For the best experience, open
https://m.newskannada.com
on your mobile browser.
Advertisement

ಅಂಬಾನಿ ಮನೆಯ ಮದುವೆಯಲ್ಲಿ ಕುಣಿಯಲಿರುವ ರಿಯಾನಾ: ಸಂಭಾವನೆ ಎಷ್ಟು ಗೊತ್ತಾ?

ಮುಕೇಶ್​ ಅಂಬಾನಿ ಅವರ ಮನೆಯಲ್ಲಿ ಶುಭ ಕಾರ್ಯ ನಡೆಯುತ್ತಿದೆ ಎಂದರೆ ಅದಕ್ಕೆ ದೇಶ ವಿದೇಶದ ಸೆಲೆಬ್ರಿಟಿಗಳು ಬಂದು ಮನರಂಜನಾ ಕಾರ್ಯಕ್ರಮ ನೀಡುತ್ತಾರೆ ಎನ್ನುವುದು ಎಲ್ಲರಿಗು ಗೊತ್ತಿರುವ ವಿಷಯ. 
01:35 PM Mar 01, 2024 IST | Ashika S
ಅಂಬಾನಿ ಮನೆಯ ಮದುವೆಯಲ್ಲಿ ಕುಣಿಯಲಿರುವ ರಿಯಾನಾ  ಸಂಭಾವನೆ ಎಷ್ಟು ಗೊತ್ತಾ

ಮುಂಬೈ: ಮುಕೇಶ್​ ಅಂಬಾನಿ ಅವರ ಮನೆಯಲ್ಲಿ ಶುಭ ಕಾರ್ಯ ನಡೆಯುತ್ತಿದೆ ಎಂದರೆ ಅದಕ್ಕೆ ದೇಶ ವಿದೇಶದ ಸೆಲೆಬ್ರಿಟಿಗಳು ಬಂದು ಮನರಂಜನಾ ಕಾರ್ಯಕ್ರಮ ನೀಡುತ್ತಾರೆ ಎನ್ನುವುದು ಎಲ್ಲರಿಗು ಗೊತ್ತಿರುವ ವಿಷಯ.

Advertisement

ಈಗ ಜನಪ್ರಿಯ ಗಾಯಕಿ ರಿಯಾನಾ  ಅವರು ಭಾರತಕ್ಕೆ ಬಂದಿದ್ದಾರೆ.

ಮುಕೇಶ್​ ಅಂಬಾನಿ ಹಾಗೂ ನೀತಾ ಅಂಬಾನಿ ದಂಪತಿಯ ಕಿರಿಯ ಪುತ್ರ ಅನಂತ್​ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​ ಅವರ ಮದುವೆಯಲ್ಲಿ ಮನರಂಜನೆ ನೀಡಲು ರಿಯಾನಾ ಅವರನ್ನು ಕರೆಸಲಾಗಿದೆ.

Advertisement

ಅವರಿಗೆ ಬರೋಬ್ಬರಿ 74 ಕೋಟಿ ರೂಪಾಯಿ ಸಂಭಾವನೆ  ನೀಡಲಾಗಿದೆ ಎಂದು ವರದಿ ಆಗಿದೆ. ಈ ಸುದ್ದಿ ಕೇಳಿ ಎಲ್ಲರೂ ಹೌಹಾರಿದ್ದಾರೆ. ಬಾರ್ಬೆಡೋಸ್​ ದೇಶದಿಂದ ಬಂದಿರುವ ರಿಯಾನಾಗೆ ಈಗ 36 ವರ್ಷ. ವಿಶ್ವದ ಅತಿ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ರಿಯಾನಾ ಹೆಸರು ಕೂಡ ಇದೆ.

ಅವರಿಗೆ ಹತ್ತಾರು ಕೋಟಿ ರೂಪಾಯಿ ಸಂಭಾವನೆ ನೀಡುತ್ತಿದ್ದಾರೆ. ಸಿಂಗರ್​ ರಿಯಾನಾ ಅವರು ಕೇವಲ ಒಂದು ದಿನ ಸಂಗೀತ ಕಾರ್ಯಕ್ರಮ ನೀಡಲು 74 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ ಎಂಬುದು ಅಚ್ಚರಿಯ ವಿಚಾರ.

ಅಚ್ಚರಿಯ ಸಂಗತಿ ಏನೆಂದರೆ, ಅವರ ಜೊತೆ ಟ್ರಕ್​ಗಟ್ಟಲೆ ಲಗೇಜ್​ ಕೂಡ ಭಾರತಕ್ಕೆ ಬಂದಿದೆ. ಗುಜರಾತ್​ನ ಜಾಮ್ನಗರ್​ ವಿಮಾನ ನಿಲ್ದಾಣದಲ್ಲಿ ರಿಯಾನಾ ಅವರ ಲಗೇಜ್​ಗಳನ್ನು ತೆಗೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್​ ಆಗಿದೆ.

Advertisement
Tags :
Advertisement