For the best experience, open
https://m.newskannada.com
on your mobile browser.
Advertisement

ರೊನಿ ಅರುಣ್ ಬರೆದ ಲೇಖನಗಳ ಸಂಗ್ರಹ ʻರಿಕ್ಷಾ ಡೈರಿʼ ಲೋಕಾರ್ಪಣೆ

ಮಾಂಡ್ ಸೊಭಾಣ್ ಪ್ರಕಾಶನದ 22 ನೇ ಪುಸ್ತಕ ರೊನಿ ಅರುಣ್ ಬರೆದ ಲೇಖನಗಳ ಸಂಗ್ರಹ ʻರಿಕ್ಷಾ ಡೈರಿʼ ಉಲ್ಲಾಳ ಸೋಮೇಶ್ವರದಲ್ಲಿರುವ ಪಶ್ಚಿಮ್ ಟ್ರಸ್ಟ್ ಸಭಾಂಗಣದಲ್ಲಿ ಮೇ 09 ರಂದು ಲೋಕಾರ್ಪನೆಗೊಂಡಿತು. ಹಿರಿಯ ಲೇಖಕಿ ಮತ್ತು ಪ್ರಕಾಶಕಿ ಗ್ಲೇಡಿಸ್ ರೇಗೊ ಇವರು ಪುಸ್ತಕ ಬಿಡುಗಡೆಗೊಳಿಸಿದರು.
03:47 PM May 12, 2024 IST | Ashitha S
ರೊನಿ ಅರುಣ್ ಬರೆದ ಲೇಖನಗಳ ಸಂಗ್ರಹ ʻರಿಕ್ಷಾ ಡೈರಿʼ ಲೋಕಾರ್ಪಣೆ

ಮಂಗಳೂರು:  ಮಾಂಡ್ ಸೊಭಾಣ್ ಪ್ರಕಾಶನದ 22 ನೇ ಪುಸ್ತಕ ರೊನಿ ಅರುಣ್ ಬರೆದ ಲೇಖನಗಳ ಸಂಗ್ರಹ ʻರಿಕ್ಷಾ ಡೈರಿʼ ಉಲ್ಲಾಳ ಸೋಮೇಶ್ವರದಲ್ಲಿರುವ ಪಶ್ಚಿಮ್ ಟ್ರಸ್ಟ್ ಸಭಾಂಗಣದಲ್ಲಿ ಮೇ 09 ರಂದು ಲೋಕಾರ್ಪನೆಗೊಂಡಿತು. ಹಿರಿಯ ಲೇಖಕಿ ಮತ್ತು ಪ್ರಕಾಶಕಿ ಗ್ಲೇಡಿಸ್ ರೇಗೊ ಇವರು ಪುಸ್ತಕ ಬಿಡುಗಡೆಗೊಳಿಸಿದರು.

Advertisement

ಮುಖ್ಯ ಅತಿಥಿ ಪಶ್ಚಿಮ್ ಟ್ರಸ್ಟ್ ಇದರ ನಿರ್ದೇಶಕ ರೋಹಿತ್ ಸಾಂಕ್ತುಸ್ ಶುಭ ಹಾರೈಸಿದರು. ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ, ಅಧ್ಯಕ್ಷ ಲುವಿ ಪಿಂಟೊ, ತೆಲೊಕಾ ಸಂಸ್ಥೆಯ ನಿರ್ದೇಶಕಿ ಕ್ಲಾರಾ ಡಿಕುನ್ಹಾ ಉಪಸ್ಥಿತರಿದ್ದರು. ಲೇಖಕ ರೊನಿ ಅರುಣ್ ಪ್ರಸ್ತಾವನೆಗೈದು ವಿತೊರಿ ಕಾರ್ಕಳ ನಿರೂಪಿಸಿದರು.

ರಿಕ್ಷಾ ಡೈರಿ ದಿರ್ವೆಂ ಕೊಂಕಣಿ ಮಾಸಿಕದಲ್ಲಿ ಪ್ರಕಟವಾದ 44 ಲೇಖನಗಳ ಸಂಗ್ರಹ. ಕಲಾವಿದ ವಿಲ್ಸನ್ ಕಯ್ಯಾರ್ ಮುಖಪುಟ ರಚಿಸಿದ್ದಾರೆ. ಈ ಮೊದಲು ʻಬಿಡಾರ್ʼ ಕತಾಸಂಕಲನ ಹಾಗೂ ʻಥಕಾನಾತ್‌ಲ್ಲೊ ಝುಜಾರಿʼ (ಜೀವನ ಚರಿತ್ರೆ) ಪುಸ್ತಕಗಳನ್ನು ರೊನಿ ಅರುಣ್ ಬರೆದಿದ್ದು ʻಥಕಾನಾತ್‌ಲ್ಲೊ ಝುಜಾರಿʼ ಪುಸ್ತಕಕ್ಕೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಲಭಿಸಿದೆ. ರಿಕ್ಷಾಡ ಡೈರಿ ಪುಸ್ತಕದ ರಿಯಾಯಿತಿ ಬೆಲೆ 100/- ಮಾತ್ರ. ಪುಸ್ತಕಕ್ಕಾಗಿ ಮಾಂಡ್ ಸೊಭಾಣ್ ಕಛೇರಿ ಅಥವಾ ಲೇಖಕರನ್ನು ಸಂಪರ್ಕಿಸಬಹುದು.

Advertisement

Advertisement
Tags :
Advertisement