ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

́ಕಾಂತಾರ 2́ ಪೋಸ್ಟರ್​ ರಿಲೀಸ್: ಉಗ್ರ ರೂಪದಲ್ಲಿ ದರ್ಶನ ನೀಡಿದ ರಿಷಬ್ ಶೆಟ್ಟಿ

ಕುಂದಾಪುರ: ಕಾಂತಾರ ರಿಷಬ್​ ಶೆಟ್ಟಿ ನಿರ್ದೇಶನದ ಮತ್ತು ನಟನೆಯ ಸಿನಿಮಾ. ಈ ಸಿನಿಮಾದ ಪ್ರೀಕ್ವೆಲ್​ಗೆ ಇಂದು ಮಹೂರ್ತ ಫಿಕ್ಸ್​ ಆಗಿದೆ. ಕುಂದಾಪುರ ಆನೆಗುಡ್ಡೆ ವಿನಾಯಕ ದೇವಸ್ಥಾನವನ್ನು ಹೂವಿನಿಂದ ಸಿಂಗರಿಸಿ ಚಿತ್ರತಂಡವು ಕುಂಭಾಸಿ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿದೆ.
12:36 PM Nov 27, 2023 IST | Ashitha S

ಕುಂದಾಪುರ: ಕಾಂತಾರ ರಿಷಬ್​ ಶೆಟ್ಟಿ ನಿರ್ದೇಶನದ ಮತ್ತು ನಟನೆಯ ಸಿನಿಮಾ. ಈ ಸಿನಿಮಾದ ಪ್ರೀಕ್ವೆಲ್​ಗೆ ಇಂದು ಮಹೂರ್ತ ಫಿಕ್ಸ್​ ಆಗಿದೆ. ಕುಂದಾಪುರ ಆನೆಗುಡ್ಡೆ ವಿನಾಯಕ ದೇವಸ್ಥಾನವನ್ನು ಹೂವಿನಿಂದ ಸಿಂಗರಿಸಿ ಚಿತ್ರತಂಡವು ಕುಂಭಾಸಿ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿದೆ.

Advertisement

ಇದರೊಂದಿಗೆ ಇಂದು ಬಹುನಿರೀಕ್ಷಿತ ಕಾಂತಾರ ಸಿನಿಮಾ ಮೊದಲ ಅಧ್ಯಾಯದ ಪೋಸ್ಟರ್​ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿದೆ. ಇದೀಗ  ಪೋಸ್ಟರ್​ ರಿಲೀಸ್​ ಮಾಡಿದೆ.  ಪೋಸ್ಟರ್‌ ನಲ್ಲಿರಿಷಬ್ ಶೆಟ್ಟಿ ಉಗ್ರ ರೂಪದಲ್ಲಿ ದರ್ಶನ ನೀಡಿದ್ದಾರೆ.

ಕಾಂತಾರ ಚಿತ್ರತಂಡ ರಿಲೀಸ್​ ಮಾಡಿದ ಹೊಸ ಫಸ್ಟ್​ಲುಕ್​​ನಲ್ಲಿ ರಿಷಬ್​ ಕೈಯಲ್ಲಿ ಕೊಡಲಿ ಮತ್ತು ತ್ರಿಶೂಲ ಹಿಡಿದು ಆರ್ಭಟಿಸುವ ದೃಶ್ಯವನ್ನು ಕಾಣಬಹುದಾಗಿದೆ. ಫಸ್ಟ್​ಲುಕ್​ನಲ್ಲಿ ​ ಶಿವನ ರೂಪ ಧರಿಸಿದಂತೆ  ಮೇಲ್ನೋಟಕ್ಕೆ ಕಾಣುತ್ತಿದೆ. ಸದ್ಯ ಫಸ್ಟ್​ ​ ರಿಲೀಸ್​ ಬಳಿಕ ಈ ಸಿನಿಮಾದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.

Advertisement

ಇನ್ನು ಫಸ್ಟ್​ಲುಕ್​ನಲ್ಲಿ ಕಾಳಗದ ಚಿತ್ರ ಕಂಡಿದೆ. ಮಾತ್ರವಲ್ಲದೆ ಆರು ಭಾಷೆಯಲ್ಲಿ ರಿಲೀಸ್​ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಬೆಂಗಾಲಿ, ಇಂಗ್ಲೀಷ್​ನಲ್ಲಿ ರಿಲೀಸ್​​ ಮಾಡಲು ಚಿತ್ರತಂಡ ಮುಂದಾಗಿದೆ.

Advertisement
Tags :
'ಕಾಂತಾರ 2'indiaKARNATAKALatestNewsNewsKannadaSANDALWOODಮಂಗಳೂರು
Advertisement
Next Article