For the best experience, open
https://m.newskannada.com
on your mobile browser.
Advertisement

ಸಂತ್ರಸ್ತೆ ಅಪಹರಣ ಕೇಸ್‌ : ಭವಾನಿ ರೇವಣ್ಣ ಸಂಬಂಧಿ ಬಂಧನ

ಈಗಾಗಲೇ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ದೇಶಾದ್ಯಂತ ಬಾರಿ ಸದ್ದು ಮಾಡುತ್ತಿದೆ. ಅಲ್ಲದೇ ಅವರ ತಂದೆ ಸಚಿವ ಹೆಚ್​ಡಿ ರೇವಣ್ಣ ಅವರ ವಿರುದ್ಧವೂ ಕೇಸ್‌ ದಾಖಲಾಗಿದೆ.
10:23 AM May 04, 2024 IST | Nisarga K
ಸಂತ್ರಸ್ತೆ ಅಪಹರಣ ಕೇಸ್‌   ಭವಾನಿ ರೇವಣ್ಣ ಸಂಬಂಧಿ ಬಂಧನ
ಸಂತ್ರಸ್ತೆ ಅಪಹರಣ ಕೇಸ್‌ : ಭವಾನಿ ರೇವಣ್ಣ ಸಂಬಂಧಿ ಬಂಧನ

ಬೆಂಗಳೂರು: ಈಗಾಗಲೇ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ದೇಶಾದ್ಯಂತ ಬಾರಿ ಸದ್ದು ಮಾಡುತ್ತಿದೆ. ಅಲ್ಲದೇ ಅವರ ತಂದೆ ಸಚಿವ ಹೆಚ್​ಡಿ ರೇವಣ್ಣ ಅವರ ವಿರುದ್ಧವೂ ಕೇಸ್‌ ದಾಖಲಾಗಿದೆ. ಇದೀಗ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆ ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ನಾಪತ್ತೆಯಾಗಿರುವ ಸಂತ್ರಸ್ತೆಯ ಪುತ್ರ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಪ್ರಕರಣ ಸಂಬಂಧ ಭವಾನಿ ರೇವಣ್ಣ ಅವರ ಸಂಬಂಧಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ನಾಪತ್ತೆಯಾದ ಸಂತ್ರಸ್ತೆಯ ಪುತ್ರ ಶುಕ್ರವಾರ (ಮೇ 03) ರಂದು ಕೆಆರ್​ ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹೆಚ್​ಡಿ ರೇವಣ್ಣ ವಿರುದ್ಧ ಸೆಕ್ಷನ್ 364/A 365 ಹಾಗೂ 34 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ರೇವಣ್ಣರನ್ನು ಆರೋಪಿ ಸಂಖ್ಯೆ 1 ಎಂದೂ ಸತೀಶ್ ಬಾಬು ಎಂಬವರನ್ನು ಆರೋಪಿ ಸಂಖ್ಯೆ 2 ಎಂದೂ ನಮೂದಿಸಲಾಗಿದೆ. ಸಂತ್ರಸ್ತೆಯ ಪತ್ತೆಗೆ ವಿಶೇಷ ತನಿಖಾ ದಳ (SIT) ಶುಕ್ರವಾರ 40ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿತ್ತು.

ಎಸ್​ಐಟಿ ತಂಡಗಳು ಗುರುವಾರ ತಡರಾತ್ರಿಯಿಂದಲೇ ಮೈಸೂರು, ಹಾಸನ, ಮಂಡ್ಯ ಜಿಲ್ಲೆಗಳು ಮತ್ತು ಬೆಂಗಳೂರು ನಗರ ಸೇರಿದಂತೆ ವಿವಿಧಡೆ ಪರಿಶೀಲನೆ ನಡೆಸಿದ್ದವು. ಇನ್ನು ಪ್ರಕರಣ ಸಂಬಂಧ ಇಂದು ವಿಚಾರಣೆಗೆ ಹಾಜರಾಗುವಂತೆ ಭವಾನಿ ರೇವಣ್ಣ ಅವರಿಗೆ ಅಧಿಕಾರಿಗಳು ನೋಟಿಸ್​ ನೀಡಿದ್ದಾರೆ.

Advertisement

Advertisement
Tags :
Advertisement