ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಗಣರಾಜ್ಯೋತ್ಸವಕ್ಕೆ ನಥಿಂಗ್ ಫೋನ್ 2 ಮೇಲೆ ಭರ್ಜರಿ ಆಫರ್

ಭಾರತದಲ್ಲಿ ಗಣರಾಜ್ಯೋತ್ಸವಕ್ಕೆ ಲಂಡನ್ ಮೂಲದ ಟೆಕ್ ಬ್ರ್ಯಾಂಡ್ 'ನಥಿಂಗ್' ತನ್ನ ವಿಶಿಷ್ಟ ವಿನ್ಯಾಸದ 'ಫೋನ್ 2' ಗೆ ಫ್ಲಿಪ್‌ಕಾರ್ಟ್ ತಾಣದ ಮೂಲಕ ಆಕರ್ಷಕ ಕೊಡುಗೆಗಳನ್ನು ನೀಡಲಿದೆ. 
12:33 PM Jan 18, 2024 IST | Ramya Bolantoor

ನವದೆಹಲಿ: ಭಾರತದಲ್ಲಿ ಗಣರಾಜ್ಯೋತ್ಸವಕ್ಕೆ ಲಂಡನ್ ಮೂಲದ ಟೆಕ್ ಬ್ರ್ಯಾಂಡ್ 'ನಥಿಂಗ್' ತನ್ನ ವಿಶಿಷ್ಟ ವಿನ್ಯಾಸದ 'ಫೋನ್ 2' ಗೆ ಫ್ಲಿಪ್‌ಕಾರ್ಟ್ ತಾಣದ ಮೂಲಕ ಆಕರ್ಷಕ ಕೊಡುಗೆಗಳನ್ನು ನೀಡಲಿದೆ.

Advertisement

₹44,999 ಬೆಲೆಯ ಆಂಡ್ರಾಯ್ಡ್   ಫೋನ್ (2), 12 GB/256 GB ಆವೃತ್ತಿಯು ₹34,999ಗೆ ಸಿಗಲಿದೆ. ಇದರಲ್ಲಿ ನಥಿಂಗ್ ಕಾರ್ಯಾಚರಣಾ ವ್ಯವಸ್ಥೆ 2.5, ಹೊಸ ಗ್ಲಿಫ್ ಇಂಟರ್‌ಫೇಸ್ ಹಾಗೂ ಎರಡು 50MP 50MP ಸಾಮರ್ಥ್ಯದ ಪ್ರಧಾನ ಕ್ಯಾಮೆರಾ, 32 MP ಸಾಮರ್ಥ್ಯದ ಸೆಲ್ಫೀ ಕ್ಯಾಮೆರಾ ಲಭ್ಯವಿದೆ.

ನಥಿಂಗ್ OS 2.5 ಮೂಲಕ ಗ್ರಾಹಕರು ಗ್ರಿಡ್ ವಿನ್ಯಾಸವನ್ನು, ವಿಜೆಟ್ ಗಾತ್ರಗಳನ್ನು ಮತ್ತು ವರ್ಣಮಯ ಥೀಮ್‌ಗಳನ್ನು   ಬದಲಾಯಿಸಿಕೊಳ್ಳಬಹುದು.

Advertisement

ಸ್ನ್ಯಾಪ್‌ಡ್ರ್ಯಾಗನ್ 8 1ನೇ ಪೀಳಿಗೆಯ ಪ್ರೊಸೆಸರ್ ಇದೆ.  4700 mAh ಬ್ಯಾಟರಿ ಸಾಮರ್ಥ್ಯವಿರುವ, ಫೋನ್ (2), ವೇಗದ ಚಾರ್ಜಿಂಗ ವ್ಯವಸ್ಥೆಯನ್ನು ಹೊಂದಿದೆ.  20 ನಿಮಿಷಗಳೊಳಗೆ ಶೇ.50ರಷ್ಟು ಫೋನ್ ಚಾರ್ಜ್ ಮಾಡಬಹುದು. 6.7 ಇಂಚಿನ LTPO AMOLED ಡಿಸ್‌ಪ್ಲೇ ಹೊಂದಿರುವ ಈ ಫೋನ್  ಕಡುಬೂದು ಹಾಗೂ ಬಿಳಿ ಬಣ್ಣಗಳಲ್ಲಿ ಸಿಗಲಿದೆ.

ಇದರೊಂದಿಗೆ, 65W CMF ವೇಗದ ಚಾರ್ಜರ್‌ಗೆ 1 ಸಾವಿರ ರೂ. ರಿಯಾಯಿತಿಯನ್ನೂ ನೀಡಿದೆ. ₹2,999 ಬೆಲೆಯ ಈ ಚಾರ್ಜರ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ಫೋನ್ (2) ಖರೀದಿಸುವವರಿಗೆ   ₹1,999 ಗೆ  ಸಿಗಲಿದೆ. ಈ ಜಾರ್ಜರ್‌ನಲ್ಲಿ ಯುಎಸ್‌ಬಿ-ಸಿ ಪೋರ್ಟ್ ಹಾಗೂ ಯುಎಸ್‌ಬಿ-ಎ ಪೋರ್ಟ್‌ಗಳಿರುವುದರಿಂದ ಎರಡು ಮಾದರಿಯ ಚಾರ್ಜರನ್ನು ಬಳಸಿ  ಏಕಕಾಲದಲ್ಲಿ ಚಾರ್ಜ್ ಮಾಡಬಹುದು. ಈ ಚಾರ್ಜರ್ ಬಳಸಿ ಫೋನ್, ಟ್ಯಾಬ್ಲೆಟ್, ಇಯರ್‌ಬಡ್, ನೋಟ್‌ಬುಕ್ ಮುಂತಾದವನ್ನು ಚಾರ್ಜ್ ಮಾಡಬಹುದು ಎಂದು ಪಕ್ರಟನೆಯಲ್ಲಿ ತಿಳಿಸಿದೆ.

Advertisement
Tags :
LatestNewsNewsKannadaನವದೆಹಲಿ
Advertisement
Next Article