ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಅಲೋಶಿಯಸ್ ವಿವಿಯ ಪ್ರಥಮ ಕುಲಪತಿಯಾಗಿ ಡಾ. ಪ್ರವೀಣ್ ಮಾರ್ಟಿಸ್ ನೇಮಕ

ಸಂತ ಅಲೋಶಿಯಸ್ (ಸ್ವಾಯತ್ತ) ಕಾಲೇಜು ಇತ್ತೀಚೆಗೆ ಯುಜಿಸಿಯಿಂದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯವೆಂದು ಮಾನ್ಯತೆ ಪಡೆದಿದ್ದು, ಕಾಲೇಜಿನ ಪ್ರಾಂಶುಪಾಲರಾಗಿದ್ದ ರೆ.ಡಾ. ಪ್ರವೀಣ್ ಮಾರ್ಟಿಸ್, ಎಸ್.ಜೆ. ಅವರು ಅದರ ಪ್ರಥಮ ಕುಲಪತಿಯಾಗಿ ನೇಮಕಗೊಂಡಿರುತ್ತಾರೆ ಎಂದು ಕರ್ನಾಟಕ ಜೆಸ್ವಿಟ್ ಪ್ರಾಂತ್ಯದ ಪ್ರೊವಿನ್ಶಿಯಲ್ ಹಾಗೂ ಕುಲಾಧಿಪತಿಯವರಾದ ವಂ. ಫಾ. ಡಯನೀಶಿಯಸ್ ವಾಜ್‍ರವರು ಇತ್ತೀಚೆಗೆ ಔಪಚಾರಿಕವಾಗಿ ಘೋಷಿಸಿದ್ದಾರೆ.
04:48 PM Mar 19, 2024 IST | Ashitha S

ಮಂಗಳೂರು: ಸಂತ ಅಲೋಶಿಯಸ್ (ಸ್ವಾಯತ್ತ) ಕಾಲೇಜು ಇತ್ತೀಚೆಗೆ ಯುಜಿಸಿಯಿಂದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯವೆಂದು ಮಾನ್ಯತೆ ಪಡೆದಿದ್ದು, ಕಾಲೇಜಿನ ಪ್ರಾಂಶುಪಾಲರಾಗಿದ್ದ ರೆ.ಡಾ. ಪ್ರವೀಣ್ ಮಾರ್ಟಿಸ್, ಎಸ್.ಜೆ. ಅವರು ಅದರ ಪ್ರಥಮ ಕುಲಪತಿಯಾಗಿ ನೇಮಕಗೊಂಡಿರುತ್ತಾರೆ ಎಂದು ಕರ್ನಾಟಕ ಜೆಸ್ವಿಟ್ ಪ್ರಾಂತ್ಯದ ಪ್ರೊವಿನ್ಶಿಯಲ್ ಹಾಗೂ ಕುಲಾಧಿಪತಿಯವರಾದ ವಂ. ಫಾ. ಡಯನೀಶಿಯಸ್ ವಾಜ್‍ರವರು ಇತ್ತೀಚೆಗೆ ಔಪಚಾರಿಕವಾಗಿ ಘೋಷಿಸಿದ್ದಾರೆ.

Advertisement

ಮೇ 20, 1974 ರಂದು ಉಡುಪಿ ಜಿಲ್ಲೆಯ ಶಂಕರಪುರದಲ್ಲಿ ಜನಿಸಿದ ವಂ. ಡಾ. ಪ್ರವೀಣ್ ಮಾರ್ಟಿಸ್ ರವರು, ಶಂಕರಪುರದ ಸಂತ ಜಾನ್ಸ್ ಶಿಕ್ಷಣ ಸಂಸ್ಥೆಗಳಲ್ಲಿ ತಮ್ಮ ಶಿಕ್ಷಣವನ್ನು ಪಡೆದರು ಮತ್ತು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ವಿಜ್ಞಾನದಲ್ಲಿ ಪದವಿ ಪಡೆದರು. ಮುಂದೆ, ಅವರು ಬೆಂಗಳೂರಿನ ಪ್ರತಿಷ್ಠಿತ ಸಂತ ಜೋಸೆಫ್ ಕಾಲೇಜಿನಲ್ಲಿ ರಸಾಯನಶಾಸ್ತ್ರದಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು. ನಂತರ ಬೆಲ್ಜಿಯಂನ ನೆಮ್ಯೂರ್ ವಿಶ್ವವಿದ್ಯಾಲಯದಿಂದ ನ್ಯಾನೊಸೈನ್ಸ್‌ನಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದರು.

ಡಾ. ಪ್ರವೀಣ್ ಮಾರ್ಟಿಸ್ ರವರು ಇದುವರೆಗೆ ಹಲವಾರು ನಾಯಕತ್ವದ ಪಾತ್ರಗಳನ್ನು ಅಲಂಕರಿಸಿದ್ದಾರೆ. ಅದರಲ್ಲಿ ಬೆಂಗಳೂರಿನ ಸಂತ ಜೋಸೆಫ್ಸ್ ಸಂಧ್ಯಾ ಕಾಲೇಜಿನಲ್ಲಿ ಕರೆಸ್ಪಾಂಡೆಂಟ್ ಮತ್ತು ವಿದ್ಯಾರ್ಥಿ ಸಲಹೆಗಾರರಾಗಿ, ಸಂತ ಜೋಸೆಫ್ ಕಾಲೇಜಿನಲ್ಲಿ (ಪ್ರಸ್ತುತ ವಿಶ್ವವಿದ್ಯಾನಿಲಯ) ರಸಾಯನಶಾಸ್ತ್ರದ ಪ್ರಾಧ್ಯಾಪಕರಾಗಿ, ಸಂತ ಜೋಸೆಫ್ಸ್‌ನಲ್ಲಿ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನೆಯ ನಿರ್ದೇಶಕರಾಗಿ, ಕಾಲೇಜಿನ ರೆಕ್ಟರ್ ಮತ್ತು ಪ್ರಾಂಶುಪಾಲರಾಗಿ, ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ ಡಿಡಿಯು ಕೌಶಲ್ ಕೇಂದ್ರದ ನಿರ್ದೇಶಕರಾಗಿ ಮತ್ತು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿರುತ್ತಾರೆ.

Advertisement

ವಿವಿಧ ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಾಯಕತ್ವದ ಸ್ಥಾನಗಳಲ್ಲಿರುವುದರ ಜೊತೆಗೆ, ಪ್ರವೀಣ್ ಉತ್ಕೃಷ್ಟ ಸಂಶೋಧಕರಾಗಿದ್ದಾರೆ. ಅಲ್ಲದೆ ಪ್ರಖ್ಯಾತ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಶೋಧನಾ ನಿಯತಕಾಲಿಕೆಗಳಲ್ಲಿ ಹಲವಾರು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಅವರು ಭಾರತದಲ್ಲಿನ ಸ್ವಾಯತ್ತ ಕಾಲೇಜುಗಳ ಮೌಲ್ಯಮಾಪನಕ್ಕಾಗಿ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಕೌನ್ಸಿಲ್ (NAAC) ನಿಂದ ಅನುಮೋದಿತ ಮೌಲ್ಯಮಾಪಕರಾಗಿದ್ದಾರೆ.

Advertisement
Tags :
Dr Praveen MartisindiaKARNATAKALatestNewsST ALOYSIUSuniversityಬೆಂಗಳೂರುಮಂಗಳೂರು
Advertisement
Next Article