಹ ಜಾಗೃತಿ ಬೇಕು? ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

Advertisement
Tags :
Advertisement