For the best experience, open
https://m.newskannada.com
on your mobile browser.
Advertisement

ದೇಶದಲ್ಲಿ ಇಂದು 75ನೇ ಗಣರಾಜ್ಯೋತ್ಸವದ ಸಂಭ್ರಮ

ದೇಶದಲ್ಲಿ ಇಂದು 75ನೇ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದೆ. ದೆಹಲಿಯ ಕರ್ತವ್ಯ ಪಥದಲ್ಲಿ ಪರೇಡ್​​​ಗೆ ಕ್ಷಣಗಣನೆ ಶುರುವಾಗಿದೆ. ಕಳೆದ ಬಾರಿಯಂತೆ ಇಂದು ಕೂಡ ಗಣರಾಜ್ಯೋತ್ಸವ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಲಿದೆ. ದೇಶದ ಮೂಲೆ ಮೂಲೆಯಲ್ಲಿಂದ ಗಣತಂತ್ರ ಸಂಭ್ರಮ ಮನೆ ಮಾಡಿದೆ.
07:23 AM Jan 26, 2024 IST | Ashitha S
ದೇಶದಲ್ಲಿ ಇಂದು 75ನೇ ಗಣರಾಜ್ಯೋತ್ಸವದ ಸಂಭ್ರಮ

ನವದೆಹಲಿ: ದೇಶದಲ್ಲಿ ಇಂದು 75ನೇ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದೆ. ದೆಹಲಿಯ ಕರ್ತವ್ಯ ಪಥದಲ್ಲಿ ಪರೇಡ್​​​ಗೆ ಕ್ಷಣಗಣನೆ ಶುರುವಾಗಿದೆ. ಕಳೆದ ಬಾರಿಯಂತೆ ಇಂದು ಕೂಡ ಗಣರಾಜ್ಯೋತ್ಸವ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಲಿದೆ. ದೇಶದ ಮೂಲೆ ಮೂಲೆಯಲ್ಲಿಂದ ಗಣತಂತ್ರ ಸಂಭ್ರಮ ಮನೆ ಮಾಡಿದೆ.

Advertisement

ಎಲ್ಲೆಲ್ಲೂ ಜನಗಣಮನ ಗುನುಗುತ್ತಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಂತೂ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಸಂಸತ್ ಭವನ ಸೇರಿದಂತೆ ಸರ್ಕಾರಿ ಕಟ್ಟಡಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.

ಗಣರಾಜ್ಯೋತ್ಸವವು ಜನವರಿ 26, 1950 ರಂದು ಭಾರತದ ಸಂವಿಧಾನದ ಅಂಗೀಕಾರವನ್ನು ನೆನಪಿಸುತ್ತದೆ. ಭಾರತವು 1947 ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಪಡೆದ ನಂತರ ಅಂದರೆ ಜನವರಿ 26, 1950ರಲ್ಲಿ ಸಂವಿಧಾನವನ್ನು ಜಾರಿಗೆ ತಂದಿತು.

Advertisement

ಅಂದಿನಿಂದ ರಾಜ ಪ್ರಭುತ್ವವನ್ನು ತ್ಯಜಿಸಿ ಪ್ರಜಾಪ್ರಭುತ್ವ ಅಂದರೆ ಸಾರ್ವಭೌಮ ದೇಶವಾಯಿತು. ಈ ಈ ಸುಸಂದರ್ಭವನ್ನು ಗಣರಾಜ್ಯ ಎಂದು ಘೋಷಿಸಿ ಅಂದಿನಿಂದ ಜನವರಿ 26 ಅನ್ನು ರಿಪಬ್ಲಿಕ್‌ ಡೇ ಎನ್ನುವುದಾಗಿ ಆಚರಿಸಲಾಗುತ್ತದೆ.

ಸಂವಿಧಾನ ಸಭೆಯು ತನ್ನ ಮೊದಲ ಅಧಿವೇಶನವನ್ನು ಡಿಸೆಂಬರ್ 9, 1946 ರಂದು ಮತ್ತು ಕೊನೆಯ ಅಧಿವೇಶನವನ್ನು ನವೆಂಬರ್ 26, 1949 ರಂದು ನಡೆಸಿತು. ಆಮೇಲೆ ಒಂದು ವರ್ಷದ ನಂತರ ಸಂವಿಧಾನವನ್ನು ಅಂಗೀಕರಿಸಲಾಯಿತು.

