For the best experience, open
https://m.newskannada.com
on your mobile browser.
Advertisement

ಗಣರಾಜ್ಯೋತ್ಸವಕ್ಕೆ ನಥಿಂಗ್ ಫೋನ್ 2 ಮೇಲೆ ಭರ್ಜರಿ ಆಫರ್

ಭಾರತದಲ್ಲಿ ಗಣರಾಜ್ಯೋತ್ಸವಕ್ಕೆ ಲಂಡನ್ ಮೂಲದ ಟೆಕ್ ಬ್ರ್ಯಾಂಡ್ 'ನಥಿಂಗ್' ತನ್ನ ವಿಶಿಷ್ಟ ವಿನ್ಯಾಸದ 'ಫೋನ್ 2' ಗೆ ಫ್ಲಿಪ್‌ಕಾರ್ಟ್ ತಾಣದ ಮೂಲಕ ಆಕರ್ಷಕ ಕೊಡುಗೆಗಳನ್ನು ನೀಡಲಿದೆ. 
12:33 PM Jan 18, 2024 IST | Ramya Bolantoor
ಗಣರಾಜ್ಯೋತ್ಸವಕ್ಕೆ  ನಥಿಂಗ್ ಫೋನ್ 2 ಮೇಲೆ  ಭರ್ಜರಿ ಆಫರ್

ನವದೆಹಲಿ: ಭಾರತದಲ್ಲಿ ಗಣರಾಜ್ಯೋತ್ಸವಕ್ಕೆ ಲಂಡನ್ ಮೂಲದ ಟೆಕ್ ಬ್ರ್ಯಾಂಡ್ 'ನಥಿಂಗ್' ತನ್ನ ವಿಶಿಷ್ಟ ವಿನ್ಯಾಸದ 'ಫೋನ್ 2' ಗೆ ಫ್ಲಿಪ್‌ಕಾರ್ಟ್ ತಾಣದ ಮೂಲಕ ಆಕರ್ಷಕ ಕೊಡುಗೆಗಳನ್ನು ನೀಡಲಿದೆ.

Advertisement

₹44,999 ಬೆಲೆಯ ಆಂಡ್ರಾಯ್ಡ್   ಫೋನ್ (2), 12 GB/256 GB ಆವೃತ್ತಿಯು ₹34,999ಗೆ ಸಿಗಲಿದೆ. ಇದರಲ್ಲಿ ನಥಿಂಗ್ ಕಾರ್ಯಾಚರಣಾ ವ್ಯವಸ್ಥೆ 2.5, ಹೊಸ ಗ್ಲಿಫ್ ಇಂಟರ್‌ಫೇಸ್ ಹಾಗೂ ಎರಡು 50MP+50MP ಸಾಮರ್ಥ್ಯದ ಪ್ರಧಾನ ಕ್ಯಾಮೆರಾ, 32 MP ಸಾಮರ್ಥ್ಯದ ಸೆಲ್ಫೀ ಕ್ಯಾಮೆರಾ ಲಭ್ಯವಿದೆ.

ನಥಿಂಗ್ OS 2.5 ಮೂಲಕ ಗ್ರಾಹಕರು ಗ್ರಿಡ್ ವಿನ್ಯಾಸವನ್ನು, ವಿಜೆಟ್ ಗಾತ್ರಗಳನ್ನು ಮತ್ತು ವರ್ಣಮಯ ಥೀಮ್‌ಗಳನ್ನು   ಬದಲಾಯಿಸಿಕೊಳ್ಳಬಹುದು.

Advertisement

ಸ್ನ್ಯಾಪ್‌ಡ್ರ್ಯಾಗನ್ 8+1ನೇ ಪೀಳಿಗೆಯ ಪ್ರೊಸೆಸರ್ ಇದೆ.  4700 mAh ಬ್ಯಾಟರಿ ಸಾಮರ್ಥ್ಯವಿರುವ, ಫೋನ್ (2), ವೇಗದ ಚಾರ್ಜಿಂಗ ವ್ಯವಸ್ಥೆಯನ್ನು ಹೊಂದಿದೆ.  20 ನಿಮಿಷಗಳೊಳಗೆ ಶೇ.50ರಷ್ಟು ಫೋನ್ ಚಾರ್ಜ್ ಮಾಡಬಹುದು. 6.7 ಇಂಚಿನ LTPO AMOLED ಡಿಸ್‌ಪ್ಲೇ ಹೊಂದಿರುವ ಈ ಫೋನ್  ಕಡುಬೂದು ಹಾಗೂ ಬಿಳಿ ಬಣ್ಣಗಳಲ್ಲಿ ಸಿಗಲಿದೆ.

ಇದರೊಂದಿಗೆ, 65W CMF ವೇಗದ ಚಾರ್ಜರ್‌ಗೆ 1 ಸಾವಿರ ರೂ. ರಿಯಾಯಿತಿಯನ್ನೂ ನೀಡಿದೆ. ₹2,999 ಬೆಲೆಯ ಈ ಚಾರ್ಜರ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ಫೋನ್ (2) ಖರೀದಿಸುವವರಿಗೆ   ₹1,999 ಗೆ  ಸಿಗಲಿದೆ. ಈ ಜಾರ್ಜರ್‌ನಲ್ಲಿ ಯುಎಸ್‌ಬಿ-ಸಿ ಪೋರ್ಟ್ ಹಾಗೂ ಯುಎಸ್‌ಬಿ-ಎ ಪೋರ್ಟ್‌ಗಳಿರುವುದರಿಂದ ಎರಡು ಮಾದರಿಯ ಚಾರ್ಜರನ್ನು ಬಳಸಿ  ಏಕಕಾಲದಲ್ಲಿ ಚಾರ್ಜ್ ಮಾಡಬಹುದು. ಈ ಚಾರ್ಜರ್ ಬಳಸಿ ಫೋನ್, ಟ್ಯಾಬ್ಲೆಟ್, ಇಯರ್‌ಬಡ್, ನೋಟ್‌ಬುಕ್ ಮುಂತಾದವನ್ನು ಚಾರ್ಜ್ ಮಾಡಬಹುದು ಎಂದು ಪಕ್ರಟನೆಯಲ್ಲಿ ತಿಳಿಸಿದೆ.

Advertisement
Tags :
Advertisement