ಇನ್ನು 1929 ರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ, ಪೂರ್ಣ ಸ್ವರಾಜ್ ಘೋಷಣೆ ಅಥವಾ “ಭಾರತದ ಸ್ವಾತಂತ್ರ್ಯದ ಘೋಷಣೆ” ಯನ್ನು ಘೋಷಿಸಲಾಯಿತು, ಮತ್ತು 26 ಜನವರಿಯನ್ನು 1930 ರಲ್ಲಿ ಸ್ವಾತಂತ್ರ್ಯ ದಿನವೆಂದು ಘೋಷಿಸಲಾಯಿತು. ಆದರೆ ಈ ಹೆಬ್ಬಯಕೆ 1947ರ ವರೆಗೂ ಈಡೇರಲಿಲ್ಲ. ನಂತರ ಸ್ವಾತಂತ್ರ್ಯ ಸಿಕ್ಕು ಸಂವಿಧಾನ ಜಾರಿ ಮಾಡುವ ಸಮಯದಲ್ಲಿ ಹಳೆಯ ನಿರ್ಣಯದಂತೆ ಜನವರಿ 26 ಅನ್ನು ಆಯ್ಕೆ ಮಾಡಿಕೊಂಡು ಸಂವಿಧಾನವನ್ನು ಜಾರಿಗೊಳಿಸಲಾಯಿತು. ಅಂದಿನಿಂದ ದೇಶ ಗಣರಾಜ್ಯವಾಗಿ ಹೊರಹೊಮ್ಮಿತು.
ದೇಶದಲ್ಲಿ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನದಂದು, ಅಧ್ಯಕ್ಷರು ರಾಷ್ಟ್ರಧ್ವಜವನ್ನು ಹಾರಿಸುತ್ತಾರೆ ಮತ್ತು ನಂತರ ಅದ್ಭುತವಾದ ಮಿಲಿಟರಿ ಮತ್ತು ಸಾಂಸ್ಕೃತಿಕ ವೈಭವವನ್ನು ಪ್ರದರ್ಶಿಸುತ್ತಾರೆ. ಹಾಗೆಯೇ ಭಾರತದ ರಾಷ್ಟ್ರಪತಿಗಳು ದೇಶದ ಅರ್ಹ ನಾಗರಿಕರಿಗೆ ಪದ್ಮ ಪ್ರಶಸ್ತಿಗಳನ್ನು ವಿತರಿಸುತ್ತಾರೆ ಮತ್ತು ವೀರ ಸೈನಿಕರಿಗೆ ಪರಮವೀರ ಚಕ್ರ, ಅಶೋಕ ಚಕ್ರ ಮತ್ತು ವೀರ ಚಕ್ರವನ್ನು ನೀಡಲಾಗುತ್ತದೆ.

ಗಣರಾಜ್ಯೋತ್ಸವ 2024ರ ಪರೇಡ್ ಥೀಮ್ ‘ವಿಕ್ಷಿತ್ ಭಾರತ್’ ಮತ್ತು ‘ಭಾರತ್ - ಲೋಕತಂತ್ರ ಕಿ ಮಾತೃಕಾ’, ಇದು ಪ್ರಜಾಪ್ರಭುತ್ವದ ಪೋಷಕರಾಗಿ ಭಾರತದ ಪಾತ್ರವನ್ನು ಒತ್ತಿಹೇಳುತ್ತದೆ ಮತ್ತು ಜನವರಿ 26 ರಂದು ಶುಕ್ರವಾರ ಬೆಳಿಗ್ಗೆ 10:30 ಕ್ಕೆ ನವದೆಹಲಿಯ ಕರ್ತವ್ಯ ಪಥ್‌ನಲ್ಲಿ ಪ್ರಾರಂಭವಾಗಲಿದೆ.

Advertisement
Tags :
Advertisement